ಬಿಗ್ ಬಾಸ್ ಶಶಿಗೆ ಸಾಥ್ ಕೊಟ್ಟ ಹಸಿರು ಸೇನೆ...ಮೆಹಬೂಬಾ ಟ್ರೇಲರ್ ರಿಲೀಸ್ ಮಾಡಿದ ರೈತರು

Mehbooba movie trailer: ಮಾರ್ಡನ್ ರೈತ ಶಶಿ ಮೆಹಬೂಬಾ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟಿದ್ದಾರೆ. ಅವರ ಚೊಚ್ಚಲ ಕನಸು ಪ್ರೇಕ್ಷಕರ ಮಡಿಲು ಸೇರೋದಿಕ್ಕೆ ಕೆಲ ದಿನಗಳಷ್ಟೇ ಬಾಕಿ ಇದೆ. 

Written by - YASHODHA POOJARI | Last Updated : Mar 10, 2024, 12:06 PM IST
  • 'ಮೆಹಬೂಬಾ'ಗೆ ಹಾರೈಸಿದ ಹಸಿರು ಸೇನೆ
  • ಶಶಿ ಹೊಸ ಪ್ರಯತ್ನಕ್ಕೆ ಜೊತೆಯಾದ ರೈತರು
  • ಮಾರ್ಡನ್ ರೈತ ಶಶಿಗೆ ಸಾಥ್ ಕೊಟ್ಟ ಅನ್ನದಾತರು
ಬಿಗ್ ಬಾಸ್ ಶಶಿಗೆ ಸಾಥ್ ಕೊಟ್ಟ ಹಸಿರು ಸೇನೆ...ಮೆಹಬೂಬಾ ಟ್ರೇಲರ್ ರಿಲೀಸ್ ಮಾಡಿದ ರೈತರು  title=

Mehbooba movie trailer release : ಮಾರ್ಡನ್ ರೈತ ಶಶಿ ಮೆಹಬೂಬಾ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟಿದ್ದಾರೆ. ಅವರ ಚೊಚ್ಚಲ ಕನಸು ಪ್ರೇಕ್ಷಕರ ಮಡಿಲು ಸೇರೋದಿಕ್ಕೆ ಕೆಲ ದಿನಗಳಷ್ಟೇ ಬಾಕಿ ಇದೆ. ಮಾರ್ಚ್ 15ಕ್ಕೆ ಮೆಹಬೂಬಾ ಮೆರವಣಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಟ್ರೇಲರ್ ಮೂಲಕ ಚಿತ್ರತಂಡವೀಗ ಕುತೂಹಲ ಹೆಚ್ಚಿಸಿದೆ.

ಶಶಿ ಹೊಸ ಪ್ರಯತ್ನಕ್ಕೆ ದೇಶದ ಬೆನ್ನೆಲುಬು ರೈತರು ಸಾಥ್ ಕೊಟ್ಟಿದ್ದಾರೆ. ಟ್ರೇಲರ್ ರಿಲೀಸ್ ಮಾಡಿದ ಅನ್ನದಾತರು ಶಶಿ ಕೆಲಸಕ್ಕೆ ಜೊತೆಯಾಗಿ ನಿಂತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಮೆಹಬೂಬಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅನ್ನದಾತರು ಆಗಮಿಸಿದ್ದರು.  ಶಶಿ ಅವರಿಗೆ ದೃಷ್ಟಿ ತೆಗೆದು ಚಪ್ಪಾಲಿ ಬಿಟ್ಟು ಹಸಿರು ಸೇನೆ ಟ್ರೇಲರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.

ಬಳಿಕ ಮಾತನಾಡಿದ ನಿರ್ದೇಶಕ ಅನೂಪ್ ಆಂಟೋನಿ , ನಿಮ್ಮ ಆಶೀರ್ವಾದ ನಮ್ಮ ಇಡೀ ತಂಡದ ಮೇಲೆ ಇರಲಿ. ಇದೇ 15ರಂದು ಕರ್ನಾಟಕದಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ. ಸ್ವಲ್ಪ ಭಯ ಇದೆ. ಪರಿಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ ಎಂದರು.

ಇದನ್ನೂ ಓದಿ: Max: ಮಹಾ ಶಿವರಾತ್ರಿಯಂದು ಕಿಚ್ಚನಿಂದ ʻಮ್ಯಾಕ್ಸ್‌ʼ ಬಿಗ್‌ ಅಪ್‌ಡೇಟ್‌..! 

ನಟ ಶಶಿ ಮಾತನಾಡಿ, ನನ್ನ ರೈತಾಪಿ ವರ್ಗದವರು, ಬಿಗ್ ಬಾಸ್ ನಲ್ಲಿ ನನ್ನನ್ನು ನೋಡಿದವರು. ನಾನು ಯಾರಿಗೆ ಪರಿಚಯ ಇದ್ದೇನೆ. ನೀವು ನನ್ನ ಫಸ್ಟ್ ಸರ್ಕಲ್ ಆಗಿರುತ್ತೀರಾ. ನೀವು ನನ್ನ ಸಿನಿಮಾವನ್ನು ಥಿಯೇಟರ್ ಗೆ ಬಂದು ನೋಡಬೇಕು ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ನೀವು ಚೆನ್ನಾಗಿದೆ ಎಂದು ಬೇರೆಯವರಿಗೆ ಹೇಳಿದರೆ ಸಾಮಾನ್ಯ ಪ್ರೇಕ್ಷಕರ ಬಂದು ನೋಡುತ್ತಾರೆ. ನೀವು ಬಂದು ನೋಡಿಲ್ಲ ಎಂದರೆ ಒಳ್ಳೊಳ್ಳೆ ಸಿನಿಮಾಗಳು ನಿಲ್ಲುವುದು ಕಷ್ಟವಾಗುತ್ತದೆ. ನಾನು ಈ ಚಿತ್ರದಲ್ಲಿ ಒಬ್ನೇ ಫ್ರೆಶರ್. ಎಲ್ಲರೂ ಘಟಾನುಘಟಿಗಳು ಇದ್ದಾರೆ. ನಾವು ಚಿತ್ರ ಮಾಡಿರುವುದು ಎಂಟು ಕೋಟಿ ಜನರಿಗೆ. ಇವರಿಗೆ ಹೊಸಬರ ಕನೆಕ್ಟ್ ಆಗಬೇಕು ಎಂದರೆ ಕಂಟೆಂಟ್ ಮೂಲಕ‌‌ ಕನೆಕ್ಟ್ ಆಗಬೇಕು. ನಾನು ಸಿನಿಮಾ ಹೀರೋ ಆಗಲ್ಲ. ಕಂಟೆಂಟ್ ಹೀರೋ ಎಂದರು.

ಸರ್ವಧರ್ಮ ಸಾಮರಸ್ಯ ಸಾರುವ ಮೆಹಬೂಬಾ ಸಿನಿಮಾದಲ್ಲಿ ಶಶಿಗೆ ನಾಯಕಿಯಾಗಿ ಪಾವನ ಮಿಂಚಿದ್ದಾರೆ. ಅನೂಪ್ ಆಂಟೋನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ‘ದಕ್ಷ್ ಎಂಟರ್ಟೇನ್ಮೆಂಟ್ಸ್’ ಸಹಯೋಗದಲ್ಲಿ ‘ಬಾಲಾಜಿ ಮೋಷನ್ ಪಿಕ್ಚರ್ಸ್’ ಬ್ಯಾನರ್ ಮೂಲಕ ‘ಮೆಹಬೂಬಾ’ ಚಿತ್ರವನ್ನು ಶಶಿ ನಿರ್ಮಾಣ ಮಾಡಿದ್ದಾರೆ. ಕೇರಳದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ತಯಾರಿಸಲಾಗಿದೆ.

ಮ್ಯಾಥ್ಯೂಸ್‌ ಮನು ಅವರು ‘ಮೆಹಬೂಬಾ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಸಿನಿಮಾಗಿದೆ. ಮಾಸ್ ಮಾದ ಅವರ ಸಾಹಸ ನಿರ್ದೇಶನ, ಕಲೈ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ಮೂಲಕ ಕೌತುಕ ಹೆಚ್ಚಿಸಿರುವ ಮೆಹಬೂಬಾ ಸಿನಿಮಾ ಮಾರ್ಚ್ 15ಕ್ಕೆ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡಲಿದೆ.

ಇದನ್ನೂ ಓದಿ: Ramya Krishna: ಬಾಹುಬಲಿ ನಟಿ ರಮ್ಯಾ ಕೃಷ್ಣ ಗಂಡನ ಜೊತೆ ʻಈʼ ಕೆಲಸ ಎಂದಿಗೂ ಮಾಡಲ್ವಂತೆ, ಕಾರಣ ತಿಳಿದರೆ ಶಾಕ್ ಆಗುತ್ತೀರಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News