ದಂಪತಿಗೆ ನಟ ನಾಗಭೂಷಣ ಕಾರು ಡಿಕ್ಕಿ.. ಮಹಿಳೆ ಸಾವು!

Nagabhushana Car Accident: ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದಲ್ಲಿ ಮಿಂಚಿದ್ದ ನಟ ನಾಗಭೂಷಣ ಕಾರು ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದ್ದಾರೆ. ಸದ್ಯ ಇವರ ವಿರುದ್ಧ ಕೇಸ್ ದಾಖಲಾಗಿದೆ.  

Written by - Savita M B | Last Updated : Oct 1, 2023, 11:30 AM IST
  • ನಟ ನಾಗಭೂಷಣ್ ಕಾರು ಅಪಘಾತ
  • ನಿನ್ನೆ ತಡ ರಾತ್ರಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಸ್ಟೇಷನ್ ಬಳಿ ನಡೆದಿರುವ ಘಟನೆ
  • ರಾತ್ರಿ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ಬರುವಾಗ ನಡೆದಿರೋ ಅಪಘಾತ
ದಂಪತಿಗೆ ನಟ ನಾಗಭೂಷಣ ಕಾರು ಡಿಕ್ಕಿ.. ಮಹಿಳೆ ಸಾವು! title=

Actor Nagabhushana: ನಟ ನಾಗಭೂಷನ ಇತ್ತೀಚಿಗಷ್ಟೇ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಜೊತೆ ನಟಿಸಿ ಅಭಿಮಾನಿಗಳ ಗಮನ ಸೆಳೆದಿದ್ದರು. ಇದೀಗ ನಟ ನಾಗಭೂಷನ್‌ ವಿರುದ್ಧ ಹಿಟ್ & ರನ್ ಆರೋಪ ಕೇಳಿಬರುತ್ತಿದೆ. 

ನಟ ಖಾಸಗಿ ವಾಹಿನಿಯ ಕಾರ್ಯಕ್ರಮ ಮುಗಿಸಿ ಉತ್ತರಹಳ್ಳಿಯಿಂದ ಕೋಣನಕುಂಟೆ ಕ್ರಾಸ್ ದಾರಿಯ ಮಧ್ಯೆ ಸಂಚರಿಸುವಾಗ ಈ ಅಪಘಾತ ನಡೆದಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನೊಬ್ಬರಿಗೆ ಗಂಭಿರ ಗಾಯವಾಗಿದೆ. ಶನಿವಾರ ಅಕ್ಟೋಬರ್ 30ರಂದು ರಾತ್ರಿ  ಈ ಘಟನೆ ನಡೆದಿದೆ. 

ಇದನ್ನೂ ಓದಿ-ನಾನು ಅವರ ಬಲೆಗೆ ಬೀಳುತ್ತೇನೆ ಎಂದು ಭಾವಿಸಿದ್ದರು : ʼಕಾಸ್ಟಿಂಗ್ ಕೌಚ್‌ʼ ಬಗ್ಗೆ ಇಶಾ ಶಾಕಿಂಗ್‌ ಹೇಳಿಕೆ

ನಾಗಭೂಷನ್‌ ಕಾರನ್ನು ವೇಗವಾಗಿ ಡ್ರೈವ್ ಮಾಡಿಕೊಂಡುಬಂದು ಫುಟ್​ಪಾತ್​ನಲ್ಲಿ ಹೋಗುತ್ತಿದ್ದ ಶ್ರೀ ಕೃಷ್ಣ ಬಿ (58) ಹಾಗೂ  ಪ್ರೇಮ. ಎಸ್(48) ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತಕ್ಕೀಡಾದ ಗಾಯಾಳುಗಳನ್ನು ನಾಗಭೂಷನ್‌ ರಾತ್ರಿಯೇ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಪ್ರೇಮ. ಎಸ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 

ಸದ್ಯ ಈ ಬಗ್ಗೆ ಕುಮಾರಸ್ವಾಮಿ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪಾರ್ಥ ಎಂಬುವವರಿಂದ ಕೇಸ್ ದಾಖಲಾಗಿದೆ. ಇನ್ನೂ ಇತ್ತೀಚೆಗಷ್ಟೇ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿದ್ದ ನಟ ಆದರೆ ಅದರ ಬೆನ್ನಲೇ ಈ ಅಪಘಾತವಾಗಿದ್ದು ದುರದೃಷ್ಟಕರ.

ಇದನ್ನೂ ಓದಿ-ನಟರಾಗಿ ಪ್ರಸಿದ್ಧರಾಗುವ ಮೊದಲು ಈ ಸೌತ್‌ ಸ್ಟಾರ್‌ಗಳು ಮಾಡುತ್ತಿದ್ದ ಕೆಲಸಗಳೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News