‘ಕೆಡಿ’ ಚಿತ್ರದಲ್ಲಿ ಆಕ್ಷನ್‌ ಪ್ರಿನ್ಸ್...! ಅಣ್ಣನಾಗಿ ಎಂಟ್ರಿ‌ ಕೊಟ್ಟ ರಮೇಶ್ ಅರವಿಂದ್

Ramesh Arvind in KD Movie: ಪ್ರೇಮ್‌ ನಿರ್ದೇಶನದಡಿಯಲ್ಲಿ ಮೂಡಿಬರುತ್ತಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಮತ್ತೋರ್ವ ಖ್ಯಾತ ನಟ ನಟಿಲಿದ್ದು, ಸದ್ಯ ಈ ಬಗ್ಗೆ ಮಾಹಿತಿಯೊಂದು ಲಭಿಸಿದೆ.   

Written by - Savita M B | Last Updated : Sep 24, 2023, 11:37 AM IST
  • ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕರಲ್ಲಿ ಜೋಗಿ ಪ್ರೇಮ್ ಕೂಡ ಒಬ್ಬರು.
  • ಜೋಗಿ ಸಿನಿಮಾದಂತಹ ಸೂಪರ್‌ ಹಿಟ್‌ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ
  • ಇದೀಗ ಇವರ ಮುಂದಿನ ಸಿನಿಮಾದ ಬಿಗ್‌ ಅಪ್ಡೇಟ್‌ವೊಂದು ಹೊರಬಿದ್ದಿದೆ.
‘ಕೆಡಿ’ ಚಿತ್ರದಲ್ಲಿ ಆಕ್ಷನ್‌ ಪ್ರಿನ್ಸ್...! ಅಣ್ಣನಾಗಿ ಎಂಟ್ರಿ‌ ಕೊಟ್ಟ ರಮೇಶ್ ಅರವಿಂದ್  title=

KD Movie Updates: ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕರಲ್ಲಿ ಜೋಗಿ ಪ್ರೇಮ್ ಕೂಡ ಒಬ್ಬರು. ಜೋಗಿ ಸಿನಿಮಾದಂತಹ ಸೂಪರ್‌ ಹಿಟ್‌ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಇದೀಗ ಇವರ ಮುಂದಿನ ಸಿನಿಮಾದ ಬಿಗ್‌ ಅಪ್ಡೇಟ್‌ವೊಂದು ಹೊರಬಿದ್ದಿದೆ. 

ಕಳೆದ ಕೆಲವು ದಿನಗಳ ಹಿಂದೆ ಜೋಗಿ ಪ್ರೇಮ್‌ ಅವರ ‘ಕೆಡಿ’ ಚಿತ್ರ ಘೋಷಣೆಯಾಗಿತ್ತು. ಸದ್ಯ ಈ ಸಿನಿಮಾ ತಂಡಕ್ಕೆ ಮತ್ತೊಬ್ಬ ಖ್ಯಾತ ನಟನ ಸೇರ್ಪಡೆಯಾಗುತ್ತಿದೆ. ಹೌದು ಆಕ್ಷನ್‌ ಪ್ರಿನ್ಸ್‌ ನಟಿಸುತ್ತಿರುವ ಕೆಡಿ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅಣ್ಣನಾಗಿ ಎಂಟ್ರಿ‌ ಕೊಡುತ್ತಿದ್ದಾರೆ. ಸದ್ಯ ಈ ಬಗ್ಗೆ  ಸ್ವತಃ ಪ್ರೇಮ್ ಅವರೇ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ-ನಾನು ನಂದಿನಿ... ಸಾಂಗ್‌ಗೆ ರೀಲ್ಸ್‌ ಮಾಡಿದ ನಟಿ ರಮ್ಯಾ..ಇವರು ನಮ್ಮ ನಂದು ಎಂದ ಫ್ಯಾನ್ಸ್‌!!

ಇನ್ನು ಸದ್ಯದಲ್ಲೇ ರಮೇಶ್‌ ಅರವಿಂದ್‌ ಈ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್‌, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ಧ್ರುವಾ ಸರ್ಜಾ, ಹೀಗೆ ದೊಡ್ಡ ದೊಡ್ಡ ಕಲಾವಿದರನ್ನೇ ಈ ಸಿನಿಮಾ ಒಳಗೊಂಡಿದ್ದು, ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ.

ಜೋಗಿ ಪ್ರೇಮ್‌ ಈ ಹಿಂದೆ ತಮ್ಮದೆ ಏಕಲವ್ಯ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ ಅವರಿಗೆ ಮತ್ತೆ ಅವಕಾಶ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ರೀಷ್ಮಾ  ಮಚ್‌ಲಕ್ಷ್ಮೀ ಪಾತ್ರದಲ್ಲಿ ನಟಿಸಲಿದ್ದು, ಸಿನಿಮಾ ವಿಭಿನ್ನ ಕಥೆ ಹೇಳಲು ಹೊರಟಿದೆ. ಅಲ್ಲದೇ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. 

ಇದನ್ನೂ ಓದಿ-ಮೊದಲ ಸ್ಪರ್ಧಿ ನಟನೂ ಅಲ್ಲ, ನಟಿಯೂ ಅಲ್ಲ! ಬಿಗ್ ಬಾಸ್ ಮನೆಗೆ ಆಟವಾಡಲು ಬರ್ತಿದೆ ಮುದ್ದು 'ಚಾರ್ಲಿ’

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News