‘ಪ್ರೀತಿಯಿಂದ ಮನೆ ಹತ್ತಿರ ಬಂದರೆ ಬರಬೇಡಿ ಎನ್ನುವುದು ನಮ್ಮ ಸಂಪ್ರದಾಯವಲ್ಲ’: ಅಭಿಷೇಕ್ ಅಂಬರೀಷ್‌ ಹೀಗಂದಿದ್ದೇಕೆ?

Abhishek Ambareesh: ಮದುವೆಯ ಬಳಿಕ ಮೊದಲ ವರ್ಷ ಅದ್ದೂರಿಯಾಗಿ ಬರ್ತ್​ಡೇ ಆಚರಿಸಿಕೊಳ್ಳಬೇಕಿದ್ದ ನಟ ಅಭಿಷೇಕ್ ಅಂಬರೀಶ್‌, ಅವರು ಸರಳವಾಗಿ ಬರ್ತ್​ಡೇ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ವಿಷಯವನ್ನು ಜೂನಿಯರ್‌ ರೆಬಲ್‌ ಸ್ಟಾರ್‌ ತಮ್ಮ ಇನ್‌ಸ್ಟಾ ಸ್ಟೋರಿನಲ್ಲಿ ಬರೆದುಕೊಂಡಿದ್ದಾರೆ.  

Written by - Savita M B | Last Updated : Oct 2, 2023, 01:04 PM IST
  • ನಟ ಅಭಿಶೇಕ್‌ ಅಂಬರೀಶ ಅಭಿನಯದ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ರಿಲೀಸ್‌ಗೆ ಸಿದ್ದತೆಗೊಳ್ಳುತ್ತಿದೆ.
  • ಇದರ ಜೊತೆ ಕಾವೇರಿ ವಿವಾದದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದರು.
  • ಅಭಿ ತಮ್ಮ ಫಾನ್ಸ್‌ಗೆ ಶಾಕಿಂಗ್‌ ಸುದ್ದಿ ನೀಡಿದ್ದಾರೆ.
‘ಪ್ರೀತಿಯಿಂದ ಮನೆ ಹತ್ತಿರ ಬಂದರೆ ಬರಬೇಡಿ ಎನ್ನುವುದು ನಮ್ಮ ಸಂಪ್ರದಾಯವಲ್ಲ’: ಅಭಿಷೇಕ್ ಅಂಬರೀಷ್‌ ಹೀಗಂದಿದ್ದೇಕೆ?  title=

Sandalwood News: ನಟ ಅಭಿಶೇಕ್‌ ಅಂಬರೀಶ ಅಭಿನಯದ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ರಿಲೀಸ್‌ಗೆ ಸಿದ್ದತೆಗೊಳ್ಳುತ್ತಿದೆ. ಇದರ ಜೊತೆ ಕಾವೇರಿ ವಿವಾದದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಇನ್ನೇನು ಅಭಿ ಹುಟ್ಟು ಹಬ್ಬ ಬಂದೇ ಬಿಡ್ತು ಅನ್ನುವಾಗ, ಅಭಿ ತಮ್ಮ ಫಾನ್ಸ್‌ಗೆ ಶಾಕಿಂಗ್‌ ಸುದ್ದಿ ನೀಡಿದ್ದಾರೆ. ಹಾಗಾದ್ರೆ ಆ ವಿಷಯವೇನು? ಇದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ..

ನಟ ಅಭಿಶೇಕ್‌ ಅಂಬರೀಶ್‌ ಅವಿವಾ ಅವರ ಜೊತೆ ಇದೇ ವರ್ಷ ಜೂನ್‌ ತಿಂಗಳು ಹಸೆಮಣೆ ಏರಿದರು. ಇವರು ಸಾಲು ಸಾಲು ಸಿನಿಮಾಗಳಲ್ಲಿ ಬಿಸಿಯಾಗಿದ್ದು, ಸದ್ಯದಲ್ಲೇ ದುನಿಯಾ ಸೂರಿ ನಿರ್ದೇಶನದ ಅವರ ʼಬ್ಯಾಡ್‌ ಮ್ಯಾನರ್ಸ್‌ʼ ಚಿತ್ರ ರಿಲೀಸ್‌ಗೆ ತಯಾರಿ ನಡೆಸುತ್ತಿದ್ದಾರೆ. ಇಗಾಗ್ಲೇ ಅವರ ಸಿನಿಮಾದ ಪೋಸ್ಟರ್‌ ಟೀಸರ್‌ ಎಲ್ಲಾ ರಿವಿಲ್‌ ಮಾಡಿದ್ದು ಅಭಿಮಾನಿಗಳಲ್ಲಿ ಕುತುಹಲ ಇನ್ನಷ್ಟು ಹೆಚ್ಚಿಸಿದೆ. 

ಇದನ್ನೂ ಓದಿ-ಅಪಘಾತ ಪ್ರಕರಣದಲ್ಲಿ ನಟ ನಾಗಭೂಷಣ್‌ಗೆ ಮತ್ತೊಂದು ಬಿಗ್ ರಿಲೀಫ್!

ಸದ್ಯ ರಾಜ್ಯದಲ್ಲಿ ಹತ್ತಿಹರಿಯುತ್ತಿರುವ ಕಾವೇರಿ ವಿವಾದ ಕಿಚ್ಚಿಗೆ, ರೈತರ ಬೆಂಬಲವಾಗಿ ಅಭಿ ನಿಂತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹಾಗೆ ಮೊನ್ನೆ ಶನಿವಾರ ತಮ್ಮ ಪತ್ನಿ ಅವಿವಾ ಅವರೊಡನೆ ಕಾವೇರಿ ನದಿಯ ಉಪಸ್ಥಳವಾದ  ತಲಕಾವೇರಿಗೆ ಭೇಟಿ ನೀಡಿದ್ದು, ಕಾವೇರಮ್ಮನ ದರ್ಶನ ಪಡೆದು, ಕಾವೇರಿ ವಿವಾದ ಬೇಗನೇ ಹರಿಯಲಿ ಎಂದು ಈ ಜೋಡಿ ಪ್ರಾರ್ಥನೆಯನ್ನು ಸಹ ಮಾಡಿಕೊಂಡಿದ್ದಾರೆ. 

ಆಕ್ಟೋಬರ್‌ 3ರಂದು ಜೂನಿಯರ್‌ ರೆಬಲ್‌ ಸ್ಟಾರ್‌ ಅವರ ಹುಟ್ಟು ಹಬ್ಬ. ಮದುವೆ ನಂತರ ಮೊದಲನೇ ಸಾರಿ ತಮ್ಮ ಜನ್ಮದಿನವನ್ನು ಗ್ರಾಂಡಾಗಿ ಸೆಲೆಬ್ರೇಟ್‌ ಮಾಡುತ್ತಾರೆ ಎಂದು ಅಭಿ ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ ಅಭಿಶೇಕ್‌ ಸದ್ಯ ತಮ್ಮ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ನೀಡಿದ್ದಾರೆ. ಈ ಬಾರಿ ಜೂನಿಯರ್‌ ಅಂಬಿ ತಮ್ಮ ಬರ್ತ್‌ಡೇ ನಾ ಸರಳವಾಗಿ ಆಚರಿಸಲಿದ್ದಾರೆ.

ಯಸ್..‌ ಅಭಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಮಾಡಿಕೊಳ್ಳಲಿದ್ದಾರೆ. ಈ ವಿಷಯವಾಗಿ ಅಭಿ ತಮ್ಮ ಅಭಿಮಾನಿಗಳಿಗೆ ಕಾರಣವನ್ನು ಸಹ ತಿಳಿಸಿದ್ದಾರೆ. ʼಕೆಲವೇ ದಿನಗಳಲ್ಲಿ ನನ್ನ ಹುಟ್ಟುಹಬ್ಬ ಇರುವುದರಿಂದ ಕೆಲವೊಂದು ವಿಷಯಗಳನ್ನು ತಿಳಿಸಲು ಇಚ್ಛಿಸುತ್ತೇನೆ. ಈ ವರ್ಷ ನಮ್ಮ ರಾಜ್ಯದಲ್ಲಿ ಬರಗಾಲ ಉಂಟಾಗಿರುವುದರಿಂದ ಹಾಗೂ ನಮ್ಮ ಕಾವೇರಿಗಾಗಿ ಹಲವಾರು ಜನರು ಹೋರಾಟ ಮಾಡುತ್ತಿರುವುದರಿಂದ ಈ ವರ್ಷ ನಾನು ನನ್ನ ಹುಟ್ಟುಹಬ್ಬವನ್ನ ಸರಳವಾಗಿ ಆಚರಿಸಿಕೊಳ್ಳಲು ಇಚ್ಛಿಸಿದ್ದೇನೆʼ ಎಂದು ಕಾರಣ ನೀಡಿದ್ದಾರೆ. 

ಇದನ್ನೂ ಓದಿ-Bigg Boss Kannada10: ದೊಡ್ಮನೆಗೆ ಎಂಟ್ರಿ ಕೊಡುವ ಬಗ್ಗೆ ಮೇಘಾ ಶೆಟ್ಟಿ ಹೇಳಿದ್ದೇನು?

ʼಎಲ್ಲಾ ರೆಬೆಲ್ ಅಭಿಮಾನಿಗಳು ನಿಮ್ಮ ಊರುಗಳಲ್ಲಿಯೇ, ನೀವು ಇರುವಲ್ಲಿಯೇ ನನಗೆ ಶುಭಹಾರೈಸಿ ಆಶೀರ್ವದಿಸಿ. ಅಭಿಮಾನಿಗಳು ಪ್ರೀತಿಯಿಂದ ಮನೆ ಹತ್ತಿರ ಬಂದರೆ ಬರಬೇಡಿ ಅನ್ನುವುದು ನಮ್ಮ ಸಂಪ್ರದಾಯವಲ್ಲ. ಆದರೆ, ಬಂದವರು ಯಾವುದೇ ಹಾರ, ಕೇಕ್, ಪಟಾಕಿಗಳನ್ನು ಹಾಗೂ ಉಡುಗೊರೆಗಳನ್ನು ತರದೆ ಬಂದು ಶುಭ ಹಾರೈಸಿ. ಇಂತಿ ನಿಮ್ಮ ಪ್ರೀತಿಯ ಅಭಿಷೇಕ್ ಅಂಬರೀಷ್ʼ ಎಂದು ತಮ್ಮ ಫ್ಯಾನ್ಸ್‌ಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಈ ವಿಷಯವನ್ನು ಅಭಿಶೇಕ್‌ ಅಂಬರೀಷ್‌ ಅವರು ಒಂದು ಪತ್ರದ ರೀತಿಯಲ್ಲಿ, ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿನಲ್ಲಿ ಹಾಕಿಕೊಂಡಿದ್ದಾರೆ. ಈ ವರ್ಷ ಕಾವೇರಿ ಸಮಸ್ಯೆಗೆ ಪರಿಹಾರ ಸಿಗಲಿ. ಮುಂದಿನ ವರ್ಷ ಅಭಿ  ಫ್ಯಾನ್ಸ್‌ ಜೊತೆ ತಮ್ಮ ಬರ್ತ್‌ಡೇನಾ ಅದ್ದೂರಿಯಾಗಿ ಸೆಲೆಬ್ರೇಟ್‌ ಮಾಡಿಕೊಳ್ಳುವಂತಾಗಲಿ ಎಂದು ಆಶಿಸೋಣ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News