Aamir Khan: ಸ್ಟಾರ್ ಕಿಡ್ ಆಗಿದ್ದೇ ಅಮಿರ್‌ ಖಾನ್‌ ಪುತ್ರಿ ಇರಾ ಡಿಪ್ರೆಷನ್‌ಗೆ ಕಾರಣವಾಯ್ತಾ?

Ira Khan On Depression: ಅಮೀರ್ ಖಾನ್ ಪುತ್ರಿ ಇರಾ ಖಾನ್ ಖಿನ್ನತೆಗೆ ಒಳಗಾಗಿದ್ದರು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.  

Written by - Chetana Devarmani | Last Updated : Jul 12, 2023, 04:06 PM IST
  • ಅಮೀರ್ ಖಾನ್ ಪುತ್ರಿ ಇರಾ ಖಾನ್
  • ಖಿನ್ನತೆಗೆ ಒಳಗಾಗಿದ್ದ ಇರಾ ಖಾನ್
  • ಸ್ಟಾರ್ ಕಿಡ್ ಆಗಿದ್ದೇ ಡಿಪ್ರೆಷನ್‌ಗೆ ಕಾರಣ?
Aamir Khan: ಸ್ಟಾರ್ ಕಿಡ್ ಆಗಿದ್ದೇ ಅಮಿರ್‌ ಖಾನ್‌ ಪುತ್ರಿ ಇರಾ ಡಿಪ್ರೆಷನ್‌ಗೆ ಕಾರಣವಾಯ್ತಾ? title=

Ira Khan On Depression: ಅಮೀರ್ ಖಾನ್ ಪುತ್ರಿ ಇರಾ ಖಾನ್ ಇಂಡಸ್ಟ್ರಿಯಿಂದ ಅಂತರ ಕಾಯ್ದುಕೊಂಡಿದ್ದಾರೆ ಆದರೆ ಸದಾ ಮುಖ್ಯಾಂಶಗಳಲ್ಲಿ ಇರುತ್ತಾರೆ. ಲಕ್ಷಾಂತರ ಜನರು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಅನುಸರಿಸುತ್ತಾರೆ ಮತ್ತು ಅವರ ಪೋಸ್ಟ್‌ಗಳಿಗಾಗಿ ಕಾಯುತ್ತಿದ್ದಾರೆ. ಇರಾ ಖಾನ್ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇರಾ ಖಾನ್ ಖಿನ್ನತೆಗೆ ಬಲಿಯಾಗಿದ್ದರು. ಈ ಅಸ್ವಸ್ಥತೆಯೊಂದಿಗೆ ಹೋರಾಡಿದ ನಂತರ ಅವರು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸ್ಟಾರ್‌ ಕಿಡ್ ಆಗಿರುವುದರಿಂದ, ಇರಾ ಖಾನ್‌ರನ್ನು ಜನರು ಸುಲಭವಾಗಿ ಗುರುತಿಸುತ್ತಾರೆ. ಇದು ಅವರ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಖಿನ್ನತೆಗೆ ಒಂದೇ ಕಾರಣವಿಲ್ಲ ಎಂದು ಇರಾ ಖಾನ್ ಹೇಳಿದ್ದಾರೆ. ನೀವು ಬೆಳೆದ ವಿಷಯಗಳಿಂದ ನಿಮ್ಮ ವ್ಯಕ್ತಿತ್ವವು ರೂಪುಗೊಳ್ಳುತ್ತದೆ. ನಾನು ಬೆಳೆದ ಕುಟುಂಬವು ನನ್ನ ಮಾನಸಿಕ ಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಹೇಳುವುದು ತಪ್ಪು ಎಂದಿದ್ದಾರೆ.

ಇದನ್ನೂ ಓದಿ: RRR 2 ಶೂಟಿಂಗ್ ಶೀಘ್ರದಲ್ಲೇ ಶುರು, ಈ ಬಾರಿ‌ ರಾಜಮೌಳಿ ಹೇಳ್ತಿಲ್ಲ ಆಕ್ಷನ್‌ ಕಟ್‌.!

ನನ್ನ ಕುಟುಂಬದ ಕೆಲ ವಿಚಾರಗಳು ನನ್ನ ಮಾನಸಿಕ ಆರೋಗ್ಯದ ಮೇಲೆ 100 ಪ್ರತಿಶತ ಪರಿಣಾಮ ಬೀರಿದೆ. ಈ ಕುಟುಂಬದಲ್ಲಿ ಜನಿಸುವುದರಿಂದ ಅನೇಕ ಅನುಕೂಲಗಳು ಇವೆ, ಇದರ ಜೊತೆಗೆ ಅನಾನುಕೂಲಗಳೂ ಇವೆ ಎಂದು ಇರಾ ಖಾನ್ ಹೇಳಿದ್ದಾರೆ. 

ಇರಾ ಖಾನ್ ಅವರು ಕ್ಲಿನಿಕಲ್ ಖಿನ್ನತೆಗೆ ಬಲಿಯಾದ ಸಮಯದ ಬಗ್ಗೆಯೂ ಮಾತನಾಡಿದ್ದಾರೆ. ಆ ಸಮಯದಲ್ಲಿ ಅವರು ಚಿಕಿತ್ಸೆಗಾಗಿ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿದ್ದರು ಮತ್ತು ಅವರನ್ನು ನೋಡಿಕೊಳ್ಳುವವರೂ ಇದ್ದರು. ಖಿನ್ನತೆ ಮತ್ತು ಭಯ ಅವರನ್ನು ಕುಗ್ಗಿಸಿತು. ಇದೇ ರೀತಿಯ ಭಯವನ್ನು ಎದುರಿಸುತ್ತಿರುವ ಇತರರಿಗೆ ಸಹಾಯ ಮಾಡಲು 2021 ರಲ್ಲಿ ಫೌಂಡೇಶನ್ ಅನ್ನು ರಚಿಸಿದರು. 

ಜುಲೈ 2022 ರವರೆಗೆ ಇರಾ ಖಾನ್ ಖಿನ್ನತೆಯಲ್ಲಿದ್ದರು. ಕೆಲವು ಸಮಯದ ಹಿಂದೆ ನೂಪುರ್ ಶಿಖರೆ ಅವರೊಂದಿಗೆ ಇರಾ ಖಾನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 14 ಬಾರಿ ಟ್ರೈ ಮಾಡಿದ್ರೂ ಗರ್ಭಿಣಿಯಾಗದ ಈ ನಟಿ ಸಲ್ಮಾನ್ ಖಾನ್ ಕೊಟ್ಟ ಆ ಸಲಹೆಯಿಂದ 2 ಮಕ್ಕಳ ತಾಯಿಯಾದ್ಳು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News