Swara Bhaskar Wedding: ಸಮಾಜವಾದಿ ನಾಯಕನ ಜೊತೆ ಸೀಕ್ರೆಟ್ ಆಗಿ ಮದುವೆಯಾದ ಬಾಲಿವುಡ್ ನ ಖ್ಯಾತ ನಟಿ! ಫೋಟೋ ವೈರಲ್

Swara Bhaskar Wedding: ಫಹಾದ್ ಅಹಮದ್ ಒಬ್ಬ ವಿದ್ಯಾರ್ಥಿ ನಾಯಕ ಮತ್ತು ಸಮಾಜ ಸೇವಕ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸ್ಟೂಡೆಂಟ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜುಲೈ 2022 ರಲ್ಲಿ, ಫಹಾದ್ ಅಬು ಅಸಿಮ್ ಅಜ್ಮಿ ಮತ್ತು ರೈಸ್ ಶೇಖ್ ಅವರ ಉಪಸ್ಥಿತಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದರು. ಅವರು ಮಹಾರಾಷ್ಟ್ರದ ಯುವಜನ ಸಭಾ ಮತ್ತು ಎಸ್‌ಪಿಯ ಮುಂಬೈ ಘಟಕದ ಅಧ್ಯಕ್ಷ ಹುದ್ದೆಯನ್ನು ಹೊಂದಿದ್ದಾರೆ.

Written by - Bhavishya Shetty | Last Updated : Feb 16, 2023, 06:23 PM IST
    • ಫಹಾದ್ ಜಿರಾರ್ ಅಹಮದ್ ಜೊತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮದುವೆ
    • ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹಮದ್ ಯಾರು ಗೊತ್ತಾ?
    • ಫಹಾದ್ ಅಹಮದ್ ಒಬ್ಬ ವಿದ್ಯಾರ್ಥಿ ನಾಯಕ ಮತ್ತು ಸಮಾಜ ಸೇವಕ
Swara Bhaskar Wedding: ಸಮಾಜವಾದಿ ನಾಯಕನ ಜೊತೆ ಸೀಕ್ರೆಟ್ ಆಗಿ ಮದುವೆಯಾದ ಬಾಲಿವುಡ್ ನ ಖ್ಯಾತ ನಟಿ! ಫೋಟೋ ವೈರಲ್ title=
Swara Bhaskar Wedding

Swara Bhaskar Wedding: ಸಮಾಜವಾದಿ ಪಕ್ಷದ ನಾಯಕ ಫಹಾದ್ ಜಿರಾರ್ ಅಹಮದ್ ಜೊತೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಸುದ್ದಿಯನ್ನು ಸ್ವರಾ ಭಾಸ್ಕರ್  ಬಹಿರಂಗಪಡಿಸಿದ್ದಾರೆ. ಸ್ವರಾ ಭಾಸ್ಕರ್ ಅವರು ದಿಢೀರ್ ಆಗಿ ಮದುವೆಯಾಗಿದ್ದನ್ನು ಕಂಡ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇದನ್ನೂ ಓದಿ: 5000 ವರ್ಷಗಳ ಹಿಂದೆಯೂ ಜನರು ಪಾರ್ಟಿ ಮಾಡುತ್ತಿದ್ದರು, ಬಿಯರ್ ಕುಡಿಯುತ್ತಿದ್ದರು: ಇಲ್ಲಿದೆ ಸಾಕ್ಷಿ

ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹಮದ್ ಯಾರು ಗೊತ್ತಾ?

ಫಹಾದ್ ಅಹಮದ್ ಒಬ್ಬ ವಿದ್ಯಾರ್ಥಿ ನಾಯಕ ಮತ್ತು ಸಮಾಜ ಸೇವಕ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸ್ಟೂಡೆಂಟ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜುಲೈ 2022 ರಲ್ಲಿ, ಫಹಾದ್ ಅಬು ಅಸಿಮ್ ಅಜ್ಮಿ ಮತ್ತು ರೈಸ್ ಶೇಖ್ ಅವರ ಉಪಸ್ಥಿತಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದರು. ಅವರು ಮಹಾರಾಷ್ಟ್ರದ ಯುವಜನ ಸಭಾ ಮತ್ತು ಎಸ್‌ಪಿಯ ಮುಂಬೈ ಘಟಕದ ಅಧ್ಯಕ್ಷ ಹುದ್ದೆಯನ್ನು ಹೊಂದಿದ್ದಾರೆ.

ಫಹಾದ್ ಅಹ್ಮದ್ 2 ಫೆಬ್ರವರಿ 1992 ರಂದು ಯುಪಿಯ ಬಹೇರಿಯಲ್ಲಿ ಜನಿಸಿದರು. ಇವರ ತಂದೆಯ ಹೆಸರು ಜಿರಾರ್ ಅಹಮದ್. ಫಹಾದ್ ತಮ್ಮ ಪದವಿ ಮತ್ತು ಎಂ.ಫಿಲ್ ಪದವಿಯನ್ನು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ಇದಾದ ನಂತರ ಅವರು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ನೊಂದಿಗೆ ಸಮಾಜ ಸೇವಕರಾಗಿ ಸಂಬಂಧ ಹೊಂದಿದ್ದರು. 2017 ಮತ್ತು 2018 ರಲ್ಲಿ ಫಹಾದ್ TISS ವಿದ್ಯಾರ್ಥಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಪ್ರಸ್ತುತ ಅವರು ಡಾಕ್ಟರೇಟ್ ಪದವಿಯನ್ನೂ ಪಡೆಯುತ್ತಿದ್ದಾರೆ.

ಇನ್ನು ಫಹಾದ್ ಅಹ್ಮದ್ ಅವರು 2017-2018 ರಲ್ಲಿ TISS ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ನಂತರ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಶುಲ್ಕ ವಿನಾಯಿತಿಯನ್ನು ಹಿಂಪಡೆಯುವುದನ್ನು ವಿರೋಧಿಸಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದರು. ಇದಲ್ಲದೆ, ಮುಂಬೈನಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ, ದೇಶದ ಅನೇಕ ಭಾಗಗಳಲ್ಲಿ ರ್ಯಾಲಿಗಳನ್ನು ನಡೆಸಿದರು.

ಇದನ್ನೂ ಓದಿ: IND vs AUS: ದೆಹಲಿ ಟೆಸ್ಟ್ ನಲ್ಲೂ ಈ ಆಟಗಾರನಿಗೆ ಸ್ಥಾನ ನೀಡುತ್ತಿಲ್ಲ ರೋಹಿತ್ ಶರ್ಮಾ!

ಇದಕ್ಕೂ ಪ್ರಮುಖವಾಗಿ ಭಾರತ vs ಆಸ್ಟ್ರೇಲಿಯಾ ODI ಸರಣಿಯ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೌನ ಪ್ರತಿಭಟನೆಯ ಭಾಗವಾಗಿ ಫಹಾದ್ ಅಹ್ಮದ್ ಕಾಣಿಸಿಕೊಂಡರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News