ಚೆಂದುಳ್ಳಿ ಚೆಲುವೆ ಐಶ್ವರ್ಯ ರೈಗೆ 'ಬಣ್ಣದ ಲೋಕ'ಕ್ಕೆ ಬರಬೇಡ ಎಂದಿದ್ದರಂತೆ ಖ್ಯಾತ ನಟ, ಕಾರಣ ಏನ್ ಗೊತ್ತಾ..!

Aishwarya Rai: ಒಮ್ಮೆ ಗ್ಲಾಮರ್ ಇಂಡಸ್ಟ್ರಿಗೆ ಬಂದರೆ ಅದು ನಿಮ್ಮನ್ನು ಬದಲಾಯಿಸಲು ಪ್ರಾರಂಭಿಸುತ್ತದೆ. ನಿಮ್ಮನ್ನು ಅದು ಪ್ರಬುದ್ದಗೊಳಿಸುತ್ತದೆ, ಆಗ ನಿಮ್ಮಲ್ಲಿರುವ ಮುಗ್ದತೆ ಕಳೆದುಹೋಗುತ್ತದೆ. ಸಿನಿಮಾ ರಂಗವನ್ನು ಸರಿಯಾಗಿ ನಿಭಾಯಿಸದಿದ್ದರೆ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ’ ಎಂದು ಸಲಹೆ ನೀಡಿದ್ದರಂತೆ. 

Written by - Yashaswini V | Last Updated : Dec 10, 2024, 10:23 AM IST
  • ಪೆಪ್ಸಿ ಜಾಹಿರಾತಿನಲ್ಲಿ ಐಶ್ವರ್ಯ ರೈ ನೋಡಿ ‘ಯಾರೀ ಸುರಸುಂದರಿ?’ ಅಂತಾ ಹೌಹಾರಿ, ಐಶ್ವರ್ಯ ರೈ ಮುಗ್ದತೆಗೆ ಮಾರು ಹೋಗಿ ಅದೇ ಮುಗ್ದತೆ ಕಾರಣಕ್ಕೆ ಈ ‘ಬೆಡಗಿಗೆ ಬಾಲಿವುಡ್ ಗೆ ಬರುವುದು ಬೇಡ’ ಎಂದಿದ್ದರಂತೆ.
  • ಮೊದಲ ಭೇಟಿಯಲ್ಲೇ ‘ನೀನು ಮಾಡೆಲಿಂಗ್ ಬಿಟ್ಟು ಸಿನಿಮಾರಂಗಕ್ಕೆ ಬರಬೇಡ. ಈ ಬಣ್ಣದ ಲೋಕ ಸರಿ ಇಲ್ಲ. ಮಾಡೆಲಿಂಗ್ ಕ್ಷೇತ್ರದಲ್ಲೇ ಮುಂದುವರಿ’ ಅಂತಾ ಆ ನಟ ಸಲಹೆ ನೀಡಿದ್ದರಂತೆ.
  • ಮಾಧುರಿ ದೀಕ್ಷಿತ್, ಕಾಜೋಲ್, ಜ್ಯುಹಿ ಚಾವ್ಲಾ, ಕರೀನಾ ಕಪೂರ್, ಕರಿಷ್ಮಾ ಕಪೂರ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ ಒಬ್ಬರಾ ಇಬ್ಬರಾ ಸ್ಪರ್ಧಿಗಳು. ಎಲ್ಲರನ್ನೂ ನಿವ್ವಾಳಿಸಿ ಬಿಸಾಕಿದ್ದರು ಐಶ್ವರ್ಯ ರೈ.
ಚೆಂದುಳ್ಳಿ ಚೆಲುವೆ ಐಶ್ವರ್ಯ ರೈಗೆ 'ಬಣ್ಣದ ಲೋಕ'ಕ್ಕೆ ಬರಬೇಡ ಎಂದಿದ್ದರಂತೆ ಖ್ಯಾತ ನಟ, ಕಾರಣ ಏನ್ ಗೊತ್ತಾ..! title=

Aishwarya Rai Bachchan: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಅವರಿಗೀಗ 51 ವರ್ಷ. ಈಗಲೂ ಆಕೆ ಸೌಂದರ್ಯಕ್ಕೆ ರಾಯಭಾರಿ. ಅವರ ಅಂದಚೆಂದಗಳು ಈಗಲೂ ಅಳಿಸಿಲ್ಲ. ಮುಖದ ಮೇಲೆ ಗೆರೆಗಳು ಗೋಚರಿಸುತ್ತಿಲ್ಲ. ಎಂಥವರನ್ನೂ ಸೆಳೆಯುತ್ತಿದ್ದ ಅವರ ನಗು-ನೋಟಗಳ ಶಕ್ತಿ ಕುಂದಿಲ್ಲ. ಇನ್ನು ಅವರ ಕೆರಿಯರ್ ಬಗ್ಗೆ ಮಾತನಾಡುವುದಾದರೆ ದಶಕಗಳ ಕಾಲ ಬಾಲಿವುಡ್ ಆಳಿದ ಬೆಡಗಿ ಅವರು. ಮಾಧುರಿ ದೀಕ್ಷಿತ್, ಕಾಜೋಲ್, ಜ್ಯುಹಿ ಚಾವ್ಲಾ, ಕರೀನಾ ಕಪೂರ್, ಕರಿಷ್ಮಾ ಕಪೂರ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ ಒಬ್ಬರಾ ಇಬ್ಬರಾ ಸ್ಪರ್ಧಿಗಳು. ಎಲ್ಲರನ್ನೂ ನಿವ್ವಾಳಿಸಿ ಬಿಸಾಕಿದ್ದರು ಐಶ್ವರ್ಯ ರೈ. 

ಇಂಥ ಚೆಂದುಳ್ಳಿ ಚೆಲುವೆ ಐಶ್ವರ್ಯ ರೈಗೆ ‘ನೀನು ಮಾಡೆಲಿಂಗ್ ಬಿಟ್ಟು ಸಿನಿಮಾ ರಂಗಕ್ಕೆ ಬರಬೇಡ. ಈ ಬಣ್ಣದ ಲೋಕ ಸರಿ ಇಲ್ಲ. ನೀನು ಫಿಲಂ ಫಿಲ್ಡ್ ಗೆ ಬಂದರೆ ನಿನ್ನ ಬ್ಯೂಟಿನೂ ಹಾಳಾಗುತ್ತೆ. ಜೊತೆಗೆ ನಿನ್ನ ಕೆರಿಯರ್ ಕೂಡ ಎಕ್ಕುಟ್ಟೋಗುತ್ತೆ. ಬರಿ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಮಾಡೆಲಿಂಗ್ ಭವಿಷ್ಯ ಕೂಡ ಬರ್ಬಾದ್ ಆಗುತ್ತೆ… ಫಿಲಂ ಫಿಲ್ಡ್ ಬೇಡ, ಮಾಡೆಲಿಂಗ್ ಕ್ಷೇತ್ರದಲ್ಲೇ ಮುಂದುವರಿ’ ಅಂತಾ ಖ್ಯಾತ ನಟರೊಬ್ಬರು ಸಲಹೆ ನೀಡಿದ್ದರಂತೆ.

ಇದನ್ನೂ ಓದಿ- ಕೊನೆಗೂ ತನ್ನ 'ಗರ್ಲ್ ಫ್ರೆಂಡ್' ಪರಿಚಯಿಸಿದ ವಿಜಯ್ ದೇವರಕೊಂಡ..! ಆ ಮಿಸ್ಟ್ರಿ ಗರ್ಲ್ ಯಾರು ಗೊತ್ತಾ..!

ಐಶ್ವರ್ಯ ರೈಗೆ ಹಾಗೆ ಸಲಹೆ ಕೊಟ್ಟಿದ್ದು ಬೇರಾರೂ ಅಲ್ಲ; ಸಂಜಯ್ ದತ್. ಪೆಪ್ಸಿ ಜಾಹೀರಾತು ನೋಡಿ ಐಶ್ವರ್ಯ ರೈ ಸೌಂದರ್ಯಕ್ಕೆ ಮಾರು ಹೋಗಿದ್ದರಂತೆ ಸಂಜಯ್ ದತ್. ಸಂಜಯ್ ದತ್ ಮಾತ್ರವಲ್ಲ, ಅವರ ಸಹೋದರಿಯರಾದ ನಮ್ರತಾ ದತ್ ಮತ್ತು ಪ್ರಿಯಾ ದತ್ ಕೂಡ ಐಶ್ ಸೌಂದರ್ಯಕ್ಕೆ ಫಿದಾ ಆಗಿದ್ದರಂತೆ. ಅದರ ನಡುವೆ ಬಾಲಿವುಡ್ ಗೆ ಬರಲೆಂದೇ ಫೋಟೋ ಶೂಟ್ ಮಾಡಿಸುತ್ತಿದ್ದ ಐಶ್ವರ್ಯ ರೈ ಅವರು ಸಂಜಯ್ ದತ್ ಕಣ್ಣಿಗೆ ಬಿದ್ದಿದ್ದಾರೆ. ಅದೇ ಅವರಿಬ್ಬರ ಮೊದಲ ಭೇಟಿ. ಮೊದಲ ಭೇಟಿಯಲ್ಲೇ ಐಶ್ವರ್ಯ ರೈಗೆ 'ನೀನು  ಫಿಲಂ ಫಿಲ್ಡ್ ಗೆ ಬಂದ್ರೆ ನಿನ್ನ ಬ್ಯೂಟಿ ಮತ್ತು ಲೈಫ್ ಎರಡೂ ಹಾಳಾಗುತ್ತೆ ಎಂದಿದ್ದರಂತೆ' ಸಂಜಯ್ ದತ್.

ಆಮೇಲೆ ಸಂಜಯ್ ದತ್ ಜೊತೆ ಐಶ್ವರ್ಯ ರೈ ಮೂರೂ ಸಿನಿಮಾದಲ್ಲಿ ನಟಿಸಿದ್ದರೂ ಯಾವತ್ತೂ ಈ ವಿಚಾರವನ್ನು ಬಹಿರಂಗಪಡಿಸಿರಲಿಲ್ಲ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸ್ವತಃ ಸಂಜಯ್ ದತ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಪೆಪ್ಸಿ ಜಾಹಿರಾತಿನಲ್ಲಿ ಐಶ್ವರ್ಯ ರೈ ನೋಡಿ ‘ಯಾರೀ ಸುರಸುಂದರಿ?’ ಅಂತಾ ಹೌಹಾರಿದ್ದರಂತೆ. ಹಾಗೆ ಮಾತನಾಡುತ್ತಾ ಐಶ್ವರ್ಯ ರೈ ಅವರ ಮುಗ್ದತೆ ಬಗ್ಗೆ ಉಲ್ಲೇಖಿಸಿ ಅದೇ ಕಾರಣಕ್ಕೆ ಈ ‘ಬೆಡಗಿಗೆ ಬಾಲಿವುಡ್ ಬೇಡ’ ಎನ್ನುವ ಸಲಹೆ ನೀಡಿದ್ದರಂತೆ.

ಇದನ್ನೂ ಓದಿ- ಮದುವೆಗೂ ಮುನ್ನವೇ ಗರ್ಭಿಣಿಯಾದ ಸ್ಟಾರ್ ನಟಿಯರು ಇವರು!

ಒಮ್ಮೆ ನೀವು ಗ್ಲಾಮರ್ ಇಂಡಸ್ಟ್ರಿಗೆ ಬಂದರೆ ಅದು ನಿಮ್ಮನ್ನು ಬದಲಾಯಿಸಲು ಪ್ರಾರಂಭಿಸುತ್ತದೆ. ನಿಮ್ಮನ್ನು ಅದು ಪ್ರಬುದ್ದಗೊಳಿಸುತ್ತದೆ, ಆಗ ನಿಮ್ಮಲ್ಲಿರುವ ಮುಗ್ದತೆ ಕಳೆದುಹೋಗುತ್ತದೆ. ಹಾಗೆಯೇ ಬಣ್ಣದಲೋಕ ಸೌಂದರ್ಯವನ್ನೂ ಆಹುತಿ ತೆಗೆದುಕೊಳ್ಳುತ್ತದೆ. ಸಿನಿಮಾ ರಂಗವನ್ನು ಸರಿಯಾಗಿ ನಿಭಾಯಿಸದಿದ್ದರೆ ಅದು ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿರುವ ಸಂಜಯ್ ದತ್ ಅವರು ‘ಐಶ್ವರ್ಯ ರೈಗೆ ಫಿಲಂ ಫಿಲ್ಡ್ ಗೆ ಬರಬೇಡ ಎಂದಿದ್ದು ಯಾವ ಕಾರಣಕ್ಕೆ?’ ಎಂಬುದನ್ನು  ವಿವರಿಸಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News