ದೀಪಾವಳಿಯ ದಿನ ʼತಮಲಪತ್ರʼದ ಮೇಲೆ ಈ ಪದವನ್ನು ಬರೆದು ತಾಯಿ ಲಕ್ಷ್ಮಿಗೆ ಅರ್ಪಿಸಿ..! ಬಯಕೆ ಈಡೇರುತ್ತದೆ

Diwali 2023 : ಮನೆಯ ಅಡುಗೆಮನೆಯಲ್ಲಿ ಇರುವ ಒಂದು ಎಲೆ ಕೂಡ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು ಅಂದ್ರೆ ನೀವು ನಂಬಲೇಬೇಕು. ಈ ಎಲೆ ಪರಿಹಾರ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಎಲ್ಲಾ ಹಣ ಸಂಬಂಧಿ ಸಮಸ್ಯೆಗಳನ್ನು ದೂರಮಾಡುತ್ತಾಳೆ. ಇದರೊಂದಿಗೆ ವ್ಯಕ್ತಿಯ ಆರ್ಥಿಕ ಸ್ಥಿತಿಯೂ ಸದೃಢವಾಗುತ್ತದೆ. ಬನ್ನಿ ಆ ಎಲೆ ಯಾವುದು.. ಏನ್‌ ಮಾಡ್ಬೇಕು ಅಂತ ತಿಳಿಯೋಣ..  

Written by - Krishna N K | Last Updated : Nov 11, 2023, 07:12 PM IST
  • ಒಂದು ಎಲೆ ಕೂಡ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು.
  • ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ, ಹಣ ಸಂಬಂಧಿ ಸಮಸ್ಯೆಗಳನ್ನು ದೂರಮಾಡುತ್ತಾಳೆ.
  • ಬನ್ನಿ ಆ ಎಲೆ ಯಾವುದು.. ಏನ್‌ ಮಾಡ್ಬೇಕು ಅಂತ ತಿಳಿಯೋಣ..
ದೀಪಾವಳಿಯ ದಿನ ʼತಮಲಪತ್ರʼದ ಮೇಲೆ ಈ ಪದವನ್ನು ಬರೆದು ತಾಯಿ ಲಕ್ಷ್ಮಿಗೆ ಅರ್ಪಿಸಿ..! ಬಯಕೆ ಈಡೇರುತ್ತದೆ title=

Diwali tricks : ದೀಪಾವಳಿ ಹಬ್ಬವನ್ನು ಭಾರತದಲ್ಲಿ ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮಿ ಮತ್ತು ಗಣಪತಿಯನ್ನು ಪೂಜಿಸುವುದು ವಾಡಿಕೆ. ಈ ಶುಭದಿನದಂದು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಕೆಲವು ಫಲಪ್ರದಾಯಕ ಮಾರ್ಗಗಳಿವೆ. ಅವುಗಳ ಪೈಕಿ ಈ ತಮಲಪತ್ರವೂ ಒಂದು. 

ಸಾಮಾನ್ಯವಾಗಿ ತಮಲಪತ್ರ ಎಲ್ಲರ ಮನೆಯ ಅಡುಗೆ ಮನೆಯಲ್ಲಿ ಕಂಡು ಬರುವ ಒಂದು ಮಸಾಲೆ ಎಲೆ. ಇದನ್ನು ಕಾಡು ದಾಲ್ಚಿನ್ನಿ ಅಂತಲೂ ಕರೆಯುತ್ತಾರೆ. ಇನ್ನೂ ಸರಳವಾಗಿ ಹೇಳ್ಬೇಕು ಅಂದ್ರೆ, ಬಿರಿಯಾನಿ ಎಲೆ. ಹೌದು.. ಈ ಎಲೆಯನ್ನು ಬಳಸಿ ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು. ಅದು ಹೇಗೆ ಎಂಬುವುದನ್ನು ತಿಳಿಯೋಣ ಬನ್ನಿ..

ಇದನ್ನೂ ಓದಿ: ನರಕ ಚತುರ್ದಶಿಯಂದು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸಲು ಇಲ್ಲಿವೆ ವಿಶೇಷ ಶುಭಾಶಯಗಳು

ಇಷ್ಟಾರ್ಥ ಸಿದ್ಧಿ : ದೀಪಾವಳಿಯ ದಿನದಂದು ತಮಲಪತ್ರದಲ್ಲಿ ಸಿಂಧೂರವನ್ನು ಅನ್ವಯಿಸಿ. ಈಗ ಅದರ ಮೇಲೆ ನಿಮ್ಮ ಇಷ್ಟಾರ್ಥವನ್ನು ಬರೆದು ನಿಮ್ಮ ಮನೆಯ ದೇವಸ್ಥಾನದಲ್ಲಿ ಅರ್ಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.

ಮನೆಯ ಶಾಂತಿಗಾಗಿ : ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದರೆ ಮತ್ತು ಗಂಡ ಹೆಂಡತಿಯರ ನಡುವೆ ಮನಸ್ತಾಪ ಉಂಟಾದರೆ ದೀಪಾವಳಿ ಪ್ರಾರಂಭದ ದಿನದಿಂದ ಹಿಡಿದು ಏಳು ದಿನಗಳ ಕಾಲ ಪ್ರತಿದಿನ ಸಂಜೆ ಮನೆಯಲ್ಲಿ ಎರಡು ವೀಳ್ಯದೆಲೆಯನ್ನು ಸುಡಬೇಕು. ಇದು ಸಂಬಂಧದಲ್ಲಿ ಮಧುರತೆಯನ್ನು ತರುತ್ತದೆ ಮತ್ತು ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಇದನ್ನೂ ಓದಿ: ನವರಾತ್ರಿಯಂದು ಹುಟ್ಟಿದ ಹೆಣ್ಣುಮಕ್ಕಳು ಅದೃಷ್ಟವಂತರೇ? ಇಲ್ಲಿದೆ ಕುತೂಹಲಕಾರಿ ರಹಸ್ಯ..!!

ಆರ್ಥಿಕ ಲಾಭಕ್ಕಾಗಿ : ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ವ್ಯಕ್ತಿಯು ದೀಪಾವಳಿಯಂದು ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಗೆ ತಮಲಪತ್ರವನ್ನು ಅರ್ಪಿಸಬೇಕು ಮತ್ತು ಪೂಜೆಯ ನಂತರ ತಮಲಪತ್ರವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಇದು ಸಂಪತ್ತನ್ನು ತರುತ್ತದೆ ಮತ್ತು ಸಂಪತ್ತು ನಿಮ್ಮೊಂದಿಗೆ ಉಳಿಯುವಂತೆ ಮಾಡುತ್ತದೆ.

ನಕಾರಾತ್ಮಕತೆಯನ್ನು ತೊಡೆದುಹಾಕಲು : 5 ತಮಲಪತ್ರದ ಎಲೆಗಳನ್ನು ತೆಗೆದುಕೊಂಡು ಅವುಗಳ ಮೇಲೆ 5 ಕರಿಮೆಣಸು ಹಾಕಿ ಸುಟ್ಟು ಹಾಕಿ. ನಂತರ ಅದರ ಹೊಗೆಯನ್ನು ಮನೆಯ ತುಂಬ ಹರಡುವಂತೆ ಮಾಡಿ. ಹೀಗೆ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕತೆ ದೂರವಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News