Teacher's Day Special: Success Mantra: ಇಡೀ ವಿಶ್ವವೇ ಒಂದು ಶಾಲೆ' ಇಲ್ಲಿವೆ ಕೆಲ ಪ್ರೇರಣೆ ನೀಡುವ Quotes

 ಈ ಮಾಜಿ ರಾಷ್ಟ್ರಪತಿ ಇಡೀ ವಿಶ್ವವೇ ಒಂದು ಶಾಲೆ, ಇಲ್ಲಿ ನಿತ್ಯ ಏನನ್ನಾದರೂ ಕಲಿಯುವ ಅವಕಾಶ ಸಿಗುತ್ತದೆ' ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಶಿಕ್ಷಣ ತಜ್ಞ.

Last Updated : Sep 5, 2020, 12:31 PM IST
  • 1.ಇಂದು ಸೆಪ್ಟೆಂಬರ್ 05, ಮಹಾನ್ ಶಿಕ್ಷಣ ತಜ್ಞ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನ.
    2. ಇಂದಿನ ದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲಾಗುತ್ತದೆ.
    3.ಇಡೀ ವಿಶ್ವವೇ ಒಂದು ಶಾಲೆ, ನಿತ್ಯ ಹೊಸದನ್ನು ಕಲಿಸುತ್ತದೆ ಎಂದು ಜಗತ್ತಿಗೆ ಸಾರಿ ಹೇಳಿದ ಮಹಾನ್ ರಾಷ್ಟ್ರಪತಿ
Teacher's Day Special: Success Mantra: ಇಡೀ ವಿಶ್ವವೇ ಒಂದು ಶಾಲೆ' ಇಲ್ಲಿವೆ ಕೆಲ ಪ್ರೇರಣೆ ನೀಡುವ Quotes title=

ನವದೆಹಲಿ: ಸೆಪ್ಟೆಂಬರ್ 5 ರಂದು ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞ ಡಾ.ಸರ್ವಪಲ್ಲಿ ರಾಧಾ ಕೃಷ್ಣನ್ ಅವರ ಜಯಂತಿ . ಅವರ ಜನ್ಮದಿನವನ್ನು 'ಶಿಕ್ಷಕರ ದಿನ' (Teacher's Day) ಎಂದು ಆಚರಿಸಲಾಗುತ್ತದೆ. ಈ ಮಾಜಿ ರಾಷ್ಟ್ರಪತಿ ಇಡೀ ವಿಶ್ವವೇ ಒಂದು ಶಾಲೆ, ಇಲ್ಲಿ ನಿತ್ಯ ಏನನ್ನಾದರೂ ಕಲಿಯುವ ಅವಕಾಶ ಸಿಗುತ್ತದೆ' ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಶಿಕ್ಷಣ ತಜ್ಞ.

- ಕಲಿಯಲು ಪ್ರೇರೇಪಣೆ ನೀಡದೆ ತನ್ನ ಶಿಷ್ಯರಿಗೆ ಪಾಠ ಹೇಳಿ ಕೊಡುವ ಶಿಕ್ಷಕನ ಕೆಲಸ ಅಂದರೆ ತಣ್ಣನೆಯ ಕಬ್ಬಿಣದ ಮೇಲೆ ಏಟು ಕೊಟ್ಟಂತೆ- ಹೆರೆಸ್ ಮೆನ್
- ಓರ್ವ ವಿದ್ಯಾರ್ಥಿಯಲ್ಲಿನ ಸೃಜನಶೀಲ ಮನೋಭಾವ ಹಾಗೂ ಜ್ಞಾನವನ್ನು ಬೆಳೆಸುವುದು ಶಿಕ್ಷಕನ ಪ್ರಮುಖ ಗುಣವಾಗಿದೆ-ಅಲ್ಬರ್ಟ್ ಐನ್ಸ್ಟೀನ್ 
- ತಂತ್ರಜ್ಞಾನ ಕೇವಲ ಒಂದು ಸಾಧನ. ಆದರೆ, ಮಕ್ಕಳನ್ನು ಪ್ರೇರೇಪಿಸುವುದು ಓರ್ವ ಶಿಕ್ಷಕನ ಪ್ರಮುಖ ಕರ್ತವ್ಯ- ಬಿಲ್ ಗೇಟ್ಸ್
- ಶುದ್ಧ ಮನಸ್ಸುಳ್ಳ ವ್ಯಕ್ತಿ ಮಾತ್ರ ಜಾವನದ ಆಧ್ಯಾತ್ಮಿಕ ಅರ್ಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ತನ್ನೊಂದಿಗೆ ತಾನು ಪ್ರಾಮಾಣಿಕತೆಯಿಂದ ಇರುವುದು ಆಧ್ಯಾತ್ಮಿಕ ಸಮಗ್ರತೆಗೆ ಕಡ್ಡಾಯವಾಗಿದೆ- ಸವಪಲ್ಲಿ ರಾಧಾಕೃಷ್ಣನ್ .
- ಬಲವಂತವಾಗಿ ವಿಧ್ಯಾರ್ಥಿಗಳಲ್ಲಿ ಜ್ಞಾನ ತುಮ್ಬುವವ ನಿಜವಾದ ಶಿಕ್ಷಕನಲ್ಲ. ಜೀವನದಲ್ಲಿ ಎದುರಾಗುವ ಕಠಿಣ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವವನು ನಿಜವಾದ ಶಿಕ್ಷಕ - ಸರ್ವಪಲ್ಲಿ ರಾಧಾಕೃಷ್ಣನ್.
- ವೈಚಾರಿಕ ಸ್ವಾತಂತ್ರ್ಯ ಸಿಗದ ಹೊರತು ಯಾವುದೇ ಸ್ವಾತಂತ್ರ್ಯ ಸತ್ಯ ಅಥವಾ ಪರಿಪೂರ್ಣ ಅಲ್ಲ. ಯಾವುದೇ ಧಾರ್ಮಿಕ ನಂಬಿಕೆ ಅಥವಾ ರಾಜನೈತಿಕ ಸಿದ್ಧಾಂತ ಸತ್ಯ ಅನ್ವೇಷಣೆಯಲ್ಲಿ ಅಡೆತಡೆ ಉಂಟುಮಾಡಬಾರದು-ಸರ್ವಪಲ್ಲಿ ರಾಧಾಕೃಷ್ಣನ್

Trending News