ಹಿಂದಿಯಲ್ಲಿ 'ಕುರಾನ್' ಓದುತ್ತಿರುವ ಗೋವಾ ಸಿಎಂ ಹೇಳಿದ್ದೇನು?

ನಮ್ಮ ಧರ್ಮವು ಎಲ್ಲರಿಗಿಂತ ಶ್ರೇಷ್ಠವಾದುದರಿಂದ, ಇತರ ಧರ್ಮಗಳನ್ನೂ ಗೌರವಿಸಬೇಕು ಎಂದು ಕುರಾನ್ ಹೇಳುತ್ತದೆ.

Last Updated : Nov 11, 2019, 12:02 PM IST
ಹಿಂದಿಯಲ್ಲಿ 'ಕುರಾನ್' ಓದುತ್ತಿರುವ ಗೋವಾ ಸಿಎಂ ಹೇಳಿದ್ದೇನು? title=

ಪಣಜಿ (ಗೋವಾ): "ಕುತೂಹಲ"ವಿರುವುದರಿಂದ ಪ್ರಸ್ತುತ ಪವಿತ್ರ ಪುಸ್ತಕ ಕುರಾನ್‌ನ ಹಿಂದಿ ಅನುವಾದವನ್ನು ಓದುತ್ತಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್(Pramod Sawant) ಅವರು ಹೇಳಿದ್ದಾರೆ.

"ಕುರಾನ್‌ನಲ್ಲಿ ಏನಿದೆ ಎಂದು ತಿಳಿಯಲು ನಾನು ಬಯಸಿದ್ದೆ. ಅದನ್ನು ಓದಲು ನನಗೆ ಕುತೂಹಲವಿತ್ತು. ಹಿಂದಿಯಲ್ಲಿ ಭಾಷಾಂತರಿಸಲಾದ ಒಂದು ಪ್ರತಿಯನ್ನು ನನಗೆ ಕೊಡುವಂತೆ ನಾದಿರ್ ಭಾಯ್‌ಗೆ ಹೇಳಿದೆ. ನಾನು ಅದನ್ನು ಓದಲು ಪ್ರಯತ್ನಿಸುತ್ತೇನೆ" ಎಂದು ಸಾವಂತ್ ಈದ್ ಸಂದರ್ಭದಲ್ಲಿ ಹೇಳಿದರು. ಸಾವಂತ್ ಅವರ ವಿಧಾನಸಭಾ ಕ್ಷೇತ್ರವಾದ ಸ್ಯಾಂಕ್ವೆಲಿಮ್‌ನಲ್ಲಿ ಭಾನುವಾರ ಈದ್-ಇ-ಮಿಲಾದ್-ಅನ್-ನಬಿ ಕಾರ್ಯವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, "ಪವಿತ್ರ ಪುಸ್ತಕದಲ್ಲಿ ಕಲಿಸಿದ ಪಾಠಗಳನ್ನೂ ಉಲ್ಲೇಖಿಸಿದ್ದಾರೆ. ಪುಸ್ತಕವು ಅದರ ಧರ್ಮವು ಶ್ರೇಷ್ಠವಾದುದು ಎಂದು ಕಲಿಸುತ್ತದೆ. ಆದರೆ ಇತರ ಧರ್ಮಗಳನ್ನು ಸಹ ಗೌರವಿಸಬೇಕು ಹೇಳುತ್ತದೆ" ಎಂದು ಅವರು ಹೇಳಿದರು.

"ಕುರ್‌ಆನ್‌ನಲ್ಲಿ ಮಾನವರು ಎಲ್ಲಕ್ಕಿಂತ (ಜಾತಿ) ಮಹತ್ವದ ಸ್ಥಾನ ಪಡೆದಿದ್ದಾರೆ. ನಮ್ಮ ಧರ್ಮವು ಎಲ್ಲರಿಗಿಂತ ಶ್ರೇಷ್ಠವಾದುದರಿಂದ, ಇತರ ಧರ್ಮಗಳನ್ನೂ ಗೌರವಿಸಬೇಕು ಎಂದು ಕುರಾನ್ ಹೇಳುತ್ತದೆ" ಎಂದು ಸಿಎಂ ಹೇಳಿದರು.

"ತನಗೆ ಉಡುಗೊರೆಯಾಗಿರುವ ದೊರೆತಿರುವ ಪವಿತ್ರ ಬೈಬಲ್ ಅನ್ನು ಓದುವ ಪ್ರಕ್ರಿಯೆಯಲ್ಲಿದ್ದೇನೆ. ನಾನು ಬೈಬಲ್ ಓದಲು ಸಹ ಪ್ರಯತ್ನಿಸುತ್ತಿದ್ದೇನೆ. ಕುರಾನ್ ಅಥವಾ ಬೈಬಲ್ ಅಥವಾ ಭಗವತ್ಗೀತೆ ಇತರ ಧರ್ಮಗಳನ್ನು ಅಪಖ್ಯಾತಿಗೊಳಿಸಬೇಕೆಂದು ಹೇಳುವುದಿಲ್ಲ" ಎಂದು ಸಾವಂತ್ ಹೇಳಿದರು.

[With ANI Inputs]

Trending News