ವಾರಾಣಾಸಿ: ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಚಂದೌಲಿ ಬಳಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ 'ಕಾಶಿ ಮಹಾಕಾಲ್ ಎಕ್ಸಪ್ರೆಸ್' ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಈ ರೈಲು ಕಾಶಿ ವಿಶ್ವನಾಥನ ನಗರವಾಗಿರುವ ವಾರಣಾಸಿಯಿಂದ ಇಂದೋರ್ ಮಧ್ಯೆ ಚಲಿಸಲಿದೆ. 'ಕಾಶಿ ಮಹಾಕಾಲ್ ಎಕ್ಸಪ್ರೆಸ್' ಮೂರು ಜೋತಿರ್ಲಿಂಗಗಳ (ಬಾಬಾ ವಿಶ್ವನಾಥ, ಮಹಾಕಾಲೇಶ್ವರ ಹಾಗೂ ಓಂಕಾರೇಶ್ವರ) ಯಾತ್ರೆಯನ್ನು ಜೋಡಿಸಲಿದೆ. ಈ ಮೊದಲ ಯಾತ್ರೆಯ ವಿಶೇಷತೆ ಏನೆಂದರೆ ಈ ರೈಲಿನಲ್ಲಿ ಮಕಾಕಾಲೇಶ್ವರನಿಗಾಗಿ ಸೀಟ್ ಕೂಡ ಕಾಯ್ದಿರಿಸಲಾಗಿತ್ತು. ಅಷ್ಟೇ ಅಲ್ಲ ರೇಲ್ವೆ ಅಧಿಕಾರಿಗಳ ಪ್ರಕಾರ , ಮುಂದೆಯೂ ಕೂಡ ಈ ಸೀಟ್ ಅನ್ನು ದೇವಾಧಿದೇವ ಮಹಾದೇವ ಶಿವನಿಗಾಗಿ ಕಾಯ್ದಿರಿಸಲಾಗುವುದು ಎಂದು ಹೇಳಿದ್ದಾರೆ.
ರೇಲ್ವೆ ಇತಿಹಾಸದಲ್ಲಿ ಮೊದಲ ಪ್ರಯತ್ನ ಇದು
ಕಾಶಿ ಮಹಾಕಾಲ್ ಎಕ್ಸಪ್ರೆಸ್ ರೈಲಿನ ಕೋಚ್ B5 ನ ಸೀಟ್ ನಂಬರ್ 64ರ ಮೇಲೆ ದೇವಾಧಿದೇವ ಶಿವನ ಭಾವಚಿತ್ರವನ್ನು ಇಟ್ಟು ಸಿಂಗರಿಸಲಾಗಿದೆ. ಭಾರತೀಯ ರೈಲಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಾಬಾ ಮಹಾಕಾಲ್ ಗಾಗಿ ರೈಲಿನಲ್ಲಿ ಬರ್ತ್ ಕಾಯ್ದಿರಿಸಲಾಗಿದೆ. ಕಳೆದ ಭಾನುವಾರ ಈ ರೈಲು ವಾರಾಣಾಸಿಯಿಂದ ಇಂದೋರ್ ಗೆ ರವಾನೆಯಾಗಿದೆ.
ಓಂ ನಮಃ ಶಿವಾಯ್ ಧ್ವನಿ
ವಾರನಾಸಿಯಿಂದ ಇಂದೋರ್ ಮಧ್ಯೆ ವಾರದಲ್ಲಿ ಮೂರು ಬಾರಿಗೆ ಚಲಿಸುವ ಈ ಟ್ರೈನ್ ನಲ್ಲಿ ಭಕ್ತಿ-ಭಾವದ ಸಂಗೀತ ಕೇಳಿ ಬರಲಿದೆ. ಭಾನುವಾರ ಈ ಟ್ರೈನ್ ನಲ್ಲಿ 'ಓಂ ನಮಃ ಶಿವಾಯ್' ಸಂಗೀತ ಕೇಳಿ ಬರುತ್ತಿತ್ತು. ಈ ಟ್ರೈನ್ ನ ಈ ಪ್ರತ್ಯೇಕ ಕೋಚ್ ನಲ್ಲಿ ಇಬ್ಬರು ಖಾಸಗಿ ಗಾರ್ಡ್ ಹಾಗೂ ಯಾತ್ರಿಗಳಿಗೆ ಶಾಕಾಹಾರಿ ಊಟ ಕೂಡ ನೀಡಲಾಗಿದೆ.
ಇವು ಟ್ರೈನ್ ನ ಎರಡು ರೂಟ್ ಗಳಾಗಿವೆ
ಈ ಕುರಿತು ಮಾಹಿತಿ ನೀಡಿರುವ ರೇಲ್ವೆ ಅಧಿಕಾರಿ ಅಶ್ವಿನಿ ಶ್ರೀವಾಸ್ತವ್ ಮಹಾಕಾಲ್ ಎಕ್ಸಪ್ರೆಸ್ ಯುಪಿ ಹಾಗೂ ಮಧ್ಯಪ್ರದೇಶದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಬಯಸುವ ಯಾತ್ರಿಗಳಿಗೆ ಒಂದು ಉತ್ತಮ ಆಯ್ಕೆಯಾಗಿದ್ದು, ಇದರಿಂದ ಎರಡು ರಾಜ್ಯಗಳ ಪ್ರವಾಸೋದ್ಯಮಕ್ಕೆ ಲಾಭಕಾರಿಯಾಗಿ ಪರಿಣಮಿಸಲಿದೆ ಎಂದಿದ್ದಾರೆ.
8 ತೀರ್ಥಕ್ಷೇತ್ರಗಳನ್ನು ಸುತ್ತಾಡುವ ಪ್ಯಾಕೇಜ್
ವಾರಣಾಸಿಯಿಂದ ಇಂದೋರ್ ಮಧ್ಯೆ ಫೆಬ್ರುವರಿ 20ರಂದು ಚಲಾಯಿಸಲಾಗುವ ಕಾಶಿ-ಮಹಾಕಾಲ್ ಎಕ್ಸಪ್ರೆಸ್ ರೈಲಿನಲ್ಲಿ 8 ತೀರ್ಥಕ್ಷೇತ್ರಗಳನ್ನು ಸುತ್ತಾಡಲು ಪ್ಯಾಕೇಜ್ ಕೂಡ ಇರಲಿದೆ. IRCTC ವಾರಣಾಸಿ, ಅಯೋಧ್ಯಾ, ಪ್ರಯಾಗ್ ರಾಜ್, ಇಂದೋರ್, ಉಜ್ಜೈನ್, ಭೋಪಾಲ್ ನ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಸುತ್ತಾಡಲು ಈ ಪ್ಯಾಕೇಜ್ ಸಿದ್ಧಪಡಿಸಿದೆ.
ಶಿವನ ಸೀಟ್ ಕುರಿತು ರಾಜಕೀಯ
ಕಾಶಿ ಮಹಾಕಾಲ್ ಎಕ್ಸಪ್ರೆಸ್ ರೈಲಿನಲ್ಲಿ ಮಹಾದೇವ ಶಿವನಿಗಾಗಿ ಕಾಯ್ದಿರಿಸಲಾಗಿರುವ ಸೀಟ್ ಕುರಿತು ಇದೀಗ ರಾಜಕೀಯ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಈ ಕುರಿತು ಪ್ರಧಾನಿ ಮೋದಿಯನ್ನು ಗುರಿಯಾಗಿಸಿರುವ AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ, ಟ್ವೀಟ್ ಮಾಡಿ ಭಾರತೀಯ ಸಂವಿಧಾನದ ಒಂದು ಪ್ರಸ್ತಾಪನೆಯನ್ನು ನೆನಪಿಸಿ ಕೊಟ್ಟಿದ್ದಾರೆ.