ಮನೆ ಅಥವಾ ಫ್ಲಾಟ್ ಖರೀದಿ ಮುನ್ನ ತಿಳಿದಿರಲೇ ಬೇಕಾದ ಅಂಶಗಳಿವು

ಭೂಮಿಯ ಶುಭ -ಅಶುಭ ಅಥವಾ ಧನಾತ್ಮಕ-ಋಣಾತ್ಮಕ ಶಕ್ತಿಯ ಪರಿಣಾಮ ಬಂಗಲೆ ಅಥವಾ ಮನೆಯನ್ನು ಕಟ್ಟುವ ಸಂದರ್ಭಕ್ಕೆ ಮಾತ್ರ ಸಂಬಂಧಿಸಿಲ್ಲ. ಫ್ಲಾಟ್ ಖರೀದಿ ವೇಳೆ ಕೂಡಾ, ಭೂಮಿಯ ಈ ಅಂಶಗಳನ್ನು ಪರಿಶೀಲಿಸುವುದು ಬಹಳ ಮುಖ್ಯ.

Written by - Ranjitha R K | Last Updated : Sep 5, 2021, 10:18 AM IST
  • ಮನೆಯ ನಿರ್ಮಾಣದ ವೇಳೆ ಆ ಭೂಮಿಯ ಬಗ್ಗೆಯೂ ತಿಳಿದಿರಬೇಕು
  • ಫ್ಲಾಟ್ ಖರೀದಿಸುವುದಾದರೆ 3 ಮಹಡಿಗಳಿಂದ ಎತ್ತರದಲ್ಲಿರಲಿ
  • ಸ್ಮಶಾನ ಭೂಮಿಯಲ್ಲಿ ನಿರ್ಮಿಸಿದ ಮನೆಯನ್ನು ಎಂದಿಗೂ ಖರೀದಿಸಬೇಡಿ
ಮನೆ ಅಥವಾ ಫ್ಲಾಟ್ ಖರೀದಿ ಮುನ್ನ ತಿಳಿದಿರಲೇ ಬೇಕಾದ ಅಂಶಗಳಿವು  title=
ಮನೆಯ ನಿರ್ಮಾಣದ ವೇಳೆ ಆ ಭೂಮಿಯ ಬಗ್ಗೆಯೂ ತಿಳಿದಿರಬೇಕು (file photo)

ನವದೆಹಲಿ : ಮನೆ ಖರೀದಿಸುವಾಗ ಅಥವಾ ನಿರ್ಮಿಸುವಾಗ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮನೆಯಲ್ಲಿರುವ ಕೋಣೆಗಳು-ಅಡುಗೆಮನೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಗೃಹ ಪ್ರವೇಶದ ಸಮಯದಲ್ಲಿ, ವಾಸ್ತು ಪೂಜೆಯನ್ನು (Vastu Pooja) ಮಾಡಲಾಗುತ್ತದೆ. ಮನೆಯೊಳಗೆ ಎಲ್ಲಾ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇರಿಸುವ ನಿಯಮಗಳನ್ನು ಅನುಸರಿಸಲಾಗುತ್ತದೆ. ಇದರ ನಡುವೆ ಮನೆಯನ್ನು ಯಾವ ಸ್ಥಳದಲ್ಲಿ ನಿರ್ಮಿಸಲಾಗಿದೆ ಎನ್ನುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಆದರೆ ತಿಳಿದಿರಲೇ ಬೇಕಾದ ವಿಷಯ ಎಂದರೆ, ಮನೆ ಎಷ್ಟು ಮುಖ್ಯವೋ ಅದನ್ನು ನಿರ್ಮಿಸುವ ಜಾಗ ಕೂಡಾ  ಅಷ್ಟೇ ಮುಖ್ಯ. ಯಾಕೆಂದರೆ ಮನೆ ನಿರ್ಮಿಸುವ ಭೂಮಿ ಸರಿಯಾಗಿರದಿದ್ದರೆ, ಋಣಾತ್ಮಕ ಪರಿಣಾಮ ಬೀರುವುದೇ ಹೆಚ್ಚು. ಮನೆ ನಿರ್ಮಾಣದ ಭೂಮಿಯೇ ಸರಿಯಿರದಿದ್ದರೆ, ಯಾವ ವಾಸ್ತು ಉಪಾಯ (Vastu Tips) ಮಾಡಿದರೂ, ಸಂತೋಷ ಇರಲು ಸಾಧ್ಯವಿಲ್ಲ.

ಫ್ಲ್ಯಾಟ್ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ :
ಭೂಮಿಯ ಶುಭ -ಅಶುಭ ಅಥವಾ ಧನಾತ್ಮಕ-ಋಣಾತ್ಮಕ ಶಕ್ತಿಯ (Negetive energy) ಪರಿಣಾಮ ಬಂಗಲೆ ಅಥವಾ ಮನೆಯನ್ನು ಕಟ್ಟುವ ಸಂದರ್ಭಕ್ಕೆ ಮಾತ್ರ ಸಂಬಂಧಿಸಿಲ್ಲ. ಫ್ಲಾಟ್ ಖರೀದಿ ವೇಳೆ ಕೂಡಾ, ಭೂಮಿಯ ಈ ಅಂಶಗಳನ್ನು ಪರಿಶೀಲಿಸುವುದು ಬಹಳ ಮುಖ್ಯ.

ಇದನ್ನೂ ಓದಿ : Astrology: ಸೆಪ್ಟೆಂಬರ್ 14 ರವರೆಗೆ ಗುರುವಿನ ಹಿಮ್ಮುಖ ಚಲನೆ, ಈ ಮೂರು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

ಹಾಗಿದ್ದರೆ ಮನೆ ಕಟ್ಟುವ ಅಥವಾ ಖರೀದಿ ವೇಳೆ ನೆನಪಿಡಬೇಕಾದ ಅಂಶಗಳು ಯಾವುವು ನೋಡೋಣ..  
ಮನೆ ಕಟ್ಟುವ ಮೊದಲು, ಆ ಸ್ಥಳದಲ್ಲಿ ಮೊದಲು ಸ್ಮಶಾನವಾಗಿರಲಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.  ಒಂದು ವೇಳೆ ಹಾಗೇನಾದರೂ ಇದ್ದರೆ ಆ ಭೂಮಿಯ (Land) ಸಹವಾಸಕ್ಕೆ ಹೋಗಬೇಡಿ.

- ಫ್ಲಾಟ್ ತೆಗೆದುಕೊಳ್ಳುವಾಗಲೂ, ಆ ಭೂಮಿಯಲ್ಲಿ ಹಿಂದೆಂದೂ ಸ್ಮಶಾನ ಇರಲಿಲ್ಲ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಒಂದು ವೇಳೆ ಸ್ಮಶಾನದ ಜಾಗದಲ್ಲಿ ಫ್ಲಾಟ್ ನಿರ್ಮಾಣವಾಗಿದ್ದರೆ, 3 ಮಹಡಿಗಳಿಗಿಂತ ಎತ್ತರದಲ್ಲಿರುವ ಫ್ಲಾಟ್ ಖರೀದಿಸಿ. ಅಷ್ಟು ಎತ್ತರದಲ್ಲಿ ಮನೆ ತೆಗೆದುಕೊಂದರೆ ಜಮೀನಿನ ನಕಾರಾತ್ಮಕ ಶಕ್ತಿಯ ಪರಿಣಾಮವು ಅಂತ್ಯವಾಗುತ್ತದೆ. 

ಇದನ್ನೂ ಓದಿ : Ganesh Chaturthi 2021 : ಈ ದಿನದಿಂದ ಆರಂಭವಾಗಲಿದೆ ಗಣೇಶ ಉತ್ಸವ, ಈ ಶುಭ ಮುಹೂರ್ತದಲ್ಲಿ ಮನೆಗೆ ಬರಲಿ ಗಣಪ

ನೀವು ಮನೆಯನ್ನು ನಿರ್ಮಿಸುತ್ತಿದ್ದರೆ, ವಾಸ್ತು ನಿಯಮಗಳ (Vastu Tips) ಪ್ರಕಾರ ಯಾವಾಗಲೂ ಅದರ ನಕ್ಷೆಯನ್ನು ತಯಾರಿಸಿ. ಈ ಪ್ರಕಾರ ಅಡುಗೆ ಮನೆ ಅಗ್ನಿ ಮೂಲೆಯಲ್ಲಿರಲಿ. ಸ್ನಾನಗೃಹ-ಶೌಚಾಲಯ (Bath room) ನೈಋತ್ಯದಲ್ಲಿರಬೇಕು. ಪೂಜೆಯ ಮನೆ ಈಶಾನ್ಯದಲ್ಲಿರಬೇಕು. ಇನ್ನು ಮಲಗುವ ಕೋಣೆ ಪೂರ್ವ-ದಕ್ಷಿಣ ದಿಕ್ಕಿನಲ್ಲಿ ಇರಬಾರದು ಎನ್ನುವುದನ್ನು ಕೂಡಾ ಖಚಿತಪಡಿಸಿಕೊಳ್ಳಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News