40 ದಿನದ‌ ಕಂದಮ್ಮನನ್ನು ಕದ್ದು ಪರಾರಿಯಾಗಿದ್ದ ಬುರ್ಖಾ ಲೇಡಿ ಅಂದರ್‌..!

40 ದಿನಗಳ ಮಗು ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು. ನಿದ್ರೆಯಿಂದ ಎಚ್ಚರಗೊಡ ತಾಯಿ ಮೇರೆ ಬಚ್ಚೇ ಕಹಾ ಕಹಾ ಎಂದು ಚೀರಾಡುತ್ತಿದ್ದಳು. ಆ ಓಣಿಯಲ್ಲಿ ಬುರ್ಖಾ ತೊಟ್ಟ ಹೆಂಗಸು ಹೋಗುತ್ತಿದ್ದಾಳೆ.. ಆ ಲೇಡಿ ಹೆಗಲ ಮೇಲೆ ಪುಟ್ಟ ಕಂದಮ್ಮ ನನ್ನು ಎತ್ತಿಕೊಂಡು ಸಾಗ್ತಿದ್ದಾಳೆ.. ಅಂದಹಾಗೆ ಎಳೆಯ ಕಂದಮ್ಮ ನನ್ನು ಕಲಾಸಿಪಾಳ್ಯದ ದುರ್ಗಮ್ಮ ಬೀದಿಯ ಮನೆಯೊಂದರಿಂದ ಕದ್ದು ಪರಾರಿಯಾಗಿದ್ದಳು.. 

Written by - VISHWANATH HARIHARA | Edited by - Krishna N K | Last Updated : Mar 25, 2023, 07:28 PM IST
  • 40 ದಿನದ ಕಂದಮ್ಮನ ಕದ್ದು ಪರಾರಿ.!
  • ಅನುಮಾನಸ್ಪದವಾಗಿ ವರ್ತಿಸಿ ತಗ್ಲಾಕಿಕೊಂಡ ಬುರ್ಖಾ ಲೇಡಿ..!
  • 40 ದಿನದ‌ ಕಂದಮ್ಮನನ್ನು ಕದ್ದು ಪರಾರಿಯಾಗಿದ್ದ ಬುರ್ಖಾ ಲೇಡಿ ಅಂದರ್‌

Trending Photos

40 ದಿನದ‌ ಕಂದಮ್ಮನನ್ನು ಕದ್ದು ಪರಾರಿಯಾಗಿದ್ದ ಬುರ್ಖಾ ಲೇಡಿ ಅಂದರ್‌..! title=

ಬೆಂಗಳೂರು : ಮನೆಯಲ್ಲಿ ತನ್ನ ಮಗುವನ್ನು ಮುದ್ದಾಡಿ ತಾಯಿ ಎದೆಹಾಲುಣಿಸಿ ಮಲಗಿದ್ದಳು. ತಾಯಿಯ ಮಗ್ಗಲಲ್ಲೇ ಮಲಗಿದ್ದ 40 ದಿನಗಳ ಕೂಸು ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು. ನಿದ್ರೆಯಿಂದ ಎಚ್ಚರಗೊಡ ತಾಯಿ ಮೇರೆ ಬಚ್ಚೇ ಕಹಾ ಕಹಾ ಎಂದು ಚೀರಾಡುತ್ತಿದ್ದಳು. ಅಷ್ಟೇ ಆ ಮಗು ಎಲ್ಲಿ ಹೋಗಿತ್ತು, ಏನಾಗಿತ್ತು ಅನ್ನೋದೇ ಇಟ್ರಸ್ಟಿಂಗ್..

ಅದೊಂದು ಪುಟ್ಟ ಓಣಿ.. ಆ ಓಣಿಯಲ್ಲಿ ಬುರ್ಖಾ ತೊಟ್ಟ ಹೆಂಗಸು ಹೋಗುತ್ತಿದ್ದಾಳೆ.. ಆ ಲೇಡಿ ಹೆಗಲ ಮೇಲೆ ಪುಟ್ಟ ಕಂದಮ್ಮ ನನ್ನು ಎತ್ತಿಕೊಂಡು ಸಾಗ್ತಿದ್ದಾಳೆ.. ಅಂದಹಾಗೆ ಎಳೆಯ ಕಂದಮ್ಮ ನನ್ನು ಕಲಾಸಿಪಾಳ್ಯದ ದುರ್ಗಮ್ಮ ಬೀದಿಯ ಮನೆಯೊಂದರಿಂದ ಕದ್ದು ಪರಾರಿಯಾಗಿದ್ದಳು.. ತಾಯಿ ಫರ್ಹೀನ್‌ಳ ಎದೆಹಾಲು ಕುಡಿದು ನೆಮ್ಮದಿಯಾಗಿ ಮಲಗಿದ್ದ ಮಗುವನ್ನು ಕದ್ದಿದ್ದು ನಂದಿನಿ ಅಲಿಯಾಸ್ ಆಯೆಷಾ.. ಕಲಾಸಿಪಾಳ್ಯದಲ್ಲಿ ಮಗುವನ್ನು ಕದ್ದು ಮಾಗಡಿರಸ್ತೆಯ ರೈಲ್ವೇ ಕ್ವಾಟ್ರಸ್ ಬಳಿ ಅನುಮಾನಸ್ಪದವಾಗಿ ತಿರುಗುತ್ತಿರುತ್ತಾಳೆ.. 

ಇದನ್ನೂ ಓದಿ: ಬಿಜೆಪಿಗರು ಕೌರವರು.. ಮದವೇರಿ ಮೆರೆಯುತ್ತಿದ್ದಾರೆ..!

ಮಗು ಅಳುವಾಗ ಹಾಲುಣಿಸದೇ ಇದ್ದ ಈಕೆಯ ನಡೆ ಕಂಡು ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.. ಅಷ್ಟೇ ಹೊಯ್ಸಳ ಸಿಬ್ಬಂದಿ ಈಕೆಯನ್ನು ಕರೆದುಕೊಂಡು ಹೋಗಿ ವಿಚಾರಿಸದಾಗ ಮಗು ಕಳ್ಳತನದ ವಿಷಯ ಬಯಲಾಗಿದೆ.. ಇನ್ನು ಮಗುವಿನ ತಾಯಿಯ ವಿಳಾಸವನ್ನು ಪತ್ತೆಹಚ್ಚಿದ ಪೊಲೀಸರು ತಾಯಿ ಮಗುವನ್ನು ಕಳ್ಳತನದ ನಡೆದ ಕೆಲವೇ ಗಂಟೆಗಳಲ್ಲಿ ಒಂದು ಮಾಡಿದ್ದಾರೆ.. 

ಮಗು ಕಳ್ಳತನವಾಗಿದೆ ಎಂಬುದನ್ನು ಪತ್ತೆ ಮಾಡುವ ಕಾರ್ಯದಲ್ಲಿ ಮಾಗಡಿ ರಸ್ತೆಯ ನಿವಾಸಿಗಳ ಶ್ರಮ ಪ್ರಮುಖವಾಗಿದೆ.. ಹಿಂದೂ ಮಹಿಳೆ ಬುರ್ಖಾ ತೊಟ್ಟು ಮಗುವಿನ ಕಳ್ಳತನ ಮಾಡಿದ್ದೇಕೆ ಎಂಬ ನಿಖರ ಮಾಹಿತಿ ಹೊರಬರಬೇಕಿದೆ. ಸದ್ಯ ಕಲಾಸಿಪಾಳ್ಳ ಪೊಲೀಸರು ನಂದಿನಿ ಅಲಿಯಾಸ್ ಆಯೆಷಾಳನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ನಂದಿನಿ ಪಿಕ್ ಪ್ಯಾಕೆಟ್ ಮಾಡುತ್ತಿದ್ದ ಮಹಿಳೆ ಎನ್ನಲಾಗುತ್ತಿದ್ದು ಮಗುಕಳ್ಳತನಕ್ಕೆ ಇಳಿದಿದ್ದೇಕೆ ಎಂಬುದು ತನಿಖೆಯ ಬಳಿಕವಷ್ಟೇ ತಿಳಿಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News