ಜೈಲಿನಿಂದ ಹೊರ ಬಂದ ವಿಲ್ಸನ್ ಗಾರ್ಡನ್ ನಾಗ.. ಸೋಷಿಯಲ್‌ ಮೀಡಿಯಾಲ್ಲಿ ಹವಾ ಬಲು ಜೋರು

ಬೆಂಗಳೂರು ಭೂಗತ ಜಗತ್ತಿನ ಮೋಸ್ಟ್ ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಇಂದು ಮುಂಜಾನೆ ಜೈಲಿನಿಂದ ರಿಲೀಸ್ ಆಗಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಾಗ ಇಂದು ರಿಲೀಸ್ ಆಗಿದ್ದಾನೆ.  

Written by - VISHWANATH HARIHARA | Edited by - Zee Kannada News Desk | Last Updated : Jun 29, 2022, 02:14 PM IST
  • ಒಂದೂವರೆ ವರ್ಷದ ಬಳಿಕ ಜೈಲಿಂದ ಬಂದ
  • ಒಂದೂವರೆ ವರ್ಷದ ಬಳಿಕ ಜೈಲಿಂದ ಬಂದ ವಿಲ್ಸನ್ ಗಾರ್ಡನ್ ನಾಗ
  • ಬೆಂಗಳೂರು ಭೂಗತ ಜಗತ್ತಿನ ಮೋಸ್ಟ್ ನಟೋರಿಯಸ್ ರೌಡಿ ಶೀಟರ್
  • ಸೋಷಿಯಲ್‌ ಮೀಡಿಯಾಲ್ಲಿ ಹವಾ ಬಲು ಜೋರು
  • ಬೆಂಗಳೂರು ಭೂಗತ ಜಗತ್ತಿನ ಮೋಸ್ಟ್ ನಟೋರಿಯಸ್ ರೌಡಿ ಶೀಟರ್
  • ಸೋಷಿಯಲ್‌ ಮೀಡಿಯಾಲ್ಲಿ ಹವಾ ಬಲು ಜೋರು
ಜೈಲಿನಿಂದ ಹೊರ ಬಂದ ವಿಲ್ಸನ್ ಗಾರ್ಡನ್ ನಾಗ.. ಸೋಷಿಯಲ್‌ ಮೀಡಿಯಾಲ್ಲಿ ಹವಾ ಬಲು ಜೋರು  title=
ವಿಲ್ಸನ್ ಗಾರ್ಡನ್ ನಾಗ

ಬೆಂಗಳೂರು: ಬೆಂಗಳೂರು ಭೂಗತ ಜಗತ್ತಿನ ಮೋಸ್ಟ್ ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಇಂದು ಮುಂಜಾನೆ ಜೈಲಿನಿಂದ ರಿಲೀಸ್ ಆಗಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಾಗ ಇಂದು ರಿಲೀಸ್ ಆಗಿದ್ದಾನೆ.

ಇದನ್ನೂ ಓದಿ: ನೂಪುರ್ ಶರ್ಮಾಗೆ ಬೆಂಬಲ: ರಾಜಸ್ಥಾನದಲ್ಲಿ ವ್ಯಕ್ತಿಯ ಶಿರಚ್ಛೇದ, ಪ್ರಧಾನಿ ಮೋದಿಗೂ ಬೆದರಿಕೆ..!

ಜೈಲಿನಲ್ಲಿದ್ದುಕೊಂಡೆ ನಾಗ ಬೆಂಗಳೂರು ರೌಡಿ ಪಾಳಯದಲ್ಲಿ ತನ್ನ ಕಬಂದ ಬಾಹು ಚಾಚಿದ್ದ. ಇನ್ನೂ ನಾಗ ಜೈಲಿಗೆ ಹೋದ್ರೆ ದುಶ್ಮನಿ ಹೆಣ ಬೀಳೋದು ಪಕ್ಕ ಅಂತ ನಾಗನ ಎದುರಾಳಿ ಪಡೆ ಮಾತನಾಡಿಕೊಳ್ತಾರೆ. ಅದ್ರಂತೆ ನಾಗ ಜೈಲಿನಲ್ಲಿರೋವಾಗಲೆ ಕೋರಮಂಗಲದ ಬಬ್ಲಿ ಕೊಲೆಯಾಗಿತ್ತು. ಇದ್ರಲ್ಲೂ ನಾಗನ ಕೈವಾಡ ಇದೆ ಅಂತ ಪೊಲೀಸ್ರು ನಾಗನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಇನ್ನೂ ಅನ್ನಪೂರ್ಣೇಶ್ವರಿ ನಗರದ ಡಬಲ್‌ ಮೀಟ್ರು ಮೋಹನನ ಕೇಸ್ ನಲ್ಲೂ ನಾಗನನ್ನು ಬಾಡಿ ವಾರೆಂಟ್ ಮೇಲೆ ಕರೆತಂದು ವಿಚಾರಣೆ ನಡೆಸಿದ್ರು.   

ಇನ್ನೂ ಕಳೆದ ವಾರವೇ ನಾಗ ಜೈಲಿನಿಂದ ರಿಲೀಸ್ ಆಗ್ತಾನೆ ಅನ್ನೋ ಸುದ್ದಿ ಕೂಡ ಹರಿದಾಡಿತ್ತು.‌ ನಾಗನ ರಿಲೀಸ್ ವಿಚಾರ ಗೊತ್ತಾಗಿ ಸಿಟಿಯ ಕೆಲ ಪೊಲೀಸರು ನಾಗನನ್ನ ಹಳೇ ಕೇಸ್ ನಲ್ಲಿ ಕಸ್ಟಡಿಗೆ ಪಡೆಯಲು ಜೈಲು ಬಳಿ ಕಾದು ಕುಳಿತಿದ್ರು.‌ ಆದ್ರೆ ಪೊಲೀಸರು ಮತ್ತೆ ಕಸ್ಟಡಿಗೆ ಪಡೆಯುತ್ತಾರೆ ಅನ್ನೋ ಕಾರಣಕ್ಕೆ ನಾಗ ರಿಲೀಸ್ ಆಗಿರಲಿಲ್ಲ‌‌.‌ ಇಂದು ಮುಂಜಾನೆ ಕೇಂದ್ರ ಕಾರಗೃಹದಿಂದ ರಿಲೀಸ್ ಆಗಿ ನಾಗ ಹೊರ ಬಂದಿದ್ದಾನೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಐಸಿಸ್ ಮಾದರಿ ಹತ್ಯೆ: ಉಗ್ರರನ್ನು ಗಲ್ಲಿಗೇರಿಸುವಂತೆ ಬಿಜೆಪಿ ಆಗ್ರಹ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News