ಪತಿ ಊಟಕ್ಕೆ ಬರಲಿಲ್ಲ‌ವೆಂದು ನೇಣಿಗೆ ಶರಣಾದ ಪತ್ನಿ..!

 ಅವರು ಜೋಡಿ ಹಕ್ಕಿಯಂತಿದ್ದ ದಂಪತಿ. ಬಾಲ್ಯದಿಂದಲೂ ಒಂದೇ ಶಾಲೆಯಲ್ಲಿ‌ ಕಲಿತ ಸಹಪಾಠಿಗಳು. ಚಿಕ್ಕಂದಿನಿಂದ ಒಟ್ಟೋಟ್ಟಿಗೆ ಆಡಿ ಬೆಳೆದವರು. ವರ್ಷಗಟ್ಟಲೇ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಕಳೆದೆರಡು ವರ್ಷಗ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ಆದರೆ  ಸಣ್ಣ ಮನಸ್ತಾಪದಿಂದ ಪತ್ನಿ ಈಗ ಸಾವಿಗೆ ಶರಣಾಗಿದ್ದಾಳೆ.

Written by - VISHWANATH HARIHARA | Edited by - Manjunath N | Last Updated : Dec 16, 2022, 09:11 PM IST
  • ತನ್ನ ಕೋಣೆಯಲ್ಲಿ‌ ಫ್ಯಾನಿಗೆ ನೇಣು ಬಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
  • ಘಟನೆ ಸಂಬಂಧ ಬಸವೇಶ್ವರ ನಗರ‌ ಪೊಲೀಸ್ ಠಾಣೆಯಲ್ಲಿ ‌ಕೇಸ್ ದಾಖಲಾಗಿದ್ದು,
  • ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪತಿ ಊಟಕ್ಕೆ ಬರಲಿಲ್ಲ‌ವೆಂದು ನೇಣಿಗೆ ಶರಣಾದ ಪತ್ನಿ..! title=

ಬೆಂಗಳೂರು: ಅವರು ಜೋಡಿ ಹಕ್ಕಿಯಂತಿದ್ದ ದಂಪತಿ. ಬಾಲ್ಯದಿಂದಲೂ ಒಂದೇ ಶಾಲೆಯಲ್ಲಿ‌ ಕಲಿತ ಸಹಪಾಠಿಗಳು. ಚಿಕ್ಕಂದಿನಿಂದ ಒಟ್ಟೋಟ್ಟಿಗೆ ಆಡಿ ಬೆಳೆದವರು. ವರ್ಷಗಟ್ಟಲೇ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಕಳೆದೆರಡು ವರ್ಷಗ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ಆದರೆ  ಸಣ್ಣ ಮನಸ್ತಾಪದಿಂದ ಪತ್ನಿ ಈಗ ಸಾವಿಗೆ ಶರಣಾಗಿದ್ದಾಳೆ.

ಕ್ಷುಲ್ಲಕ ಕಾರಣಕ್ಕೆ ಪತಿಯೊಂದಿಗೆ ಮುನಿಸಿಕೊಂಡ ಪತ್ನಿ ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದವಳೇ ಮನೆಯಲ್ಲಿ ಯಾರು ಇಲ್ಲದ ವೇಳೆ ಪ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೂಸೈಡ್ ಮಾಡಿಕೊಂಡವಳು ಸ್ವಾತಿ. ಈಕೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್.ಕೈತುಂಬ ಸಂಬಳ.ಬಾಲ್ಯದ ಗೆಳೆಯ ದಾಮೋದರ ನೊಂದಿಗೆ ಚಿಗುರಿದ್ದ ಪ್ರೀತಿಯನ್ನು ಪೋಷಕರಿಗೆ ತಿಳಿಸಿ‌ ಒಪ್ಪಿಸಿ ಕಳೆದ ಎರಡು ವರ್ಷಗಳ ಹಿಂದಯಷ್ಟೇ ಮದ್ವೆಯಾಗಿದ್ದಳು. ಮದುವೆ ಬಳಿಕವೂ ಪತ್ನಿ, ಮಾವ, ಭಾವ, ವರಗಿತ್ತಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಳು.

ಇದನ್ನೂ ಓದಿ : ಈ ಆಹಾರಗಳನ್ನು ಸೇವಿಸಿದರೆ ಹೆಚ್ಚಾಗುವುದು ಕಿಡ್ನಿ ಸ್ಟೋನ್ ಅಪಾಯ

ಕಳೆದ ಎರಡು ದಿ‌ನದ ಹಿಂದೆ ಮನೆಯಲ್ಲಿ ಸ್ವಾತಿಗೆ ಇಷ್ಟವಿಲ್ಲದ ಅಡುಗೆ ಮಾಡಿದ್ದರಂತೆ.ಇಷ್ಟವಿಲ್ಲದ ಅಡುಗೆ ತಿನ್ನದ ಸ್ವಾತಿ ಹಾಗೇ ಮಲಗಿದ್ದಾಳೆ‌. ಮರುದಿನ ಬೆಳಗ್ಗೆ ಉದ್ಯೋಗಕ್ಕೆಂದು ತೆರಳಿ, ಪತಿಯೊಂದಿಗೆ ಕರೆ‌ಮಾಡಿ ಮಾತನಾಡಿದ್ದಾಳೆ.  ನಿನ್ನೆ ಮಧ್ಯಾಹ್ನ ಪತಿ ಆಕೆಗೆ ಇಷ್ಟದ ಊಟವನ್ನು ಆಕೆಯ ಆಫೀಸ್ ಬಳಿಗೆ ಫುಡ್ ಡೆಲಿವರಿ ಆರ್ಡರ್ ಮಾಡಿದ್ದ. ಅಲ್ಲಿಗೆ ಬಂದು ತಾನು ಸ್ವಾತಿ ಜತೆಗೆ ಊಟಮಾಡುವುದಾಗಿ ಹೇಳಿದ್ದನಂತೆ. ಪತಿ ದಾಮೋದರ ಖಾಸಗಿ ಮೊಬೈಲ್ ಶೋ ರೂಂ ಮ್ಯಾನೇಜರ್ ಆಗಿದ್ದು, ಕೆಲಸದ ಒತ್ತಡದಲ್ಲಿ ಪತ್ನಿ‌ ಕಚೇರಿ ತಲುಪುವುದು ತಡವಾಗಿದೆ.

ಇದನ್ನೂ ಓದಿ : 5 ಗಂಟೆಗಳಿಗಿಂತ ಕಡಿಮೆ ನಿದ್ರಿಸುವುದರಿಂದ ಸಾವು ಬರಬಹುದು..!

ಅಷ್ಟೊತ್ತಿಗಾಗಲೇ ಫುಡ್ ಪಾರ್ಸಲ್ ರಿಸೀವ್ ಮಾಡಿದ್ದ  ಸ್ವಾತಿ ಮಧ್ಯಾಹ್ನ ಊಟ ಮಾಡಿ ಮುಗಿಸಿ, ಹೇಳಿದ ಸಮಯಕ್ಕೆ ಪತಿ ಬರಲಿಲ್ಲವೆಂದು ಮುನಿಸಿಕೊಂಡಿದ್ದಾಳೆ‌‌.ಅದನ್ನೇ ನೆಪವಾಗಿಸಿಕೊಂಡು ಕಮಲನಗರ ಮನೆಗೆ ಬಂದು, ಮನೆಯಲ್ಲಿ ಯಾರು ಇಲ್ಲದ ವೇಳೆ ತನ್ನ ಕೋಣೆಯಲ್ಲಿ‌ ಫ್ಯಾನಿಗೆ ನೇಣು ಬಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಘಟನೆ ಸಂಬಂಧ ಬಸವೇಶ್ವರ ನಗರ‌ ಪೊಲೀಸ್ ಠಾಣೆಯಲ್ಲಿ ‌ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News