actress Veena Kapoor ‘murder’ case : ನಾನು ಸತ್ತಿಲ್ಲ, ಬದುಕಿದ್ದೇನೆ : ನಟಿ ವೀಣಾ ಕಪೂರ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಹಿರಿಯ ನಟಿ ವೀಣಾ ಕಪೂರ್ ಅವರನ್ನು ಅವರ ಮಗನೆ ಕೊಲೆ ಮಾಡಿದ್ದಾನೆ ಎಂಬ ವದಂತಿಗಳು ಹರಡಿದ ಕೆಲವು ದಿನಗಳ ನಂತರ, ಸ್ವತಃ ನಟಿ ವೀಣಾ ತಮ್ಮ ಮಗನೊಂದಿಗೆ ಮುಂಬೈ ಪೊಲೀಸ್ ಠಾಣೆ ಆಗಮಿಸಿ ಸುಳ್ಳು ಮಾಹಿತಿ ಹರಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ.

Written by - Channabasava A Kashinakunti | Last Updated : Dec 16, 2022, 08:23 PM IST
  • ಹಿರಿಯ ನಟಿ ವೀಣಾ ಕಪೂರ್ ಅವರ ಕೊಲೆ
  • ಮುಂಬೈ ಪೊಲೀಸ್ ಠಾಣೆ ಸುಳ್ಳು ಮಾಹಿತಿ ಹರಡಿದವರ ವಿರುದ್ಧ ದೂರು
  • ನಾನು ಬದುಕಿದ್ದೇನೆ, ನಾನು ಸತ್ತಿಲ್ಲ.
actress Veena Kapoor ‘murder’ case : ನಾನು ಸತ್ತಿಲ್ಲ, ಬದುಕಿದ್ದೇನೆ : ನಟಿ ವೀಣಾ ಕಪೂರ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! title=

ಮುಂಬೈ : ಹಿರಿಯ ನಟಿ ವೀಣಾ ಕಪೂರ್ ಅವರನ್ನು ಅವರ ಮಗನೆ ಕೊಲೆ ಮಾಡಿದ್ದಾನೆ ಎಂಬ ವದಂತಿಗಳು ಹರಡಿದ ಕೆಲವು ದಿನಗಳ ನಂತರ, ಸ್ವತಃ ನಟಿ ವೀಣಾ ತಮ್ಮ ಮಗನೊಂದಿಗೆ ಮುಂಬೈ ಪೊಲೀಸ್ ಠಾಣೆ ಆಗಮಿಸಿ ಸುಳ್ಳು ಮಾಹಿತಿ ಹರಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ.

ನಟಿಯ ಮಾಜಿ ಸಹೋದ್ಯೋಗಿ ನಿಲು ಕೊಹ್ಲಿ ಪ್ರಕಾರ, 74 ವರ್ಷದ ವೀಣಾ ಕಪೂರ್ ಕೆಲವು ವಾರಗಳ ಹಿಂದೆ ತನ್ನ ಸ್ವಂತ ಮಗನಿಂದಲೇ ಕೊಲೆಯಾಗಿದ್ದಾರೆ. ಆಸ್ತಿ ವಿವಾದದಿಂದ ಕಪೂರ್ ಅವರ ಮಗ ತನ್ನನ್ನು ಬ್ಯಾಟ್‌ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದರು. 

ಇದನ್ನೂ ಓದಿ : Malaika Arora: ಖಾಸಗಿ ಅಂಗಾಂಗಗಳ ಫೋಟೋ ಕ್ಲಿಕ್ಕಿಸಿದ ಪಾಪರಾಜಿಗಳ ಮೇಲೆ 'ಬಾಲಿವುಡ್ ಮುನ್ನಿ' ಕೆಂಡಾಮಂಡಲ

ಸುದ್ದಿ ಸಂಸ್ಥೆ ಎಎನ್‌ಐ ಶೇರ್ ಮಾಡಿಕೊಂಡಿರುವ ವೀಡಿಯೊದಲ್ಲಿ, ನಾನು ಬದುಕಿದ್ದೇನೆ, ನಾನು ಸತ್ತಿಲ್ಲ. ಇದು ಸುಳ್ಳು ಸುದ್ದಿ. ವಾಸ್ತವವಾಗಿ ಎಲ್ಲೋ ಹತ್ಯೆಗೀಡಾದ ವ್ಯಕ್ತಿಯೊಂದಿಗೆ ನನ್ನ ಹೆಸರು ತಳಕುಹಾಕಿದ್ದಾರೆ. ಆ ಕೊಲೆ ಜುಹುದಲ್ಲಿ ನಡಿದಿದೆ. ಆದರೆ ನಾನು ಇರುವುದು ಹರಿಯಾಣದ ಗೋರೆಗಾಂವ್‌ನಲ್ಲಿ ಎಂದು ಸ್ಪಷ್ಟನೆ ನೀಡಿದ್ದಾರೆ.

ನಟಿ ವೀಣಾ ಕಪೂರ್ ಸತ್ತಿದ್ದಾರಾ ಅಥವಾ ಬದುಕಿದ್ದಾರಾ?

ಆಸ್ತಿ ವಿವಾದದ ಪ್ರಕರಣದಲ್ಲಿ ವೀಣಾ ಕಪೂರ್ ಅವರನ್ನು ಅವರ ಮಗನಿಂದಲೇ ಕೊಲೆ ಮಾಡಲಾಗಿದೆ ಎಂಬ ವರದಿಗಳು ನಿಜ, ಆದರೆ ಅವರು ಟಿವಿ ನಟಿ ವೀಣಾ ಕಪೂರ್ ಅಲ್ಲ. ಟಿವಿ ನಟಿ ಸಲ್ಲಿಸಿದ ಎಫ್‌ಐಆರ್ ಪ್ರಕಾರ, ಅವರಂತೆ ಇರುವ ಬೇರೊಬ್ಬರ ಹೆಸರು ಅವರ ಹೆಸರಿನೊಂದಿಗೆ ತಳುಕಾಗಿದೆ. ಅವರು ಮಗನಿಂದ ಕೊಲೆಯಾಗಿದ್ದಾರೆ, ಅದು ನಾನಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ್’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News