Kalki 2898 AD: ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ಯಶ್ ಮಕ್ಕಳ ಶುಭಾಶಯ

Kalki 2898 AD Movie: ʼಕಲ್ಕಿʼ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದದ ಸಾಕಷ್ಟು ನಿರೀಕ್ಷೆ ಇದೆ. ವೈಜಯಂತಿ ಮೂವೀಸ್ 600 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ಮಾಡುತ್ತಿದೆ.

Written by - Puttaraj K Alur | Last Updated : Jun 5, 2024, 01:09 PM IST
  • ಜೂನ್ 27ರಂದು ವಿಶ್ವದಾದ್ಯಂತ ಪ್ರಭಾಸ್‌ ನಟನೆಯ ಕಲ್ಕಿ ಬಿಡುಗಡೆ
  • ಬರೋಬ್ಬರಿ 600 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ
  • ʼಕಲ್ಕಿʼಗೆ ಶುಭಾಶಯ ಕೋರಿದ ರಾಕಿಂಗ್‌ ಸ್ಟಾರ್ ಯಶ್ ಮಕ್ಕಳು
Kalki 2898 AD: ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ಯಶ್ ಮಕ್ಕಳ ಶುಭಾಶಯ  title=
Kalki 2898 AD Movie

Kalki 2898 AD Movie: ಪ್ಯಾನ್ ಇಂಡಿಯಾ ಸ್ಟಾರ್, ಟಾಲಿವುಡ್‌ ಡಾರ್ಲಿಂಗ್ ಪ್ರಭಾಸ್‌ ಅಭಿನಯದ ‘ಕಲ್ಕಿ 2898 AD’ ಸಿನಿಮಾವನ್ನು ನಾಗ್ ಅಶ್ವಿನ್ ಬರೆದು ನಿರ್ದೇಶಿಸಿದ್ದಾರೆ. ಇದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು, ಸ್ಟಾರ್ ನಿರ್ಮಾಪಕ ಕೆ.ಅಶ್ವಿನಿದತ್ ವೈಜಯಂತಿ ಮೂವೀಸ್ ಬ್ಯಾನರ್‌ನಡಿ ನಿರ್ಮಾಣ ಮಾಡಲಾಗಿದೆ. ಟಾಲಿವುಡ್ ಯಂಗ್ ರೆಬೆಲ್​ ಸ್ಟಾರ್‌ನ ಈ ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇದೆ. ಕಲ್ಕಿ ಸಿನಿಮಾ ಜೂನ್ 27ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆಯೇ ನಿರ್ಮಾಪಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ʼʼಕಲ್ಕಿʼʼ ಸಿನಿಮಾವನ್ನು ತೆರೆಮೇಲೆ ನೋಡಲು ಪ್ರಭಾಸ್ ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾ ಪ್ರಮೋಷ್​ ವೇಳೆ ಚಿತ್ರತಂಡವು ಪ್ರಭಾಸ್​ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ನೀಡಿದೆ. ಜೂನ್ 7 ಅಥವಾ ಅದಕ್ಕೂ ಮೊದಲು ಮುಂಗಡ ಬುಕ್ಕಿಂಗ್ ತೆರೆಯಲಾಗುವುದು ಅಂತಾ ಮಾಹಿತಿ ನೀಡಲಾಗಿದೆ. ಹೊಸ ಪೋಸ್ಟರ್ ರಿಲೀಸ್​ ಮಾಡಲಾಗಿದ್ದು, ಪ್ರಭಾಸ್ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಇದನ್ನೂಓದಿ: ಡೈರೆಕ್ಟರ್ ಎ.ಪಿ ಅರ್ಜುನ್ ನಿರ್ಮಾಣದ ಸಿನಿಮಾಗೆ ನಟ ಚಿಕ್ಕಣ್ಣ ಹೀರೋ. .

ʼಕಲ್ಕಿʼ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದದ ಸಾಕಷ್ಟು ನಿರೀಕ್ಷೆ ಇದೆ. ವೈಜಯಂತಿ ಮೂವೀಸ್ 600 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ಮಾಡುತ್ತಿದೆ. ಮಲ್ಟಿಸ್ಟಾರರ್‌ ಕಲ್ಕಿ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತುತ ದಿಶಾ ಪಟಾನಿ ನಟಿಸಿದ್ದಾರೆ.

ʼಕಲ್ಕಿʼಗೆ ಯಶ್‌ ಮಕ್ಕಳ ಶುಭಾಶಯ!

ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ರಾಕಿಂಗ್‌ ಸ್ಟಾರ್ ಯಶ್ ಮಕ್ಕಳು ಶುಭಾಶಯ ಕೋರಿದ್ದಾರೆ. ಯಥರ್ವ್ ಮತ್ತು ಐರಾ ಇಬ್ಬರು ಕೂಡ ವಿಶ್ ಮಾಡಿರೋ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ʼಅಲ್ ದಿ ಬೆಸ್ಟ್ bujjiʼ ಅಂತಾ ಬರೆದು ಯಶ್ ಮಕ್ಕಳು ಸಿಗ್ನೇಚೆರ್ ಹಾಕಿದ್ದಾರೆ. ಇದನ್ನು ನೋಡಿದ ಯಶ್ ಮತ್ತು ರಾಧಿಕಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಇದನ್ನೂಓದಿ: ಅತೀ ಶೀಘ್ರದಲ್ಲೇ ತೆರೆಗೆ ಬರುವ ಸಿದ್ಧತೆಯಲ್ಲಿರುವ ‘ಅಪರೇಷನ್ ಲಂಡನ್ ಕೆಫೆ’!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News