ನಮ್ಮ ಸ್ವಂತ ಮನೆಯನ್ನು ಹೊರತುಪಡಿಸಿ ಮಹಿಳೆಯರು ಯಾವ ಸ್ಥಳದಲ್ಲಿಯೂ ಸುರಕ್ಷಿತವಲ್ಲ ಎಂಬುದಕ್ಕೆ ಈ ಘಟನೆ ಕೈಗನ್ನಡಿಯಾಗಿದೆ. ಕೆಲವು ವಿಕೃತ ಕೊಳಕು ಮನಸ್ಥಿತಿಯ ಜನರು ನಿರಂತರವಾಗಿ ಮಹಿಳೆಯರನ್ನು ಕೆಟ್ಟದಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಈ ರೀತಿಯ ಅಪರಾಧಗಳನ್ನು ಮಾಡುತ್ತಿದ್ದಾರೆ. ಅಂತಹವರ ಬಗ್ಗೆ ಎಚ್ಚರಿಕೆ ಅಗತ್ಯ. ಈ ಮೊದಲು ಕಚೇರಿಯ ವಾಶ್ರೂಮ್ಗಳು, ಹುಡುಗಿಯರ ಹಾಸ್ಟೆಲ್ ಸ್ನಾನಗೃಹಗಳು, ಹೋಟೆಲ್ ಕೊಠಡಿಗಳು ಮತ್ತು ಮಾಲ್ಗಳ ಕೊಠಡಿಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿ ಮಹಿಳೆಯರ ಖಾಸಗಿ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಪ್ರಕರಣಗಳನ್ನು ನೀವು ಓದಿದ್ದೀರಿ, ಕೇಳಿದ್ದೀರಿ ಮತ್ತು ನೋಡಿರಬೇಕು. ಆದರೆ ಯಾರೂ ಊಹಿಸಿರದ ಈ ಜಾಗದಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿ ರಹಸ್ಯವಾಗಿ ಮಹಿಳೆಯರ ಖಾಸಗಿ ವಿಡಿಯೋ ರೆಕಾರ್ಡಿಂಗ್ ಮಾಡಿದ ಪ್ರಕರಣದ ಬೆಳಕಿಗೆ ಬಂದಿದೆ.
ಸ್ನಾನ ಮಾಡುತ್ತಿದ್ದ 1000ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ತೆಗೆಯಲಾಗಿದೆ. ಇಷ್ಟು ದಿನ ಯಾರಿಗೂ ಹೇಗೆ ತಿಳಿಯಲಿಲ್ಲ ಎಂಬುದು ಅಚ್ಚರಿಯ ಸಂಗತಿ. ಹಿಡನ್ ಕ್ಯಾಮೆರಾ ಅಳವಡಿಸಿದ ಸ್ಥಳ ತಿಳಿದ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ. ತಮ್ಮ ವಿಡಿಯೋಗಳು ಲೀಕ್ಆಗಿವೆಯೇ ಎಂಬ ಭಯದಲ್ಲಿ ಅನೇಕ ಮಹಿಳೆಯರಿದ್ದಾರೆ.
ಇದನ್ನೂ ಓದಿ: ಪತ್ನಿಗೆ ಡ್ರಗ್ಸ್ ನೀಡಿ 73 ಜನರಿಂದ ಅತ್ಯಾಚಾರ ಮಾಡಿಸಿದ ಗಂಡ..! ದುಡ್ಡು ಕೊಟ್ಟು ಈ ಕೆಲಸ ಮಾಡಿಸುತ್ತಿದ್ದ ಪಾಪಿ ಪತಿ
ಅಪರಾಧ ಮಾಡುವ ಈ ವಿಧಾನವನ್ನು ಮೊದಲು ಯಾರೂ ಯೋಚಿಸಿರಲಿಲ್ಲ. ಈ ಘಟನೆ ಜಪಾನ್ನಲ್ಲಿ ನಡೆದಿದೆ. ಅಲ್ಲಿ ಒಬ್ಬ ವ್ಯಕ್ತಿ ಬಂಡೆಯ ನಡುವೆ ನಕಲಿ ಕಲ್ಲನ್ನು ತಯಾರಿಸಿ ಅದರಲ್ಲಿ ಸ್ಪೈ ಕ್ಯಾಮೆರಾವನ್ನು ಅಳವಡಿಸಿದ್ದ. ಪ್ರಸಿದ್ಧ ಪಿಕ್ನಿಕ್ ಸ್ಪಾಟ್ನಲ್ಲಿರುವ ಬಿಸಿನೀರಿನ ಬುಗ್ಗೆಗಳಲ್ಲಿ ಮಹಿಳೆಯರು ಸ್ನಾನ ಮಾಡುವ ವೀಡಿಯೊವನ್ನು ಈ ಹಿಡನ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದಾನೆ. ಬಂಡೆಗಳಲ್ಲಿ ನಕಲಿ ಕಲ್ಲುಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ ಜಲಪಾತದಲ್ಲಿ ಸ್ನಾನ ಮಾಡಿದ 1000 ಮಹಿಳೆಯರ ಖಾಸಗಿ ವೀಡಿಯೊಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ ಜಪಾನಿನ ಈ ವ್ಯಕ್ತಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ವಿಷಯವನ್ನು ಬಹಿರಂಗಪಡಿಸಿದ ಮಹಿಳೆ ಅದೇ ಬಿಸಿನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಲು ತೆರಳಿದ್ದರು. ವೃತ್ತಿಯಲ್ಲಿ ವಾಸ್ತುಶಿಲ್ಪಿ ಎಂದು ಹೇಳಿಕೊಂಡ ಈಕೆಗೆ ಕಲ್ಲು ಬಂಡೆಗಳ ನಡುವೆ ಬಿದ್ದಿರುವ ನಕಲಿ ಕಲ್ಲಿನ ಬಗ್ಗೆ ಅನುಮಾನ ಬಂದಿತು. ಪರಿಶೀಲಿಸಿದಾಗ ಬಂಡೆ ಕೃತಕವಾಗಿರುವುದು ಗೊತ್ತಾಯಿತು. ಅದರೊಳಗೆ ಕ್ಯಾಮೆರಾ ಇತ್ತು. ಅದೇ ಕ್ಯಾಮೆರಾದಲ್ಲಿ ಮಹಿಳೆಯರು ಸ್ನಾನ ಮಾಡುತ್ತಿರುವ ವಿಡಿಯೋಗಳು ರೆಕಾರ್ಡ್ ಆಗಿವೆ. ತನ್ನ ಸ್ನೇಹಿತರಿಗೆ ಕರೆ ಮಾಡಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಖಾಸಗಿ ವೀಡಿಯೋ ಮಾಡುತ್ತಿದ್ದ ವ್ಯಕ್ತಿಯ ಕ್ರೂರ ವರ್ತನೆ ಕಂಡು ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.
ಆರೋಪಿಯನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಪೊಲೀಸರು ತಂತ್ರ ಹೆಣೆದಿದ್ದಾರೆ. ವಾಸ್ತವವಾಗಿ, ಮಹಿಳೆ ಕ್ಯಾಮೆರಾವನ್ನು ಸ್ಪರ್ಶಿಸಿದ ಕಾರಣ ವೀಡಿಯೊ ರೆಕಾರ್ಡಿಂಗ್ ನಿಂತುಹೋಗಿತ್ತು. ಆರೋಪಿ ಕ್ಯಾಮರಾ ಪರಿಶೀಲಿಸಲು ಬಂದಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ನಕಲಿ ಕಲ್ಲು ಮತ್ತು ಕ್ಯಾಮೆರಾವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಕ್ಯಾಮೆರಾ ಚಿಪ್ನಲ್ಲಿ 44 ಮಹಿಳೆಯರ ವಿಡಿಯೋಗಳು ಪೊಲೀಸರಿಗೆ ಸಿಕ್ಕಿವೆ. ಆತನ ಲ್ಯಾಪ್ಟಾಪ್ನಿಂದ ಸಾವಿರಾರು ಮಹಿಳೆಯರ ಖಾಸಗಿ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಜಗತ್ತಿನ ವಿನಾಶಕ್ಕೆ ಸಿಕ್ಕೆಬಿಡ್ತು ಮುನ್ಸೂಚನೆ..ʻದೇವರ ಮೀನುʼ ಶವ ಪತ್ತೆಯೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಜನ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.