ಅಪಘಾತಕ್ಕೆ ಕಾರಣವೇ ಈ ಬ್ಲಾಕ್ ಸ್ಫಾಟ್ ಗಳು: ಬೆಂಗಳೂರಲ್ಲಿ ಎಲ್ಲೆಲ್ಲಿವೆ ಗೊತ್ತಾ..!?

ಟ್ರಾಫಿಕ್ ಪೊಲೀಸರಿಗೆ ಆಕ್ಸಿಡೆಂಟ್ ಕೇಸ್ ಗಳು ತುಂಬಾನೇ ತಲೆಕೆಡಿಸ್ತಾ ಇವೆ. ದಿನೇ ದಿನೇ ಅಪಘಾತಗಳು ಹೆಚ್ಚಾಗ್ತಾ ಇದ್ದು ,ಸಾವು ನೋವು ಕೂಡ ಜಾಸ್ತಿ ಆಗ್ತಾ ಇದೆ. ಇದರಿಂದ ನಾಲ್ಕು ಇಲಾಖೆಗಳು ಸೇರಿ ಸರ್ವೆ ಮಾಡಿದ್ದು, ನಗರದಲ್ಲಿ 59 ಬ್ಲಾಕ್ ಸ್ಫಾಟ್ ಗಳನ್ನು ಗುರ್ತಿಸಿದ್ದಾರೆ‌. ಕಳೆದ ಮೂರು ತಿಂಗಳಿನಿಂದ ನಗರದಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗ್ತಾ ಇದೆ. ಇದರಿಂದ ತಲೆಕೆಡಿಸಿಕೊಂಡ ಸಂಚಾರಿ ಪೊಲೀಸರು ಅಪಘಾತಗಳು ಯಾಕೆ ಆಗ್ತಾ ಇವೆ ಅನ್ನೋ ಸರ್ವೆ ಮಾಡಲು ಮುಂದಾಗಿದ್ದಾರೆ. ಅದು ಕೂಡ ಸಾರಿಗೆ ಇಲಾಖೆ, PWD ಹಾಗೂ ಬಿಬಿಎಂಪಿ ಜೊತೆ ಸೇರಿ ನಗರದ ಅಪಘಾತಗಳು ಆದ ಸ್ಥಳದಲ್ಲಿ ಸರ್ವೆ ಮಾಡಿದ್ದಾರೆ. ಈ ವೇಳೆ ಒಟ್ಟು 59 ಬ್ಲಾಕ್ ಸ್ಪಾಟ್ ಗಳು ಅಂತಾ ಗುರ್ತಿಸಿದ್ದು ಈ ಬ್ಲಾಕ್ ಸ್ಪಾಟ್ ಗಳಲ್ಲೇ‌ ಮೂರು ತಿಂಗಳಲ್ಲಿ 369 ಅಪಘಾತಗಳು ಆಗಿದೆ. ಇದ್ರಲ್ಲಿ 80ಕ್ಕೂ ಹೆಚ್ಚು ಸಾವನ್ನಪ್ಪಿದ್ದು ಹಲವು ಗಾಯಗೊಂಡಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Aug 23, 2023, 04:52 PM IST
  • ಹೀಗೆ ನಗರದಲ್ಲಿ ಒಟ್ಟು 59 ಬ್ಲಾಕ್ ಸ್ಪಾಟ್ ಗಳನ್ನು ನಾಲ್ಕು ಇಲಾಖೆಗಳು ಸೇರಿ ಗುರ್ತಿಸಿವೆ.ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಿದ್ದು,
  • ಅಲ್ಲಿಯೇ ಯಾಕೆ ಅಪಘಾತಗಳು ಹೆಚ್ಚಾಗ್ತಾ ಇದೆ ಅನ್ನೋ ತನಿಖೆಯನ್ನು ಸಂಚಾರಿ ಪೊಲೀಸರು ಮಾಡಿದ್ದಾರೆ
  • ತನಿಖೆ ವೇಳೆ ಅವೈಜ್ಞಾನಿಕ ರಸ್ತೆ ನಿರ್ಮಾಣ, ಅವೈಜ್ಞಾನಿಕ ರಸ್ತೆ ವಿಭಜಕ, ಪಾದಚಾರಿ ಮಾರ್ಗದಲ್ಲಿ ರಿಂಪಲ್ಸ್ ಅಳವಡಿಸದಿರುವುದು ಪತ್ತೆಯಾಗಿದೆ
ಅಪಘಾತಕ್ಕೆ ಕಾರಣವೇ ಈ ಬ್ಲಾಕ್ ಸ್ಫಾಟ್ ಗಳು: ಬೆಂಗಳೂರಲ್ಲಿ ಎಲ್ಲೆಲ್ಲಿವೆ ಗೊತ್ತಾ..!? title=
screengrab

ಬೆಂಗಳೂರು: ಟ್ರಾಫಿಕ್ ಪೊಲೀಸರಿಗೆ ಆಕ್ಸಿಡೆಂಟ್ ಕೇಸ್ ಗಳು ತುಂಬಾನೇ ತಲೆಕೆಡಿಸ್ತಾ ಇವೆ. ದಿನೇ ದಿನೇ ಅಪಘಾತಗಳು ಹೆಚ್ಚಾಗ್ತಾ ಇದ್ದು ,ಸಾವು ನೋವು ಕೂಡ ಜಾಸ್ತಿ ಆಗ್ತಾ ಇದೆ. ಇದರಿಂದ ನಾಲ್ಕು ಇಲಾಖೆಗಳು ಸೇರಿ ಸರ್ವೆ ಮಾಡಿದ್ದು, ನಗರದಲ್ಲಿ 59 ಬ್ಲಾಕ್ ಸ್ಫಾಟ್ ಗಳನ್ನು ಗುರ್ತಿಸಿದ್ದಾರೆ‌. ಕಳೆದ ಮೂರು ತಿಂಗಳಿನಿಂದ ನಗರದಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗ್ತಾ ಇದೆ. ಇದರಿಂದ ತಲೆಕೆಡಿಸಿಕೊಂಡ ಸಂಚಾರಿ ಪೊಲೀಸರು ಅಪಘಾತಗಳು ಯಾಕೆ ಆಗ್ತಾ ಇವೆ ಅನ್ನೋ ಸರ್ವೆ ಮಾಡಲು ಮುಂದಾಗಿದ್ದಾರೆ. ಅದು ಕೂಡ ಸಾರಿಗೆ ಇಲಾಖೆ, PWD ಹಾಗೂ ಬಿಬಿಎಂಪಿ ಜೊತೆ ಸೇರಿ ನಗರದ ಅಪಘಾತಗಳು ಆದ ಸ್ಥಳದಲ್ಲಿ ಸರ್ವೆ ಮಾಡಿದ್ದಾರೆ. ಈ ವೇಳೆ ಒಟ್ಟು 59 ಬ್ಲಾಕ್ ಸ್ಪಾಟ್ ಗಳು ಅಂತಾ ಗುರ್ತಿಸಿದ್ದು ಈ ಬ್ಲಾಕ್ ಸ್ಪಾಟ್ ಗಳಲ್ಲೇ‌ ಮೂರು ತಿಂಗಳಲ್ಲಿ 369 ಅಪಘಾತಗಳು ಆಗಿದೆ. ಇದ್ರಲ್ಲಿ 80ಕ್ಕೂ ಹೆಚ್ಚು ಸಾವನ್ನಪ್ಪಿದ್ದು ಹಲವು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಭಾರತೀಯ ವಾಯುಪಡೆ ನೇಮಕಾತಿ: SSLC ಪಾಸಾದವರಿಗೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ

ಎಲ್ಲೆಲ್ಲಿ ಬ್ಲಾಕ್ ಸ್ಫಾಟ್ ಗಳು..?

ಏರ್ ಪೋರ್ಟ್ ರಸ್ತೆ - 11 ( ಹಬ್ಬಾಳದಿಂದ ಚಿಕ್ಕಜಾಲವರೆಗೆ)

ಬ್ಯಾಟರಾಯನಪುರ ( ಮೈಸೂರು ರಸ್ತೆ) - 4

ಚಿಕ್ಕಪೇಟೆ, ಉಪ್ಪಾರಪೇಟೆ, ಮಾರುಕಟ್ಟೆ - 3

ಕಾಮಾಕ್ಷಿಪಾಳ್ಯ, ತಲಘಟ್ಟಪುರ - 4

ಮಡಿವಾಳ, ಹುಳಿಮಾವು - 4

ಬೆಳ್ಳಂದೂರು, ಹೆಚ್ ಎಸ್ ಆರ್ ಲೇ ಔಟ್ - 4

ಎಲೆಕ್ಟ್ರಾನಿಕ್ ಸಿಟಿ - 5

ಯಶವಂತಪುರ, ಪೀಣ್ಯಾ - 4

ಕೆ ಆರ್ ಪುರಂ, ವೈಟ್ ಫೀಲ್ಡ್ , ಹಲಸೂರು - 10

ಜೆಬಿ ನಗರ, ಬಾಣಸವಾಡಿ, ಮಹದೇವಪುರ - 10

ಇದನ್ನೂ ಓದಿ: Karnataka NEP Row: ಡಿಸಿಎಂ ಡಿ.ಕೆ.ಶಿವಕುಮಾರ್ ಮುಂದೆ 8 ಪ್ರಶ್ನೆ ಇಟ್ಟ ಧರ್ಮೇಂದ್ರ ಪ್ರಧಾನ್!

ಹೀಗೆ ನಗರದಲ್ಲಿ ಒಟ್ಟು 59 ಬ್ಲಾಕ್ ಸ್ಪಾಟ್ ಗಳನ್ನು ನಾಲ್ಕು ಇಲಾಖೆಗಳು ಸೇರಿ ಗುರ್ತಿಸಿವೆ.ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಿದ್ದು, ಅಲ್ಲಿಯೇ ಯಾಕೆ ಅಪಘಾತಗಳು ಹೆಚ್ಚಾಗ್ತಾ ಇದೆ ಅನ್ನೋ ತನಿಖೆಯನ್ನು ಸಂಚಾರಿ ಪೊಲೀಸರು ಮಾಡಿದ್ದಾರೆ. ತನಿಖೆ ವೇಳೆ ಅವೈಜ್ಞಾನಿಕ ರಸ್ತೆ ನಿರ್ಮಾಣ, ಅವೈಜ್ಞಾನಿಕ ರಸ್ತೆ ವಿಭಜಕ, ಪಾದಚಾರಿ ಮಾರ್ಗದಲ್ಲಿ ರಿಂಪಲ್ಸ್ ಅಳವಡಿಸದಿರುವುದು ಪತ್ತೆಯಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯಿಂದ ಮುಂದೆ ಅಪಘಾತ ಆಗದಂತೆ ಮಾಡಲು ಸಂಚಾರಿ ಇಲಾಖೆ ನಿರ್ಧಾರ ಮಾಡಿದ್ದಾರೆ. ಒಟ್ಟಿನಲ್ಲಿ ನಾಲ್ಕು ಇಲಾಖೆಯವರು ಸೇರಿ ನಗರದಲ್ಲಿ ಆಗ್ತಾ ಇರೋ ಅಪಘಾತಗಳನ್ನು ತಡೆಯೋಕೆ ಮುಂದಾಗಿದ್ದಾರೆ. ಆದ್ರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದನ್ನ  ಕಾದು ನೋಡಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News