Bangalore : ನೋಟ್ ಎಕ್ಸ್ ಚೆಂಜ್ ನೆಪದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಹಣ ಕದ್ದು ಪರಾರಿ

Bangalore Crime : ಸಿಲಿಕಾನ್ ಸಿಟಿಯಲ್ಲೊಬ್ಬ ಖತರ್ನಾಕ್ ಕಳ್ಳನೊಬ್ಬ ಪೆಟ್ರೋಲ್ ಬಂಕ್ ಗಳನ್ನು ಟಾರ್ಗೆಟ್ ಮಾಡುತ್ತಿದ್ದಾನೆ. ಮೂರ್ನಾಲ್ಕು ದಿನ ಪೆಟ್ರೋಲ್ ಬಂಕ್ ಬಳಿ ವಾಚ್ ಮಾಡಿ ನಂತರ ಕಿಲಾಡಿ‌ ಕೆಲಸ ಮಾಡುತ್ತಿದ್ದಾನೆ.

Written by - VISHWANATH HARIHARA | Edited by - Zee Kannada News Desk | Last Updated : Nov 14, 2022, 03:01 PM IST
  • ನೋಟ್ ಎಕ್ಸ್ ಚೆಂಜ್ ನೆಪದಲ್ಲಿ ಕಳ್ಳತನ
  • ಪೆಟ್ರೋಲ್ ಬಂಕ್‌ನಲ್ಲಿ ಹಣ ಕದ್ದು ಪರಾರಿ
  • ಪೊಲೀಸ್‌ ಠಾಣೆಯಲ್ಲಿ ಪಕ್ರರಣ ದಾಖಲು
Bangalore : ನೋಟ್ ಎಕ್ಸ್ ಚೆಂಜ್ ನೆಪದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಹಣ ಕದ್ದು ಪರಾರಿ title=
ಕಳ್ಳತನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಬ್ಬ ಖತರ್ನಾಕ್ ಕಳ್ಳನೊಬ್ಬ ಪೆಟ್ರೋಲ್ ಬಂಕ್ ಗಳನ್ನು ಟಾರ್ಗೆಟ್ ಮಾಡುತ್ತಿದ್ದಾನೆ. ಮೂರ್ನಾಲ್ಕು ದಿನ ಪೆಟ್ರೋಲ್ ಬಂಕ್ ಬಳಿ ವಾಚ್ ಮಾಡಿ ನಂತರ ಕಿಲಾಡಿ‌ ಕೆಲಸ ಮಾಡುತ್ತಿದ್ದಾನೆ. ಸಾಮಾನ್ಯವಾಗಿ ಪ್ರತಿದಿನ ಬೆಳಗ್ಗೆ 8-30 ಕ್ಕೆ ಹಿಂದಿನ ದಿನದ ಹಣವನ್ನ ಲೆಕ್ಕ ಹಾಕಲಾಗುತ್ತೆ. ಕ್ಯಾಶ್ ಲೆಕ್ಕಹಾಕುವ ಸಮಯಕ್ಕೆ ಎಂಟ್ರಿ ಕೊಡುವ ಈ ಖತರ್ನಾಕ್ ಎಲ್ಲಪ್ಪ ನಿಮ್ಮ ಯಜಮಾನರು. ನನಗೆ ಬರುವುದಕ್ಕೆ ಹೇಳಿದ್ದರು ಎಂದು ಕ್ಯಾಶಿಯರ್ ನ ಮಾತಾನಾಡಿಸುತ್ತ. ನನ್ನ ಬಳಿ 2000 ರೂಪಾಯಿಯ ಮುಖಬೆಲೆಯ ಎರಡು ಲಕ್ಷ ಹಣ ಇದೆ. 500 ರೂ ನೋಟು ಕೊಡು ಎಂದು ಹೇಳಿದ್ದ. 

ಇದನ್ನೂ ಓದಿ : Samantha : ಯಶೋದಾ ಆಕ್ಷನ್ ಸೀಕ್ವೆನ್ಸ್‌ ಹಿಂದಿನ ಬಿಗ್‌ ಸೀಕ್ರೇಟ್‌ ರಿವೀಲ್‌ ಮಾಡಿದ ಸಮಂತಾ!

ನಂತರ ಕ್ಯಾಶಿಯರ್ ಗಮನವನ್ನು ಬೇರೆಡೆ ಸೆಳೆದು 2 ಲಕ್ಷ ಕದ್ದು ಎಸ್ಕೇಪ್ ಆಗಿದ್ದಾನೆ. ನಗರದಲ್ಲಿ ಹಲವು ಪೆಟ್ರೋಲ್ ಬಂಕ್ ನವರಿಗೆ ಈತ ಟೋಪಿ ಹಾಕಿದ್ದು, ಚೇಂಜ್ ಬೇಕು ಎಂದು ಲಕ್ಷ ಲಕ್ಷ ಪಂಗನಾಮ ಹಾಕಿದ್ದಾನೆ. ನಗರದ ಆರ್ ಎಂಸಿ ಯಾರ್ಡ್, ಜೆಬಿ ನಗರ ಯಶವಂತಪುರ ಸೇರಿ ಹಲವು ಪೆಟ್ರೋಲ್ ಬಂಕ್ ಗಳಲ್ಲಿ ಕೈ ಚಳಕ ತೋರಿಸಿದ್ದಾನೆ. 

ಖತರ್ನಾಕ್ ಕಳ್ಳನ ಕಾಟಕ್ಕೆ ಬೇಸತ್ತ ಬಂಕ್ ಸಿಬ್ಬಂದಿ, ಸಿಸಿಟಿವಿ ಫೋಟೇಜ್‌ ಸಮೇತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೂರು ಎಫ್ ಐ ಆರ್ ಗಳಾದ್ರು ಆರೋಪಿ ಮಾತ್ರ ಗಾಯಬ್ ಆಗಿದ್ದು, ಈತನನ್ನ ಹುಡುಕಿ ಕೊಟ್ಟರು ಸಹ ಜೆಬಿ ನಗರ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ : Video : ಇಸ್ತಾನ್‌ಬುಲ್'ನಲ್ಲಿ ಆತ್ಮಾಹುತಿ ಬಾಂಬ್ ದಾಳಿ, ನಾಲ್ವರ ಸಾವು, 17 ಕ್ಕೂ ಹೆಚ್ಚು ಜನ ಗಾಯ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News