ಹೆಂಡತಿ ಮಾಡಿದ ಕಬಾಬ್ ರುಚಿಯಾಗಿಲ್ಲ ಅಂತಾ ನೇಣಿಗೆ ಶರಣಾದ ಪತಿ..!

Written by - VISHWANATH HARIHARA | Edited by - Manjunath N | Last Updated : Aug 1, 2022, 11:03 PM IST
  • ಈ ಹಿನ್ನೆಲೆ ಬನ್ನೇರುಘಟ್ಟ ಪೊಲೀಸರು ಸುರೇಶ್​ಗೆ ‌ಹುಡಕಾಟ ನಡೆಸಿದ್ದಾರೆ.
  • ಆದರೆ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಸುರೇಶ್​ ಮೃತದೇಹ ಪತ್ತೆಯಾಗಿದೆ.
ಹೆಂಡತಿ ಮಾಡಿದ ಕಬಾಬ್ ರುಚಿಯಾಗಿಲ್ಲ ಅಂತಾ ನೇಣಿಗೆ ಶರಣಾದ ಪತಿ..! title=

ಬೆಂಗಳೂರು : ಹೆಂಡ್ತಿ ಮಾಡಿದ ಕಬಾಬ್​ ರುಚಿಯಾಗಿಲ್ಲ ಅಂತಾ ಗಂಡ ನೇಣಿಗೆ ಶರಣಾದ ಘಟನೆ ನಡೆದಿದೆ.

ಇದು ವಿಚಿತ್ರ, ಆದ್ರೂ ಸತ್ಯ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಂ.ಸುರೇಶ್​(48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಈತ ಸುರೇಶ್​ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಶಾಲಿನಿಗೆ ಕಬಾಬ್​ ಮಾಡಲು ಹೇಳಿದ್ದ.ಕಬಾಬ್ ತಿಂದು ಟೆಸ್ಟ್ ಇಲ್ಲ ಅಂತಾ ಗಲಾಟೆ ಮಾಡಿ ಪತ್ನಿ ಶಾಲಿನಿಗೆ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದ. ಸದ್ಯ ಪತ್ನಿ ಶಾಲಿನಿ ಹೊಡೆತ ತಿಂದು ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಇದನ್ನೂ ಓದಿ-JioFi ಖರೀದಿಯ ಮೇಲೆ ರೂ.1500 ಕ್ಯಾಶ್ ಬ್ಯಾಕ್, ಇಂದೇ ಈ ಅದ್ಭುತ ಕೊಡುಗೆಯ ಲಾಭ ಪಡೆಯಿರಿ

ಪೊಲೀಸರಿಗೆ ಪತ್ನಿ ಗಂಡನ ವಿರುದ್ಧ ಹೇಳಿಕೆ ನೀಡಿದ್ದಾಳೆ.ಈ ಹಿನ್ನೆಲೆ ಬನ್ನೇರುಘಟ್ಟ ಪೊಲೀಸರು ಸುರೇಶ್​ಗೆ ‌ಹುಡಕಾಟ ನಡೆಸಿದ್ದಾರೆ.ಆದರೆ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಸುರೇಶ್​ ಮೃತದೇಹ ಪತ್ತೆಯಾಗಿದೆ. ಸದ್ಯ ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News