Chintamani Accident: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ವಿಪರ್ಯಾಸವೆಂದರೆ ಅಪಘಾತ ಮಾಡಿ ಗಾಯಗೊಂಡವರ ಮೇಲೆಯೇ ದೂರು ದಾಖಲಿಸಿ ಅಧಿಕಾರ ದರ್ಪ ಮೆರೆದಿರುವ ಘಟನೆಯೊಂದು ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕಿನ ಚಿಕ್ಕ ಕೊಂಡ್ರಹಳ್ಳಿ ಗ್ರಾಮದ ಪ್ರಕಾಶ್ ಮತ್ತು ಬೀರಮ್ಮ ದಂಪತಿಗಳು ಶ್ರೀನಿವಾಸಪುರ ಪಟ್ಟಣಕ್ಕೆ ಹೋಗಿ ಚಿಂತಾಮಣಿ ನಗರಕ್ಕೆ ಬರುವ ವೇಳೆ ಕಡಪ ಹೈವೇ ಬಳಿ ಮಾಜಿ ತಹಶೀಲ್ದಾರ್ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ನಡೆದಿದ್ದು ಘಟನೆಯಲ್ಲಿ ಟಿವಿಎಸ್ ಬೈಕ್ ನಲ್ಲಿ ಬರುತ್ತಿದ್ದ ಪತಿ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ- ಗಾಂಜಾ ಬೆಳೆದು ಮಾರಾಟ: ಯುವತಿ ಸೇರಿ ಐವರು ವೈದ್ಯಕೀಯ ವಿದ್ಯಾರ್ಥಿಗಳ ಬಂಧನ!
ಆದರೆ ಮಾಜಿ ತಹಶೀಲ್ದಾರ್ ಪೊಲೀಸ್ ವಾಹನವನ್ನು ಕರೆಸಿಕೊಂಡು ಜೀಪ್ ನಲ್ಲಿ ಮನೆಗೆ ಹೋಗಿ ನಂತರ ಪೊಲೀಸ್ ಠಾಣೆಯಲ್ಲಿ ದಂಪತಿಗಳ ಮೇಲೆಯೇ ದೂರು ದಾಖಲಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ದಂಪತಿಗಳನ್ನು ಆಸ್ಪತ್ರೆಗೂ ದಾಖಲಿಸದೆ ಅಲ್ಲಿಯೇ ಬಿಟ್ಟು ಅಧಿಕಾರದ ದರ್ಪ ತೋರಿದ್ದಾರೆ.
ಇನ್ನು ಘಟನೆ ನಡೆದ ನಂತರ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾದ್ರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಲ್ಲಿಯೂ ವಿಫಲರಾಗಿದ್ದಾರೆ. ಸದ್ಯ ಇದರಿಂದ ಕೋಪಗೊಂಡ ಪ್ರಕಾಶ್ ಮತ್ತು ಬೀರಮ್ಮ ಅವರ ಕುಟುಂಬಸ್ಥರು ಪೋಲಿಸರಿಗೆ ಹಾಗೂ ಮಾಜಿ ತಹಶೀಲ್ದಾರ್ ಗೆ ಹಿಡಿ ಶಾಪ ಹಾಕಿದ್ದಾರೆ.
ಇದನ್ನೂ ಓದಿ- ನವದೆಹಲಿ ರೈಲು ನಿಲ್ದಾಣ: ವಿದ್ಯುತ್ ಸ್ಪರ್ಶದಿಂದ ಮಹಿಳೆ ಸಾವು, ಇಬ್ಬರು ಮಕ್ಕಳು ಪಾರು!
ಇನ್ನು ಘಟನೆಯ ಬಗ್ಗೆ ಸ್ಥಳೀಯ ಪತ್ರಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವಿವರಿಸಿದ ನಂತರ ಸ್ಥಳೀಯ ಪೊಲೀಸರು ಆಸ್ಪತ್ರೆಗೆ ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.