ಗುರಾಯಿಸಿದ್ದಕ್ಕೆ‌ ರೌಡಿಗಳ‌‌ ನಡುವೆ ಮಾರಾಮಾರಿ: ಎಣ್ಣೆ ಬಾಟಲ್‌ನಲ್ಲಿ ಬಡಿದಾಟ

Rowdy Sheeters fight: ಕೇವಲ ಗುರಾಯಿಸಿದ ಎಂಬ ಕಾರಣಕ್ಕೆ ಎರಡು ರೌಡಿ ಗುಂಪುಗಳ ನಡುವೆ ಸಿನಿಮಾ ಸ್ಟೈಲ್ ನಲ್ಲಿ ಬಡಿದಾಡಿಕೊಂಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

Written by - VISHWANATH HARIHARA | Edited by - Chetana Devarmani | Last Updated : Jul 17, 2022, 03:57 PM IST
  • ಗುರಾಯಿಸಿದ್ದಕ್ಕೆ‌ ರೌಡಿಗಳ‌‌ ನಡುವೆ ಮಾರಾಮಾರಿ
  • ಸಿನಿಮಾ ಸ್ಟೈಲ್ ನಲ್ಲಿ ಬಡಿದಾಡಿಕೊಂಡಿರುವ ಘಟನೆ
  • ಗಾಂಧಿನಗರದ ಸೆವೆನ್ ಹಿಲ್ಸ್ ಲೇಡಿಸ್ ಬಾರ್ ಮುಂದೆ ಗಲಾಟೆ
ಗುರಾಯಿಸಿದ್ದಕ್ಕೆ‌ ರೌಡಿಗಳ‌‌ ನಡುವೆ ಮಾರಾಮಾರಿ: ಎಣ್ಣೆ ಬಾಟಲ್‌ನಲ್ಲಿ ಬಡಿದಾಟ  title=
ಮಾರಾಮಾರಿ

ಬೆಂಗಳೂರು: ಕೇವಲ ಗುರಾಯಿಸಿದ ಎಂಬ ಕಾರಣಕ್ಕೆ ಎರಡು ರೌಡಿ ಗುಂಪುಗಳ ನಡುವೆ ಸಿನಿಮಾ ಸ್ಟೈಲ್ ನಲ್ಲಿ ಬಡಿದಾಡಿಕೊಂಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಗಾಂಧಿನಗರದ ಸೆವೆನ್ ಹಿಲ್ಸ್ ಲೇಡಿಸ್ ಬಾರ್ ಮುಂದೆ ಘಟನೆ ನಡೆದಿದೆ.

ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ಮಸಣ ಸೇರಿದ ಯುವಕ: ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ

ರಾಜರಾಜೇಶ್ವರಿ ನಗರ ರೌಡಿಶೀಟರ್ ರಾಘವೇಂದ್ರ ಅಲಿಯಾಸ್ ಕೆಂದ ಹಾಗೂ ಶ್ರೀರಾಮಂಪುರ ರೌಡಿಶೀಟರ್ ಯಶವಂತ ನಡುವೆ ಗ್ಯಾಂಗ್ ವಾರ್ ನಡೆದಿದೆ.ರೌಡಿಗಳು ಮದ್ಯದ ಅಮಲಲ್ಲಿ ತೆಲುತ್ತಿದ್ದರು.ಗುರಾಯಿಸಿದ ರಾಘವೇಂದ್ರ, ಸ್ನೇಹಿತರಾದ ಆಕಾಶ್,ನವೀನ್ ಮಧ್ಯರಾತ್ರಿ 12.30 ಕ್ಕೆ ಸೆವೆನ್ ಹಿಲ್ಸ್ ಬಾರ್ ಗೆ ಪಾರ್ಟಿಗೆ ಬಂದಿದ್ದರು.

ಈ ವೇಳೆ ಬಾತ್ ರೂಮ್ ಗೆ ಹೋದಾಗ ಅಲ್ಲಿದ್ದ ಯಶವಂತ್  ರಾಘವೇಂದ್ರನನ್ನು ಗುರಾಯಿಸಿದ್ದ. ಏಯ್ ಯಾಕೋ ಗುರಾಯಿಸೋದು ಎಂದು ಕೇಳಿದಕ್ಕೆ ಯಶವಂತ್ ಹಾಗೂ ಸ್ನೇಹಿತರು ಮದ್ಯದ ಬಾಟಲ್ ನಿಂದ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ವಂಚನೆ ಪ್ರಕರಣ: ಸ್ಯಾಂಡಲ್ ವುಡ್ ಖ್ಯಾತ ನಟಿಯ ಸ್ನೇಹಿತ ಅರೆಸ್ಟ್‌

ನಂತರ ಅಲ್ಲಿಂದ ಬಾರ್ ಕೆಳಗೆ ಬಂದಾಗ ರಾಘವೇಂದ್ರನ ಕಡೆಯವರು ಯಶವಂತ್ ಗೆ ಬಾಟಲ್ ನಿಂದ ತಲೆಗೆ ಹೊಡೆದಿದ್ದಾರೆ.‌ಇನ್ನೂ ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News