ಎಣ್ಣೆ ಹೊಡೆಯೋಕೆ ಹಣ ಕೊಡಲಿಲ್ಲ ಅಂತಾ ಮಗನನ್ನೇ ಕೊಂದ ಪಾಪಿ ತಂದೆ

ಕೋಪ, ಮತ್ತು ಚಟ ಇವೆರಡು ಮನುಷ್ಯನ ಆರೋಗ್ಯದ ಜೀವನವನ್ನೇ ಹಾಳು ಮಾಡುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕುಡಿತದ ಚಟಕ್ಕೆ ಬಿದ್ದ ಅಪ್ಪನೊಬ್ಬ ಮಗನ ಉಸಿರನ್ನೇ ನಿಲ್ಲಿಸಿದ್ದಾನೆ. ನಿನ್ನೆ ಮಧ್ಯಾಹ್ನವರೆಗೂ ಆ ಮನೆಯಲ್ಲಿ ಒಂದು ಹಂತಕ್ಕೆ ಎಲ್ಲವೂ ಸರಿಯಿತ್ತು. ಆದರೆ  ಸಂಜೆಯಾಗುತ್ತಿದ್ದಂತೆ ಮಗನಿಗೆ ಮಸಣದ ಹಾದಿ ತೋರಿಸಿ ಅಪ್ಪ ಕೊಲೆಗಾರನಾಗಿದ್ದಾನೆ.ಮಗನನ್ನ ಕಳೆದುಕೊಂಡ ತಾಯಿ ಆಕ್ರಂದನ ಮುಗಿಲುಮುಟ್ಟಿದೆ.

Written by - VISHWANATH HARIHARA | Edited by - Manjunath N | Last Updated : Jan 26, 2024, 05:16 PM IST
  • ನಿನ್ನೆ ಸಂಜೆ ಸುರೇಶ್ ಮಗನ ಹತ್ತಿರ ಕುಡಿಯೋದಕ್ಕೆ ಹಣ ಬೇಕೆಂದು ಕೇಳಿ ಗಲಾಟೆ ಮಾಡಿದ್ದಾನೆ
  • ಮಾತಿಗೆ ಮಾತು ಬೆಳೆದು ನರ್ತನ್ ಅಪ್ಪನನ್ನ ರೂಮ್ ಒಳಗೆ ತಳ್ಳಿ ಬಾಗಿಲು ಹಾಕಿ ಲಾಕ್ ಮಾಡಿದ್ದಾನೆ
  • ಇದರಿಂದ ರೊಚ್ಚಿಗೆದ್ದ ಸುರೇಶ್ ಮನೆಯಲ್ಲಿದ್ದ ಬಂದೂಕಿನಿಂದ ಫೈರ್ ಮಾಡಿದ್ದಾನೆ
ಎಣ್ಣೆ ಹೊಡೆಯೋಕೆ ಹಣ ಕೊಡಲಿಲ್ಲ ಅಂತಾ ಮಗನನ್ನೇ ಕೊಂದ ಪಾಪಿ ತಂದೆ title=
ಸಾಂಧರ್ಭಿಕ ಚಿತ್ರ

ಬೆಂಗಳೂರು: ಕೋಪ, ಮತ್ತು ಚಟ ಇವೆರಡು ಮನುಷ್ಯನ ಆರೋಗ್ಯದ ಜೀವನವನ್ನೇ ಹಾಳು ಮಾಡುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕುಡಿತದ ಚಟಕ್ಕೆ ಬಿದ್ದ ಅಪ್ಪನೊಬ್ಬ ಮಗನ ಉಸಿರನ್ನೇ ನಿಲ್ಲಿಸಿದ್ದಾನೆ. ನಿನ್ನೆ ಮಧ್ಯಾಹ್ನವರೆಗೂ ಆ ಮನೆಯಲ್ಲಿ ಒಂದು ಹಂತಕ್ಕೆ ಎಲ್ಲವೂ ಸರಿಯಿತ್ತು. ಆದರೆ  ಸಂಜೆಯಾಗುತ್ತಿದ್ದಂತೆ ಮಗನಿಗೆ ಮಸಣದ ಹಾದಿ ತೋರಿಸಿ ಅಪ್ಪ ಕೊಲೆಗಾರನಾಗಿದ್ದಾನೆ.ಮಗನನ್ನ ಕಳೆದುಕೊಂಡ ತಾಯಿ ಆಕ್ರಂದನ ಮುಗಿಲುಮುಟ್ಟಿದೆ.

ನರ್ತನ್‌  ಬೋಪಣ್ಣ ಎಂಬಾತನೇ ಕುಡಿತದ ಚಟಕ್ಕೆ ಬಿದ್ದ ಅಪ್ಪನಿಂದ ಕೊಲೆಯಾದ ನತದೃಷ್ಟ. ಕೊಡಗು ಮೂಲದ ಸುರೇಶ್ ಕುಟುಂಬ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕರೆಕಲ್ ನಲ್ಲಿ ವಾಸವಾಗಿದ್ದರು. ಇನ್ನೂ ಜೆಪಿ ನಗರದ HDFC ಬ್ಯಾಂಕ್ ನಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದ ಸುರೇಶ್ ಬಂದ ಹಣವೆಲ್ಲಾ ಕುಡಿತಕ್ಕೆ ಉಪಯೋಗಿಸುತ್ತಿದ್ದ . ಮಗಳು ಕೂಡ ಅಪ್ಪನ  ‌ಸಂಸಾರಕ್ಕೆ ಕೈಲಾದಷ್ಟು‌  ಸಹಾಯ ಮಾಡುತ್ತಿದ್ದಳು.

ಇದನ್ನೂ ಓದಿ: ಬುಡಕಟ್ಟು ಸಂಸ್ಕೃತಿಯ ಸಾಂಪ್ರದಾಯಿಕ ಮಹುವಾ ಬಗ್ಗೆ ನಿಮಗೆ ತಿಳಿದಿದೆಯೇ..?

ಆದರೆ ನಿನ್ನೆ ಸಂಜೆ ಸುರೇಶ್ ಮಗನ ಹತ್ತಿರ ಕುಡಿಯೋದಕ್ಕೆ ಹಣ ಬೇಕೆಂದು ಕೇಳಿ ಗಲಾಟೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ನರ್ತನ್  ಅಪ್ಪನನ್ನ ರೂಮ್ ಒಳಗೆ ತಳ್ಳಿ ಬಾಗಿಲು ಹಾಕಿ ಲಾಕ್ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಸುರೇಶ್ ಮನೆಯಲ್ಲಿದ್ದ ಬಂದೂಕಿನಿಂದ ಫೈರ್ ಮಾಡಿದ್ದಾನೆ. ತಕ್ಷಣ ಗುಂಡು ಬಾಗಿಲನ್ನ ಸೀಳಿ ನರ್ತನ್ ಬೋಪಣ್ಣನ ತೊಡೆ ಹೊಕ್ಕಿದೆ.ತಕ್ಷಣ ಕುಸಿದು ಬಿದ್ದ ನರ್ತನ್ ತನ್ನ ಸಹೋದರಿಗೆ ಕಾಲ್ ಮಾಡಿ, ಅಪ್ಪ ನನಗೆ ಶೂಟ್ ಮಾಡಿದ್ದಾನೆಂದು ತಿಳಿಸಿದ್ದಾನೆ. ಗಾಬರಿಯಾದ ನರ್ತನ್ ಅಕ್ಕ ಅಕ್ಕ ಪಕ್ಕದ ಮನೆಯರಿಗೆ ವಿಷಯ ತಿಳಿಸಿದ್ದಾಳೆ. ಆದರೆ ಮನೆಗೆ ಬಂದು ನೋಡುವಷ್ಟರಲ್ಲಿ ನರ್ತನ್ ತೀವ್ರ ರಕ್ತಸ್ರಾವವಾಗಿ ನಿತ್ರಾಣಗೊಂಡಿದ್ದಾನೆ.

ಇದನ್ನೂ ಓದಿ: "ರಾಯಣ್ಣ ಕುರುಬ ಎನ್ನುವ ಕಾರಣಕ್ಕೆ ನಾವು ಗೌರವಿಸುವುದಲ್ಲ, ಬದಲಿಗೆ ರಾಯಣ್ಣನ ದೇಶಪ್ರೇಮ ಕಾರಣದಿಂದಾಗಿ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು"

ತಕ್ಷಣ  ಸ್ಥಳೀಯ ಖಾಸಗಿ ಆಸ್ಪತ್ರೆಗೆ ಆತನನ್ನು ಸೇರಿಸಿದ್ರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣಬಿಟ್ಟಿದ್ದಾನೆ. ಮತ್ತೊಂದು ವಿಷಯ ಎಂದ್ರೆ ನರ್ತನ್ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಮಗ ನರಳುತ್ತಿದ್ದರೂ ಕೂಡ ಆಕೆ ಆತನ ಸಹಾಯಕ್ಕೆ ಹೋಗುವುದಕ್ಕೆ ಆಗಿಲ್ಲ. ಘಟನೆ ನಡೆದ ಬಳಿಕ ಈ ಪಾಪಿ ತಂದೆ ಸುರೇಶ ಮನೆಯಲ್ಲಿ ಚೆಲ್ಲಿದ ರಕ್ತದ ಕಲೆಗಳನ್ನ ಕ್ಲೀನ್ ಮಾಡೋ ಪ್ರಯತ್ನ ಮಾಡಿದ್ದಾನೆ. ಇನ್ನೂ ಸ್ಥಳಕ್ಕೆ ಬಂದ ಬೆರಳಚ್ಚು ತಙ್ಞರು ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ  ಪೊಲೀಸರು ಆರೋಪಿ ಸುರೇಶ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಈ ಸುರೇಶನಿಗೆ ಎಣ್ಣೆ ಏಟಲ್ಲಿ ಮಾಡಿದ ಅವಾಂತರ ನಶೆ ಇಳಿದ ಮೇಲೆ ಗೊತ್ತಾಗಿದೆ. ಪ್ರತಿಯೊಬ್ಬ ಮಕ್ಕಳಿಗೂ ಅವರ ಅಪ್ಪನೇ ನಿಜವಾದ ಹೀರೋ.. ಆದರೆ ಇಲ್ಲಿ ಅಪ್ಪನೇ ಕೊಲೆಗಾರನಾಗಿದ್ದು ದುರಂತವೇ ಸರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News