ಬೆಂಗಳೂರು : ಆನ್ಲೈನ್ ಇ-ಕಾಮರ್ಸ್ ಕಂಪನಿಗಳಿಂದ ಬರುವ ಕ್ಯಾಶ್ ಆನ್ ಡಿಲವರಿ ಆರ್ಡರ್ ಡೇಟಾ ಕದ್ದು ಗ್ರಾಹಕರಿಗೆ ಅಸಲಿ ವಸ್ತುಗಳ ಬದಲು ನಕಲಿ ವಸ್ತುಗಳನ್ನ ಕಳುಹಿಸಿ ಗ್ರಾಹಕರು ಮತ್ತು ಕಂಪನಿಗೆ ಉಂಡೆನಾಮ ಹಾಕಿದ್ದ ಆರೋಪಿಗಳನ್ನ ಬೆಂಗಳೂರಿನ ಉತ್ತರ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮುಂಬೈ, ಗುಜರಾತ್, ಮಧ್ಯಪ್ರದೇಶಲ್ಲಿ ಕುಳಿತು ಎರಡು ವರ್ಷಗಳಿಂದ 70 ಲಕ್ಷ ರೂ ವಂಚಿಸಿದ್ದ ಒಟ್ಟು 21 ಜನ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಇ-ಕಾಮರ್ಸ್ ಕಂಪನಿಗಳು ಆರ್ಡರ್ ಡೆಲಿವರಿ ಮಾಡುವ ಶಿಪ್ ಮೆಂಟ್ ಕಂಪನಿಗಳ ನಡುವಿನ ಡೇಟಾ ಕಳವು ಮಾಡುತ್ತಿದ್ದ ಆರೋಪಿಗಳು, ಕ್ಯಾಶ್ ಆನ್ ಡೆಲವರಿ ಆರ್ಡರ್ ಗಳನ್ನ ಟಾರ್ಗೆಟ್ ಮಾಡುತ್ತಿದ್ದರು.
ಇದನ್ನೂ ಓದಿ: ಕೇವಲ 750 ರೂಪಾಯಿ ಸಾಲಕ್ಕೆ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ..!
ಅಂತಹ ಆರ್ಡರ್ ಗಳಿಗೆ ನಿಂಬೂಸ್ ಪೋಸ್ಟ್, ಎಕ್ಸ್ ಪ್ರೆಸ್ಬಿ, ಷಡೋಪಾಕ್ಸ್ ಬ್ಲೂಡಾರ್ಟ್, ಓನ್ ಡೇ ಕೋರಿಯರ್ ಸೇರಿ ಇತ್ಯಾದಿ ಸರ್ವಿಸ್ಗಳನ್ನು ಬಳಸಿಕೊಂಡು ಅಸಲಿ ವಸ್ತುಗಳ ಬದಲಾಗಿ ನಕಲಿ ವಸ್ತುಗಳನ್ನ ಮೊದಲೇ ತಲುಪಿಸಿ ಹಣ ಪಡೆದುಕೊಳ್ಳುತ್ತಿದ್ದರು. ಎರಡು ದಿನಗಳ ನಂತರ ನೈಜ ವಸ್ತುಗಳು ಗ್ರಾಹಕರ ಕೈ ಸೇರಿದಾಗ ನಕಲಿ ವಸ್ತುವನ್ನು ಇ-ಕಾಮರ್ಸ್ ಪೊರ್ಟಲ್ ಮುಖಾಂತರ ವಾಪಸ್ ಕಳುಹಿಸಿ ನಷ್ಟ ಉಂಟಾಗುವಂತೆ ಮಾಡುತ್ತಿದ್ದರು.
2021ರ ಜೂನ್ನಿಂದ ಇಲ್ಲಿಯವರೆಗೂ ಸುಮಾರು 70 ಲಕ್ಷ ರೂ ಹಣ ನಷ್ಟವಾಗಿದೆಯೆಂದು ಶಿಪ್ ಮೆಂಟ್ ಕಂಪನಿಯವರು ಉತ್ತರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳು ಗ್ರಾಹಕರಿಗೆ ಕಳುಹಿಸುತ್ತಿದ್ದ ನಕಲಿ ಶಿಪ್ ಮೆಂಟ್ನಲ್ಲಿರುವ ಎಡ್ಯೂಬಿ (ಎ.ವೇ.ಬಿಲ್) ನಂಬರ್, ಬ್ಯೂಡಾರ್ಟ್ ಕೋರಿಯರ್ ಸಬ್ ಶಿಪರ್ ಆದ ನಿಂಬಸ್ ಪೋಸ್ಟ್ ನ ಮಾಹಿತಿ, ಕೆವೈಸಿ ಮತ್ತು ಬ್ಯಾಂಕ್ ಖಾತೆಯ ಮಾಹಿತಿಗಳನ್ನ ಕಲೆಹಾಕಿ ಮುಂಬೈ, ಗುಜರಾತ್, ಮಧ್ಯಪ್ರದೇಶ ರಾಜ್ಯದ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಲೊಕ್ಯಾಂಟೋ ಆ್ಯಪ್ನಲ್ಲಿ ಹುಡುಗಿ ಹೆಸರಲ್ಲಿ ಚಾಟ್: ಸೆಕ್ಸ್ಗೆ ಕರೆದು ಹಣ ದೋಚುತ್ತಿದ್ದವರ ಬಂಧನ!
ಆರೋಪಿಗಳು ಕದ್ದಿದ ಡೇಟಾವನ್ನ ಮಾರಾಟ ಮಾಡಿ ಹಣ ಸಂಪಾದನೆ ಮಾಡಿರುವುದು ಸಹ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಇನ್ನೂ ಬಂಧಿತರ ಖಾತೆಗಳಲ್ಲಿದ್ದ 19,45,135/- ರೂ. ಮತ್ತು 7,50,000/- ರೂ ನಗದು ಹಣವನ್ನು ಫ್ರೀಜ್ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್ , 3 ಲ್ಯಾಪ್ಟಾಪ್ ಮತ್ತು ಹಾರ್ಡ್ಡಿಸ್ಕ್ ವಶಕ್ಕೆ ಪಡೆಯಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.