ದಿನಭವಿಷ್ಯ 04-10-2024: ಶುಕ್ರವಾರದಂದು ಚಿತ್ರಾ ನಕ್ಷತ್ರ, ವೈಧೃತಿ ಯೋಗ: 6 ರಾಶಿಯವರಿಗೆ ತಾಯಿ ಲಕ್ಷ್ಮಿ ಕೃಪೆ

Today Horoscope 04th October 2024: ನವರಾತ್ರಿಯ ಎರಡನೇ ದಿನ ಶುಕ್ರವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Oct 4, 2024, 07:47 AM IST
  • ಇಂದು ನವರಾತ್ರಿಯ ಎರಡನೇ ದಿನ
  • ಶುಕ್ರವಾರದ ಈ ದಿನ ಚಿತ್ರಾ ನಕ್ಷತ್ರ, ವೈಧೃತಿ ಯೋಗ, ಬಾಲವ ಕರಣ
  • ಇಂದಿನ ರಾಶಿ ಭವಿಷ್ಯ ಹೇಗಿದೆ...
ದಿನಭವಿಷ್ಯ 04-10-2024:  ಶುಕ್ರವಾರದಂದು ಚಿತ್ರಾ ನಕ್ಷತ್ರ, ವೈಧೃತಿ ಯೋಗ: 6 ರಾಶಿಯವರಿಗೆ ತಾಯಿ ಲಕ್ಷ್ಮಿ ಕೃಪೆ  title=

Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು. ಆಶ್ವಯುಜ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿಯ ಈ ದಿನ ಶುಕ್ರವಾರ, ಚಿತ್ರಾ ನಕ್ಷತ್ರ, ವೈಧೃತಿ ಯೋಗ, ಬಾಲವ ಕರಣ ಇರಲಿದೆ. ಇಂದು ಯಾವೆಲ್ಲಾ ರಾಶಿಯವರಿಗೆ ತಾಯಿ ಕೃಪೆಯಿರಲಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಉದ್ಯೋಗ ಕ್ಷೇತ್ರದಲ್ಲಿ ಇಂದು ನಿಮ್ಮ ಆಲೋಚನೆಗಳಿಗೆ ಶುಭ ಫಲ ದೊರೆಯಲಿದೆ. ಹಿಡಿದ ಕೆಲಸವನ್ನು ಸಾಧಿಸುವ ನಿಮ್ಮ ಹಠದಿಂದಲೇ ವಿಜಯಮಾಲೆ. ಮಕ್ಕಳೊಂದಿಗೆ ಮೋಜು, ಮಸ್ತಿಯಲ್ಲಿ ತೊಡಗುವಿರಿ. ನಿಮ್ಮ ಮೃದುವಾದ ಮಾತಿನಿಂದ ಗೌರವ ಹೆಚ್ಚಾಗಲಿದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ರಾಜಕೀಯ ಜೀವನದಲ್ಲಿರುವವರಿಗೆ ಇಂದು ಲಕ್ಷ್ಮಿ ಕಟಾಕ್ಷ ಇರಲಿದೆ. ಕುಟುಂಬಸ್ಥರೊಂದಿಗೆ ಆನಂದದ ಸಮಯವನ್ನು ಕಳೆಯುವಿರಿ. ಒಟ್ಟಿಟ್ಟಿಗೆ ಹಲವು ಕೆಲಸಗಳನ್ನು ನಿಭಾಯಿಸಬೇಕಾಗಬಹುದು. ಇದರಿಂದ ಒತ್ತಡ ಹೆಚ್ಚಾಗಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಹಳೆಯ ಹೂಡಿಕೆಗಳಿಂದ ಭಾರೀ ಲಾಭವನ್ನು ಗಳಿಸುವಿರಿ. ಆದಾಗ್ಯೂ, ಕುಟುಂಬ ಸದಸ್ಯರ ಆರೋಗ್ಯ ಏರುಪೇರಾಗುವುದರಿಂದ ಆಸ್ಪತ್ರೆ ಓಡಾಟ ಹೆಚ್ಚಾಗಲಿದೆ. ಸಂಜೆ ವೇಳೆಗೆ ಅತಿಥಿಗಳ ಆಗಮನದಿಂದ ಸಂತೋಷ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ತಾಯಿ ಲಕ್ಷ್ಮಿ ಕೃಪೆಯಿಂದ ಈ ರಾಶಿಯವರಿಗೆ ಪ್ರಗತಿಯ ಹೊಸ ಹಾದಿ ತೆರೆಯಲಿದೆ. ಡಿಸೈನಿಂಗ್ ಅಥವಾ ಮಾರ್ಕೆಟಿಂಗ್ ವ್ಯವಹಾರ ಮಾಡುವ ಜನರು  ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದರಿಂದ ಸಂತಸ. 

ಮುಂದಿನ 65 ದಿನ ಈ ರಾಶಿಯವರಿಗೆ ಮಂಗಳನ ವಿಶೇಷ ಅನುಗ್ರಹ, ಮಣ್ಣೂ ಹೊನ್ನಾಗುವ ಕಾಲ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಈ ಜನರಿಗೆ ಇಂದು ಲಕ್ಷ್ಮಿ ಆಶೀರ್ವಾದದಿಂದ ಭಾರೀ ಅದೃಷ್ಟ. ಹೊಸ ಕೆಲಸಗಳನ್ನು ಆರಂಭಿಸಲು ಸುಸಮಯ. ಯಾವುದೇ ಆಸ್ತಿಗೆ ಸಂಬಂಧಿಸಿದ ವಿವಾದದಲ್ಲಿ ಭಾಗಿಯಾಗಿದ್ದರೆ, ನಿಮ್ಮ ಪರವಾದ ತೀರ್ಪು ಹೊರಬೀಳಬಹುದು. ಮನೆಯ ನವೀಕರಣಕ್ಕೂ ನೀವು ಸಾಕಷ್ಟು ಖರ್ಚು ಮಾಡುತ್ತೀರಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯ ಜನರಿಗೆ ಇಂದು ಅತ್ಯಂತ ಫಲಪ್ರಧವಾದ ದಿನ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಕುಟುಂಬದ ಸದಸ್ಯರೊಂದಿಗೆ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡರೆ ಒಳಿತು.

ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮಗಿಂದು ಒಂದರ ನಂತರ ಒಂದರಂತೆ ಒಳ್ಳೆಯ ಸುದ್ದಿಗಳು ಸಿಗಲಿವೆ. ಸುತ್ತಮುತ್ತಲಿನ ವಾತಾವರಣವು ಆಹ್ಲಾದಕರವಾಗಿರುತ್ತದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಯೋಜನೆಗಳು ಪೂರ್ಣಗೊಳ್ಳಲಿವೆ. ನಿಮ್ಮ ಮಗುವಿನ ವೃತ್ತಿಜೀವನದ ಬಗ್ಗೆ ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು.

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನೀವಂದುಕೊಂಡ ರೀತಿಯಲ್ಲಿ ಕೆಲಸಕಾರ್ಯಗಳು ಪೂರ್ಣಗೊಳ್ಳದ ಕಾರಣ ಚಿಂತೆ ಹೆಚ್ಚಾಗಲಿದೆ. ಇದು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಬಹುದು. ಯಾವುದಕ್ಕೂ ಜಗ್ಗದೆ ನಿಮ್ಮ ಪ್ರಗತಿಯ ಹಾದಿಯಲ್ಲಿ ನೀವು ಮುಂದುವರಿಯಬೇಕು. ಲಕ್ಷ್ಮಿ ಆಶೀರ್ವಾದದಿಂದ ಸಂಜೆ ವೇಳೆಗೆ ಒಳ್ಳೆಯ ಫಲಗಳನ್ನು ಕಾಣುವಿರಿ. 

ಮುಂದಿನ 179 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಕೈ ಸೇರಲಿದೆ ಅಪಾರ ಸಂಪತ್ತು, ಜೀವನದಲ್ಲಿ ಭಾರೀ ಯಶಸ್ಸು 

ಧನು ರಾಶಿಯವರ ಭವಿಷ್ಯ (Sagittarius Horoscope):  
ಈ ದಿನ ನಿಮ್ಮ ಮಾತೇ ನಿಮ್ಮ ಬಂಡವಾಳ. ಉತ್ತಮ ಮಾತುಗಾರರಿಗೆ ಕೆಲಸದಲ್ಲಿ ಅದರಿಂದಲೇ ಗುರುತು ಸಿಗಲಿದೆ. ನಿಮ್ಮ ಸ್ಥಾನಮಾನವೂ ಹೆಚ್ಚಾಗಬಹುದು.  ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ. ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನೀವು ಚಿಂತಿತರಾಗುತ್ತೀರಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇದು ಸಮಸ್ಯೆಗಳಿಂದ ತುಂಬಿದ ದಿನ. ಆದರೂ, ಬುದ್ದಿವಂತಿಕೆಯಿಂದ ವರ್ತಿಸಿದರೆ ಎಲ್ಲವನ್ನೂ ನಿಮ್ಮ ಪರವಾಗಿ ಮಾಡಿಕೊಳ್ಳಬಹುದು. ನಿಮ್ಮ ಕುಟುಂಬದ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ. ಇದು ಕೌಟುಂಬಿಕ ಕಲಹಕ್ಕೆ ಕಾರಣವಾಗಬಹುದು. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ವ್ಯಾಪಾರಸ್ಥರು ಇಂದು ಹೊಸ ಯೋಜನೆ ರೂಪಿಸುವುದರಿಂದ ಶುಭವಾಗಲಿದೆ. ನೀವು ಯಾವುದೇ ಕೆಲಸವನ್ನು ಕೈಗೊಂಡರೂ ಅದರಲ್ಲಿ ಯಶಸ್ಸು ಖಂಡಿತ ಸಿಗುತ್ತದೆ. ಹಿರಿಯ ಸದಸ್ಯರ ಸಹಾಯದಿಂದ ನೀವು ಕೌಟುಂಬಿಕ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ಜನರಿಗೆ ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ನಿಮ್ಮ ಸಂಗಾತಿಯ ವೃತ್ತಿಜೀವನದ ಬಗ್ಗೆ ನೀವು ಸ್ವಲ್ಪ ಚಿಂತೆ ಮಾಡುತ್ತೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆದರೆ, ಮಧ್ಯಾಹ್ನದ ಬಳಿಕ ಶುಭ ಸುದ್ದಿಯೊಂದು ಸಿಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News