ಮೊಬೈಲ್ ನೋಡುತ್ತಾ ರೈಲ್ವೆ ಹಳಿ ದಾಟುವ ವೇಳೆ ಅಪಘಾತ: ವಿದ್ಯಾರ್ಥಿನಿ ದಾರುಣ ಸಾವು

Accident: ಮೃತ ವಿದ್ಯಾರ್ಥಿನಿಯನ್ನು ದೊಡ್ಡಬಳ್ಳಾಪುರ ಮೂಲದ ಭವ್ಯ ಬಾಯ್  ಎಸ್ ಎನ್ (18) ಎಂದು ಗುರುತ್ತಿಸಲಾಗಿದ್ದು, ಗೌರಿಬಿದನೂರು ಮುನಿಸಿಪಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

Written by - Yashaswini V | Last Updated : Jun 14, 2024, 03:13 PM IST
  • ಕಾಲೇಜಿನಿಂದ ಹಾಸ್ಟೆಲ್‌ಗೆ ಸ್ನೇಹಿತೆ ಶಶಿಕಲಾ ಜೊತೆ ಹೋಗುವ ವೇಳೆ ನನಗೆ ಹೊಟ್ಟೆ ನೋವು ಬರುತ್ತಿದೆ ಎಂದು ಭವ್ಯ ತನ್ನ ಸ್ನೇಹಿತೆಗೆ ಹೇಳಿದ್ದಾಳೆ.
  • ಇನ್ನೂ ಸ್ನೇಹಿತೆ ಶಶಿಕಲಾ ಜ್ಯೂಸ್ ತರಲು ಅಂಗಡಿಗೆ ಹೋಗಿದ್ದಾರೆ
  • ಇದೇ ವೇಳೆ ಭವ್ಯ ಮೊಬೈಲ್‌ ನೋಡುತ್ತಾ ರೈಲು ಬರುವುದನ್ನು ಗಮನಿಸದೆ ರೈಲ್ವೆ ಹಳಿ ದಾಟುವ ವೇಳೆ ರೈಲು (Train) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಮೊಬೈಲ್ ನೋಡುತ್ತಾ ರೈಲ್ವೆ ಹಳಿ ದಾಟುವ ವೇಳೆ ಅಪಘಾತ: ವಿದ್ಯಾರ್ಥಿನಿ ದಾರುಣ ಸಾವು title=

Train Accident Student Dies: ಮೊಬೈಲ್ ನೋಡುತ್ತಾ ‌ರೈಲ್ವೆ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಪಿಯುಸಿ ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ದೊಡ್ಡಬಳ್ಳಾಪುರ ಮೂಲದ ಭವ್ಯ ಬಾಯ್  ಎಸ್ ಎನ್ (18) ಎಂದು ಗುರುತ್ತಿಸಲಾಗಿದ್ದು, ಗೌರಿಬಿದನೂರು ಮುನಿಸಿಪಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ (Second PUC Student) ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿ- ನಟ ದರ್ಶನ್ ವಿರುದ್ಧ ಸಾಗರದಲ್ಲಿ ಪ್ರತಿಭಟನೆ: ಕಠಿಣ ಶಿಕ್ಷೆಗೆ ಆಗ್ರಹ

ಕಾಲೇಜಿನಿಂದ ಹಾಸ್ಟೆಲ್‌ಗೆ ಸ್ನೇಹಿತೆ ಶಶಿಕಲಾ ಜೊತೆ ಹೋಗುವ ವೇಳೆ ನನಗೆ ಹೊಟ್ಟೆ ನೋವು ಬರುತ್ತಿದೆ ಎಂದು ಭವ್ಯ ತನ್ನ ಸ್ನೇಹಿತೆಗೆ ಹೇಳಿದ್ದಾಳೆ. ಇನ್ನೂ ಸ್ನೇಹಿತೆ ಶಶಿಕಲಾ ಜ್ಯೂಸ್ ತರಲು ಅಂಗಡಿಗೆ ಹೋಗಿದ್ದು ಇದೇ ವೇಳೆ ಭವ್ಯ ಮೊಬೈಲ್‌ ನೋಡುತ್ತಾ ರೈಲು ಬರುವುದನ್ನು ಗಮನಿಸದೆ ರೈಲ್ವೆ ಹಳಿ ದಾಟುವ ವೇಳೆ ರೈಲು (Train) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಸದ್ಯ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಸೇರಿದಂತೆ ರೈಲ್ವೆ ಇಲಾಖೆಯ ಪೊಲೀಸರು (Railway Department Police) ಸ್ಥಳಕ್ಕೆ ಭೇಟಿ‌ ಕೊಟ್ಟು ಪರಿಶೀಲನೆ ನಡೆಸಿ ಮೃತ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ರೈಲ್ವೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ- OMG: ₹300 ಕೋಟಿ ಆಸ್ತಿಗಾಗಿ ₹1 ಕೋಟಿ ಕೊಟ್ಟು ಮಾವನ ಹತ್ಯೆ ಮಾಡಿಸಿದ ಸೊಸೆ!

ಇನ್ನೂ ಮೆಟ್ರಿಕ್ ಪದವಿ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ರೈಲ್ವೆ ಹಳ್ಳಿಯ ಮೇಲೆ ನಡೆದುಕೊಂಡು ಕಾಲೇಜಿಗೆ ಹೋಗುತ್ತಾರೆ. ಆದರೆ ಇದುವರೆಗೂ ಹಾಸ್ಟೆಲ್ ವಾರ್ಡನ್ ಮಕ್ಕಳಿಗೆ ಯಾವುದೇ ತಿಳುವಳಿಕೆ ಹೇಳಿಲ್ಲಾ ಎಂದು‌ ತಿಳಿದು ಬರುತ್ತಿದೆ. ಸದ್ಯ ನಗರ ವಾಸಿಗಳು ಹಾಗೂ ಪೋಷಕರು ವಾರ್ಡನ್ ನಡುವಳಿಕೆ ವಿರುದ್ದವು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಅವಘಡಕ್ಕೆ ರಸ್ತೆಯಲ್ಲಿ ಮೊಬೈಲ್ (Mobile) ನೋಡುತ್ತಾ ಸಾಗುವುದು ಕೂಡ ಪ್ರಮುಖ ಕಾರಣವಾಗಿದೆ ಎಂಬುದನ್ನೂ ಅಲ್ಲೆಗಳೆಯುವಂತಿಲ್ಲ. ಮಕ್ಕಳಿಗೆ ರಸ್ತೆಯಲ್ಲಿ ಮೊಬೈಲ್ ಬಳಸದಂತೆ, ರಸ್ತೆ ನೋಡಿಕೊಂಡು ಚಲಿಸುವಂತೆ ತಿಳುವಳಿಕೆ ಹೇಳಬಾಕಿರುವುದು ಪೋಷಕರ ಕರ್ತವ್ಯವೂ ಆಗಿದೆ. ಪೋಷಕರು ಈ ಬಗ್ಗೆ ನಿಗಾವಹಿಸಿದರೆ ಮುಂದಾದರೂ ಇಂತಹ ಅನಾಹುತಗಳನ್ನು ತಪ್ಪಿಸಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News