ಪೋಲೀಸರ ಅತಿಥಿಯಾದ ಚಾಲಾಕಿ ಕಳ್ಳರು

ಇವರೆಲ್ಲ ಒಳ್ಳೆಯ ಪದವಿಧರರು , ಆದರೆ ಇವರು ಮಾಡುವ ಕೆಲಸ ಕೇಳಿದ್ರೆ ನೀವೆ ಛೀ..ಥೂ ಅಂತ ಉಗಿತೀರಾ.. ಯೆಸ್‌ ಮೈಕೈ ತುಂಬಿಕೊಂಡಿರೋ ದುಡಿಯೋದು ಬಿಟ್ಟು, ಈಗ ಮಾಡಬಾರದ್ದು ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ. ಅಷ್ಟಕ್ಕೂ ಇವರು ಮಾಡಿದ್ದೇನು ಅಂತೀರಾ...

Written by - Zee Kannada News Desk | Last Updated : Nov 30, 2022, 11:59 PM IST
  • ಪೋಲಿಸರ ಅಥಿತಿಯಾಗಿ ಪೋಲಿಸರ ಜೊತೆ ಬರುತ್ತಿರುವ ಇವರೆಲ್ಲ ಒಳ್ಳೆಯ ಪದವಿಧರರು ,
  • ಆದರೆ ಇವರು ಮಾಡುವ ಕೆಲಸ ಕೇಳಿದ್ರೆ ನೀವೆ ಛೀ..ಥೂ ಅಂತ ಉಗಿತೀರಾ..
  • ಯೆಸ್‌ ಮೈಕೈ ತುಂಬಿಕೊಂಡಿರೋ ದುಡಿಯೋದು ಬಿಟ್ಟು, ಈಗ ಮಾಡಬಾರದ್ದು ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ
 ಪೋಲೀಸರ ಅತಿಥಿಯಾದ ಚಾಲಾಕಿ ಕಳ್ಳರು  title=
ಸಾಂದರ್ಭಿಕ ಚಿತ್ರ

ರಾಯಚೂರು: ಇವರೆಲ್ಲ ಒಳ್ಳೆಯ ಪದವಿಧರರು , ಆದರೆ ಇವರು ಮಾಡುವ ಕೆಲಸ ಕೇಳಿದ್ರೆ ನೀವೆ ಛೀ..ಥೂ ಅಂತ ಉಗಿತೀರಾ.. ಯೆಸ್‌ ಮೈಕೈ ತುಂಬಿಕೊಂಡಿರೋ ದುಡಿಯೋದು ಬಿಟ್ಟು, ಈಗ ಮಾಡಬಾರದ್ದು ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ. ಅಷ್ಟಕ್ಕೂ ಇವರು ಮಾಡಿದ್ದೇನು ಅಂತೀರಾ...

ಇದನ್ನೂ ಓದಿ- Crime News: ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ..!

ಪೋಲಿಸರ ಅಥಿತಿಯಾಗಿ ಪೋಲಿಸರ ಜೊತೆ ಬರುತ್ತಿರುವ ಇವರೆಲ್ಲ ಒಳ್ಳೆಯ ಪದವಿಧರರು , ಆದರೆ ಇವರು ಮಾಡುವ ಕೆಲಸ ಕೇಳಿದ್ರೆ ನೀವೆ ಛೀ..ಥೂ ಅಂತ ಉಗಿತೀರಾ.. ಯೆಸ್‌ ಮೈಕೈ ತುಂಬಿಕೊಂಡಿರೋ ದುಡಿಯೋದು ಬಿಟ್ಟು, ಈಗ ಮಾಡಬಾರದ್ದು ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ. ಹೌದು ದುಡಿಯೋಕೆ ಅಂತ ಬಂದು ಮನೆ ಬಾಡಿಗೆ ಪಡೆದು ತಾವಿದ್ದ ಮನೆ ಮಾಲೀಕರ ಮನೆ ದೋಚಿದ್ದಾರೆ. ಈ ಮನೆ ದೋಚುವ ಹಿಂದಿನ ಪ್ಲ್ಯಾನ್‌ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ... ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಸುಜಾತಾ ಅಲಿಯಾಸ್ ನಿಹಾರಿಕಾ ಎಂಬ ಮಹಿಳೆ ಬ್ಯಾಂಕ್‌ ಉದ್ಯೋಗಿ ಅಂತೇಳಿ ಮನೆ ಬಾಡಿಗೆ ಪಡೆದಿದ್ದಾಳೆ. ಶ್ರೀಮಂತರ ಮನೆ ಬಾಡಿಗೆ ಪಡೆದು ಮಾಲೀಕನನನ್ನೇ ಬುಟ್ಟಿಗೆ ಹಾಕೊಂಡು ಅವರ ಮನೆಯನ್ನೇ ಕಳ್ಳತನ ಮಾಡಿದ್ದಾಳೆ. ಇನ್ನು ಇವಳಿಗೆ ಇನ್ನು ಮೂವರು ಸಾಥ್‌ ನೀಡಿದ್ದು ಈಗ ಎಲ್ಲರು ಖಾಕಿ ಬಲೆಗೆ ಬಿದ್ದಿದ್ದಾರೆ.

ಇನ್ನು ಚಾಲಾಕಿ ಕಳ್ಳಿ ದರೋಡೆ ಮಾಡೋದು ಅಲ್ಲದೇ ಅದೇ ಮನೆಯಲ್ಲಿ ವೇಶ್ಯಾವಟಿಕೆ ಮಾಡುತ್ತಿದ್ದಳೆನ್ನಲಾಗಿದೆ. ಆದ್ರೆ ಬಾಡಿಗೆ ಮನೆ ಮಾಲೀಕರಿಗೆ ಮಾತ್ರ ನಾನು ಬ್ಯಾಂಕ್‌ ಉದ್ಯೋಗಿ ಅಂತ ಬಿಲ್ಡಪ್‌ ಕೊಡ್ತಿದ್ದಳಂತೆ. ಇನ್ನೂ ಸುಜಾತಾ ಅಲಿಯಾಸ್ ನಿಹಾರಿಕ ಎಲ್ಲಾ ಶ್ರೀಮಂತರಿಗೆ ಟಾರ್ಗೆಟ್ ಮಾಡುತ್ತಿದ್ದಳು. ಅವರಿಗೆ ಆಂಧ್ರದಿಂದ ಮಹಿಳೆಯರನ್ನ ಕರೆಸಿ ಆಸೆ ತೋರಿಸುತ್ತಿದ್ದಳಂತೆ. ತದನಂತರ ಬಲೆಗೆ ಬಿದ್ದ ಮಿಕದ ಬಗ್ಗೆ ಎಲ್ಲ ಮಾಹಿತಿ ಪಡೆದು ತನ್ನ ಗ್ಯಾಂಗ್‌ ಪಕ್ಕಾ ಸ್ಕೆಚ್‌ ಹಾಕಿ ಕೊಡ್ತಿದ್ದಳಂತೆ. ಹೀಗೆ ಪಕ್ಕಾ ಪ್ಲ್ಯಾನ್‌ ಮಾಡಿ ಕಳ್ಳತನಕ್ಕಿಳಿದಿದ್ದ ಗ್ಯಾಂಗ್‌ ರೆಡ್‌ ಹ್ಯಾಂಡ್‌ ಆಗಿ ಖಾಕಿ ಕೈಗೆ ತಗ್ಲಾಕಿಕೊಂಡಿದ್ದಾರೆ. ಯಾವಾಗ ಖಾಕಿ ಬಲೆಗೆ ಬಿದ್ರೋ ಆಗ ಇವರ ಇನ್ನೊಂದ ಮುಖ ಬಯಲಾಗಿದೆ. ಅಲ್ಲದೇ ಇವರ ಮೇಲೆ 22 ರಾಜ್ಯಗಳಲ್ಲಿ25 ಕೇಸ್ ದಾಖಲಾಗಿರುವ ಬಗ್ಗೆ ಬೆಳಕಿಗೆ ಬಂದಿದೆ. ಇನ್ನು ಇವರ ಕೈಚಳಕದ ಬಗ್ಗೆ ನೊಂದ ಮಹಿಳೆಯೊಬ್ಬರು ನೋವು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ- Betel Benefits: ಅಲ್ಸರ್ ವಿರುದ್ಧ ರಾಮಬಾಣ ಔಷಧಿ ವಿಳ್ಯದೆಲೆ, ರಕ್ತದಲ್ಲಿನ ಸಕ್ಕರೆಗೂ ಕಡಿವಾಣ

ಒಟ್ಟಾರೆ ರಾಯಚೂರು ಜಿಲ್ಲೆಯ ಸಿಂಧನೂರು ಭಾಗದಲ್ಲಿ ಸಾರ್ವಜನಿಕರ ನಿದ್ದೆ ಕೆಡಿಸಿದ್ದ ಖತರ್ನಾಕ್‌ ಗ್ಯಾಂಗ್‌ ಈಗ ಜೈಲೂಟ ಸವಿಯುತ್ತಿದ್ದಾರೆ. ಸತತ 45ದಿನಗಳ ಕಾರ್ಯಾಚರಣೆ ನಡೆಸಿ ಚಾಲಾಕಿ ಕಳ್ಳಿಯ ಬಣ್ಣ ಬಯಲು ಮಾಡಿದ ಪೊಲೀಸರಿಗೆ ಸಾರ್ವಜನಿಕರು ಹ್ಯಾಟ್ಸ್‌ಪ್‌ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News