Honeytrap: ಹನಿಟ್ರ್ಯಾಪ್ ಮಾಡಿ ನಂತರ ಸಿಬಿಐ ಹೆಸರಲ್ಲಿ ಲಕ್ಷ ಲಕ್ಷ ವಂಚನೆ

Honeytrap: ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ‌ ಜೊತೆ ಚಾಟ್ ಮಾಡಿದ್ದ ಯುವಕ ಈ ಖದೀಮರ ಬಲೆಗೆ ಬಿದ್ದಿದ್ದಾನೆ. 

Written by - Chetana Devarmani | Last Updated : Jul 10, 2022, 04:55 PM IST
  • ಹನಿಟ್ರ್ಯಾಪ್ ಮಾಡಿ ನಂತರ ಸಿಬಿಐ ಹೆಸರಲ್ಲಿ ಲಕ್ಷ ಲಕ್ಷ ವಂಚನೆ
  • ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ‌ ಜೊತೆ ಚಾಟ್ ಮಾಡಿದ್ದ ಯುವಕ
  • ಅಶ್ಲೀಲ ವಿಡಿಯೋ ಕಾಲ್ ಅನ್ನ ರೆಕಾರ್ಡ್ ಮಾಡಿದ್ದ ಯುವತಿ
Honeytrap: ಹನಿಟ್ರ್ಯಾಪ್ ಮಾಡಿ ನಂತರ ಸಿಬಿಐ ಹೆಸರಲ್ಲಿ ಲಕ್ಷ ಲಕ್ಷ ವಂಚನೆ  title=
ಹನಿಟ್ರ್ಯಾಪ್

ಬೆಂಗಳೂರು: ಹನಿಟ್ರ್ಯಾಪ್ ಮಾಡಿ ನಂತರ ಸಿಬಿಐ ಹೆಸರಲ್ಲಿ ಲಕ್ಷ ಲಕ್ಷ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ‌ ಜೊತೆ ಚಾಟ್ ಮಾಡಿದ್ದ ಯುವಕ ಈ ಖದೀಮರ ಬಲೆಗೆ ಬಿದ್ದಿದ್ದಾನೆ. 

ಇದನ್ನೂ ಓದಿ: PSI Exam Scam : ಪಿಎಸ್ಐ ನೇಮಕಾತಿ ಅಕ್ರಮ : ಅಮೃತ್ ಪೌಲ್ ಡೈರಿಯಿಂದ ಸಿಕ್ತು ಮೇಜರ್ ಟ್ವಿಸ್ಟ್

ಸೋಶಿಯಲ್ ಮೀಡಿಯಾ ಮೂಲಕ ಯುವತಿಯೊಬ್ಬಳು ಪರಿಚಯವಾಗಿದ್ದಳು. ನಂತರ ಅವಳ ಜೊತೆಗೆ ವಿಡಿಯೋ ಕಾಲ್ ಚಾಟಿಂಗ್ ಶುರುವಾಗಿತ್ತು. ಇದೇ ವೇಳೆ ಅಶ್ಲೀಲ ವಿಡಿಯೋ ಕಾಲ್ ಅನ್ನ ಯುವತಿ ರೆಕಾರ್ಡ್ ಮಾಡಿದ್ದಳು. ಅಶ್ಲೀಲ ವಿಡಿಯೋ ಕಾಲ್ ಮೂಲಕ ಹನಿಟ್ರ್ಯಾಪ್ ನಡೆದಿತ್ತು. ನಂತರ ಇದೇ ವಿಡಿಯೋವನ್ನು ಇಟ್ಟುಕೊಂಡು ಯುವಕನಿಗೆ ಬೆದರಿಕೆ ಹಾಕಲು ಆರಂಭಿಸಿದರು. ಹಣಕ್ಕೆ ಬೇಡಿಕೆಯಿಟ್ಟರು. ಆದಗ ಯುವಕ ಹಣ ನೀಡಲು ಹಿಂದೇಟು ಹಾಕಿದ. 

ಇದಕ್ಕೆ ಬೇರೆ ದಾರಿ ಹಿಡಿದ ಸೈಬರ್‌ ಖದೀಮರು ಮತ್ತೊಂದು ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದಾರೆ. ಯುವತಿ ಸಾವನ್ನಪ್ಪಿದ್ದಾಳೆ ಅನ್ನೋ ಕಥೆ ಕಟ್ಟಿದ್ದಾರೆ. ಆಕೆಯ ಸಾವಿಗೆ ನೀನೆ ಕಾರಣ ಎಂದು ಯುವಕನನ್ನು ಪೀಡಿಸಲು ಆರಂಭಿಸಿದ್ದಾರೆ. ಈ ಪ್ರಕರಣ ಸಿಬಿಐನಲ್ಲಿ ದಾಖಲಾಗಿದೆ ಎಂದು ಹೆದರಿಸಿದ್ದಾರೆ. ಗೂಗಲ್‌ನಲ್ಲಿ ಸಿಗುವ ಸಿಬಿಐನಲ್ಲಿ ದಾಖಲಾಗಿರುವ ಪ್ರಕರಣಗಳ ಲಿಸ್ಟ್‌ನ್ನು ಎಡಿಟ್‌ ಮಾಡಿ. ಅದರಲ್ಲಿ ಈ ಯುವಕನ ಹೆಸರು ಸೇರಿಸಿ ಬೆದರಿಸಿದ್ದಾರೆ. ಹೀಗೆ ವಿಚಾರಣೆ ಹೆಸರಲ್ಲಿ ಯುವಕನಿಂದ 5 ಲಕ್ಷ ಹಣ ಪೀಕಿದ್ದಾರೆ. 

ಹಣ ಕಳೆದುಕೊಂಡು ಚಿಂತಿತನಾದ ಯುವಕ ಈ ವಿಚಾರವನ್ನು ತನ್ನ ಸ್ನೇಹಿತರೊಬ್ಬರಿಗೆ ತಿಳಿಸಿದ್ದಾನೆ. ಬಳಿಕ ಆಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಹೆಣ್ಮಕ್ಕಳ ಮೈ ಮುಟ್ಟಿ ಎಸ್ಕೇಪ್ ಆಗುತ್ತಿದ್ದ ಡೆಲವೆರಿ ಬಾಯ್ ಅಂದರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News