27 Loves 53: ಅವನಿಗೆ 53, ಆಕೆಗೆ 27 ವರ್ಷ: ಓಡಿ ಹೋಗಿ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ ಜೋಡಿ!

Chikkaballapur Suicide Drama: ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿ, ಬ್ಯಾಗ್, ಬಟ್ಟೆ, ಮೊಬೈಲ್ ಫೋನ್ ಇಟ್ಟು ಇಬ್ಬರು ಆತ್ಮಹತ್ಯೆಯ ಡ್ರಾಮಾ ಮಾಡಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ತುಂಬಿದ ಕೆರೆಯಲ್ಲಿ ದಿನವಿಡೀ ಶವ ಶೋಧ ನಡೆಸಿ ಕೊನೆಗೆ ಬರಿಗೈಲಿ ವಾಪಸಾಗಿದ್ದರು.  

Written by - Puttaraj K Alur | Last Updated : Aug 16, 2023, 03:11 PM IST
  • ಪೊಲೀಸರು ಹಾಗೂ ಸಂಬಂಧಿಗಳಿಂದ ಬಚಾವ್ ಆಗಲು ಹೈಡ್ರಾಮಾ ಮಾಡಿದ ಪ್ರೇಮಿಗಳು!
  • ಚಿಕ್ಕಬಳ್ಳಾಪುರದ ಅಮಾನಿಬೈರಸಾಗರ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ರೀತಿ ಡ್ರಾಮಾ
  • ಕೆರೆಯ ದಡದಲ್ಲಿ ಚಪ್ಪಲಿ, ಬ್ಯಾಗ್, ಬಟ್ಟೆ, ಮೊಬೈಲ್ ಫೋನ್ ಇಟ್ಟು ಡ್ರಾಮಾ ಮಾಡಿದ್ದ ಜೋಡಿ
27 Loves 53: ಅವನಿಗೆ 53, ಆಕೆಗೆ 27 ವರ್ಷ: ಓಡಿ ಹೋಗಿ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ ಜೋಡಿ! title=
ಹೈಡ್ರಾಮಾ ಮಾಡಿದ ಪ್ರೇಮಿಗಳು!

ಚಿಕ್ಕಬಳ್ಳಾಪುರ: ಆಕೆಗೆ 27 ವರ್ಷ, ಅವನಿಗೆ 53 ವರ್ಷ… ಪ್ರೀತಿಸಿ ಮದುವೆಯಾದ ಈ ಇಬ್ಬರು ಪೊಲೀಸರು ಹಾಗೂ ಸಂಬಂಧಿಗಳಿಂದ ಬಚಾವ್ ಆಗಲು ತುಂಬಿದ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಹೈಡ್ರಾಮಾ ಮಾಡಿ ಸಿಕ್ಕಿಬಿದ್ದಿದ್ದಾರೆ.

ಹೌದು, ಚಿಕ್ಕಬಳ್ಳಾಪುರ ತಾಲೂಕಿನ ಕಡಶೀಗೇನಹಳ್ಳಿ ಗ್ರಾಮದ ನಿವಾಸಿಗಳಾದ 53  ವರ್ಷದ ಮುನಿರಾಜು ಹಾಗೂ 27 ವರ್ಷದ ಲಲಿತಮ್ಮ ಇವರಿಬ್ಬರೂ ಈ ಮೊದಲೇ ವಿವಾಹಿತರಾಗಿದ್ದರು. ಮುನಿರಾಜುಗೆ ಎದೆಯತ್ತರಕ್ಕೆ ಬೆಳೆದ ಮಕ್ಕಳಿದ್ದಾರೆ. ಆದರೆ ಲಲಿತಮ್ಮಗೆ ಮದುವೆಯಾಗಿ 8 ವರ್ಷವಾದರೂ ಮಕ್ಕಳು ಆಗಿರಲಿಲ್ಲವಂತೆ. ಹೀಗಾಗಿ ಆಕೆ ಮುನಿರಾಜು ಜೊತೆ  ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: ಹಾವೇರಿ ಅಖಾಡದಲ್ಲಿ ಈಶ್ವರಪ್ಪ ಲೋಕಸಭೆ ತಾಲೀಮು.. ಬಿಜೆಪಿ ಹಿರಿಯರಿಗೆ ಶುರುವಾಯ್ತು ಟಿಕೆಟ್ ಟೆನ್ಶನ್

ಇವರಿಬ್ಬರೂ ಪರಸ್ಪರ ಪ್ರೀತಿಸಿ ಜೂನ್ 15ರಂದು ಎಸ್ಕೇಪ್ ಆಗಿದ್ದರು. ಜೂನ್ 28ರಂದು ಲಲಿತಮ್ಮನ ಗಂಡ ನರಸಿಂಹಮೂರ್ತಿ ಪತ್ನಿ ಕಾಣೆಯಾದ ಬಗ್ಗೆ ದೂರು ದಾಖಲು ಮಾಡಿದ್ದರು. ಹೀಗಾಗಿ ಸಂಬಂಧಿಕರು ಮತ್ತು ಪೊಲೀಸರಿಂದ ಬಚಾವ್ ಆಗಲು ಯತ್ನಿಸಿದ ಈ ಜೋಡಿ ಚಿಕ್ಕಬಳ್ಳಾಪುರದ ತುಂಬಿರುವ ಅಮಾನಿಬೈರಸಾಗರ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಹೈಡ್ರಾಮಾ ಮಾಡಿದ್ದಾರೆ.

ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿ, ಬ್ಯಾಗ್, ಬಟ್ಟೆ, ಮೊಬೈಲ್ ಫೋನ್ ಇಟ್ಟು ಇಬ್ಬರು ಆತ್ಮಹತ್ಯೆಯ ಡ್ರಾಮಾ ಮಾಡಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ತುಂಬಿದ ಕೆರೆಯಲ್ಲಿ ದಿನವಿಡೀ ಶವ ಶೋಧ ನಡೆಸಿ ಕೊನೆಗೆ ಬರಿಗೈಲಿ ವಾಪಸಾಗಿದ್ದರು.  

ಇದನ್ನೂ ಓದಿ: ಕೈ-ದಳ ನಡುವೆ ನಿವೇಶನ ಹಂಚಿಕೆ ಒಪ್ಪಂದ?..ತುಮಕೂರಿನಲ್ಲಿ ನಿಲ್ಲದ ಹಾಲಿ-ಮಾಜಿ ಶಾಸಕರ ಟಾಕ್ ವಾರ್..!

ಬಳಿಕ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾದರೂ ಯಾಕೆಂದು ಪೊಲೀಸರು ತನಿಖೆ ಕೈಗೊಂಡಿದ್ದರು. ಇವರಿಬ್ಬರ ಮೊಬೈಲ್ ಸಿಡಿಆರ್ ತನಿಖೆ ನಡೆಸಿದ್ದರು. ಈ ಜೋಡಿಯ ಪೈಕಿ ಒಂದು ಪೋನ್ ಸಿಮ್ ಆಂಧ್ರದ ಅನಂತಪುರದಲ್ಲಿ ಇರುವುದು ಗೊತ್ತಾಗಿದೆ. ತಡಮಾಡದ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಪೊಲೀಸರು ಖಚಿತ ಮಾಹಿತಿ ಪಡೆದು ಅಲ್ಲಿಗೆ ದೌಡಾಯಿಸಿದ್ದಾರೆ. ಕೊನೆಗೆ  ಕಿಲಾಡಿ ಜೋಡಿಯನ್ನು ವಶಕ್ಕೆ ಪಡೆದು ಚಿಕ್ಕಬಳ್ಳಾಪುರಕ್ಕೆ ಕರೆ ತಂದಿದ್ದಾರೆ. ಇದೀಗ ಹಿಂದಿರುಗಿ ಬಂದಿರುವ ಪತ್ನಿಯನ್ನು ಮನೆಗೆ ಸೇರಿಸಿಕೊಳ್ಳಲು ಲಲಿತಮ್ಮನ ಗಂಡ ಒಪ್ಪಿಕೊಳ್ಳುತ್ತಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News