Hacker Sriki: ಮತ್ತೆ ಚಾಲೆಂಜಿಂಗ್ ಆಯ್ತು ಹ್ಯಾಕರ್ ಶ್ರೀಕಿ ಹುಡುಕಾಟ!

Hacker Sriki: ಸದ್ಯ ನಾಪ್ತೆಯಾಗಿರುವ ಕುಖ್ಯಾತ ಇಂಟರ್ ನ್ಯಾಷನಲ್ ಹ್ಯಾಕರ್ ಶ್ರೀ ಕೃಷ್ಣ ಭಟ್ ಅಲಿಯಾಸ್ ಶ್ರೀಕಿ ಹುಡುಕಾಟ ಮತ್ತೆ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಿಗಾಗಿ ಕೇರಳದ ಕಾಸರಗೋಡು ಕ್ರೈಂ ಬ್ರಾಂಚ್ ಪೊಲೀಸರು ಎಲ್ಲಿಲ್ಲದ ಹುಡುಕಾಟ ನಡೆಸಿದ್ದಾರೆ. 

Written by - VISHWANATH HARIHARA | Edited by - Chetana Devarmani | Last Updated : Jun 14, 2022, 12:54 PM IST
  • ನಾಪ್ತೆಯಾಗಿರುವ ಕುಖ್ಯಾತ ಇಂಟರ್ ನ್ಯಾಷನಲ್ ಹ್ಯಾಕರ್
  • ಶ್ರೀಕಿಗಾಗಿ ಕಾಸರಗೋಡು ಕ್ರೈಂ ಬ್ರಾಂಚ್ ಪೊಲೀಸರ ಶೋಧಕಾರ್ಯ
  • ಮತ್ತೆ ಚಾಲೆಂಜಿಂಗ್ ಆಯ್ತು ಹ್ಯಾಕರ್ ಶ್ರೀಕಿ ಹುಡುಕಾಟ!
Hacker Sriki: ಮತ್ತೆ ಚಾಲೆಂಜಿಂಗ್ ಆಯ್ತು ಹ್ಯಾಕರ್ ಶ್ರೀಕಿ ಹುಡುಕಾಟ! title=
ಹ್ಯಾಕರ್ ಶ್ರೀಕಿ

ಬೆಂಗಳೂರು:  ಸದ್ಯ ನಾಪ್ತೆಯಾಗಿರುವ ಕುಖ್ಯಾತ ಇಂಟರ್ ನ್ಯಾಷನಲ್ ಹ್ಯಾಕರ್ ಶ್ರೀ ಕೃಷ್ಣ ಭಟ್ ಅಲಿಯಾಸ್ ಶ್ರೀಕಿ ಹುಡುಕಾಟ ಮತ್ತೆ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಿಗಾಗಿ ಕೇರಳದ ಕಾಸರಗೋಡು ಕ್ರೈಂ ಬ್ರಾಂಚ್ ಪೊಲೀಸರು ಎಲ್ಲಿಲ್ಲದ ಹುಡುಕಾಟ ನಡೆಸಿದ್ದಾರೆ. 

ಇದನ್ನೂ ಓದಿ: ಸ್ನೇಹಿತ ಸಿಗರೇಟ್ ಕೊಟ್ಟ ಸೇದಿದ್ದೆ, ಡ್ರಗ್ಸ್ ಸೇವಿಸಿಲ್ಲ: ಸಿದ್ದಾಂತ್ ಕಪೂರ್

ಓರ್ವ ಡಿವೈಎಸ್ ಪಿ, 3 ಜನ ಇನ್‌ಸ್ಪೆಕ್ಟರ್ ಗಳು ಸೇರಿ 10 ದಿನ ಬೆಂಗಳೂರಲ್ಲಿ ಹುಡುಕಾಟ ನಡೆಸಿದರೂ ಶ್ರೀಕಿ ಮಾತ್ರ ಪತ್ತೆಯಾಗಿಲ್ಲ. ಎಲ್ಲಿ ಹುಡುಕಿದ್ರೂ ಕಾಸರಗೋಡು ಪೊಲೀಸರಿಗೆ ಕೊನೆಗೂ ಶ್ರೀಕಿ ಮಾತ್ರ ಸಿಗಲಿಲ್ಲ. ಕೇರಳದಲ್ಲಿ 923 ಸೈಬರ್ ಪ್ರಕರಣ ದಾಖಲಾಗಿತ್ತು. ಆ ಪ್ರಕರಣಗಳಲ್ಲಿ ನೂರಾರು ಕೋಟಿ ವಂಚನೆಯಾಗಿದೆ. 

ಇಮೇಲ್ ಹ್ಯಾಕ್, ಅಕೌಂಟ್ಸ್ ಹ್ಯಾಕ್, ಗೌರ್ನಮೆಂಟ್ಸ್ ವೆಬ್ ಸೈಟ್ಸ್ ಹ್ಯಾಕ್ ಮಾಡಿ ವಂಚನೆ ಮಾಡಲಾಗಿದೆ. ಶ್ರೀಕಿ ಈ ಹಿಂದೆ ಅರೆಸ್ಟ್ ಆಗಿದ್ದ ಪ್ರಕರಣಗಳು ಮತ್ತು ಕೇರಳದಲ್ಲಿ ದಾಖಲಾಗಿರುವ ಪ್ರಕರಣಗಳಿಗೂ ಸಾಮ್ಯತೆ ಕಂಡು ಬಂದಿದೆ. ಹೀಗಾಗಿ ಕೇರಳದಲ್ಲಿ ನಡೆಯುತ್ತಿರುವ ಸೈಬರ್‌ ಕ್ರೈಂ ನಲ್ಲಿ ಶ್ರೀಕಿ ಕೈವಾಡ ಇರಬಹುದೆಂಬ ಅನುಮಾನ ಕಾಸರಗೋಡು ಪೊಲೀಸರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಅವರು ಈ ಕುಖ್ಯಾತ ಹ್ಯಾಕರ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. 

ಹ್ಯಾಕರ್ ಶ್ರೀಕಿ ಹುಡುಕಾಟ ತಲೆ ನೋವಾಗಿದ್ದೇಕೆ!

ಯಾವುದೇ ಮೊಬೈಲ್ ಅನ್ನು ಹ್ಯಾಕರ್  ಶ್ರೀಕಿ ಬಳಸಲ್ಲ. ಆತನನ್ನ ಸಂಪರ್ಕ ಮಾಡೋದೇ ದೊಡ್ಡ ಕಷ್ಟ. ನೆಟ್‌ವರ್ಕ್ ಡಂಪ್ ಮಾಡಿ ಅಥಾವ ಟವರ್ ಲೋಕೆಷನ್ ಅಧರಿಸಿ ಪತ್ತೆ ಮಾಡೋದಂತೂ ಅಸಾಧ್ಯವೇ ಸರಿ. ಕೇವಲ ಐಷಾರಾಮಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುವ ಶ್ರೀಕಿ, ತನ್ನ ಮನೆಗೂ ಹೋಗದೆ ಇರುವುದರಿಂದ ಆತನನ್ನ ಹುಡುಕೋದೆ ಸವಾಲಾಗಿದೆ. 

ಇದನ್ನೂ ಓದಿ: ದಿ ಪಾರ್ಕ್ ಹೊಟೇಲ್‌ನಲ್ಲಿ ಆ ರಾತ್ರಿ ನಡೆದಿದ್ದು ರೇವ್ ಪಾರ್ಟಿನಾ! FIR ನಲ್ಲಿ ಏನಿದೆ?

ಬೆಂಗಳೂರಿನ ಎಲ್ಲಾ ಐಷಾರಾಮಿ ಹೋಟೆಲ್‌ಗಳನ್ನು ಶೋಧಿಸಿದರೂ ಪೊಲೀಸರ ಹದ್ದಿನ ಕಣ್ಣಿಗೆ ಶ್ರೀಕಿ ಮಾತ್ರ ಬಿದ್ದಿಲ್ಲ. ಶ್ರೀಕಿ ಐಷಾರಾಮಿ ಹೋಟೆಲ್‌ಗಳಲ್ಲೂ ಸಿಗದಿರುವ ಕಾರಣ ಕೇರಳ ಪೊಲೀಸರು ವಾಪಸ್ ತೆರಳಿದ್ದಾರೆ. ಶ್ರೀಕಿ ಬಗ್ಗೆ ಮಾಹಿತಿ ಸಿಕ್ಕರೆ ನೀಡುವಂತೆ ಬೆಂಗಳೂರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News