PFI ಜೊತೆ ಪೊಲೀಸರ ನಂಟು.? ರಾಜ್ಯದ‌ ಮೇಲೂ NIA ಕಣ್ಣು.!

ದೇಶದಾದ್ಯಂತ ಪಿಎಫ್ಐ ಬ್ಯಾನ್ ಆದ ಬೆನ್ನಲ್ಲೇ ಪಿಎಫ್ಐ ಆಳ ಅಗಲ ಅಳೆಯಲು ರಾಷ್ಟ್ರೀಯ ತನಿಖಾ ದಳ (NIA) ಮುಂದಾಗಿದೆ. 

Written by - VISHWANATH HARIHARA | Edited by - Chetana Devarmani | Last Updated : Oct 8, 2022, 10:50 AM IST
  • ದೇಶದಾದ್ಯಂತ ಪಿಎಫ್ಐ ಬ್ಯಾನ್
  • PFI ಜೊತೆ ಪೊಲೀಸರ ನಂಟು.?
  • ರಾಜ್ಯದ‌ ಮೇಲೂ NIA ಕಣ್ಣು.!
PFI ಜೊತೆ ಪೊಲೀಸರ ನಂಟು.? ರಾಜ್ಯದ‌ ಮೇಲೂ NIA ಕಣ್ಣು.! title=
ಪಿಎಫ್ಐ ಬ್ಯಾನ್

ಬೆಂಗಳೂರು: ದೇಶದಾದ್ಯಂತ ಪಿಎಫ್ಐ ಬ್ಯಾನ್ ಆದ ಬೆನ್ನಲ್ಲೇ ಪಿಎಫ್ಐ ಆಳ ಅಗಲ ಅಳೆಯಲು ರಾಷ್ಟ್ರೀಯ ತನಿಖಾ ದಳ (NIA) ಮುಂದಾಗಿದೆ. ಈ ತನಿಖೆಯಲ್ಲಿ ಅಚ್ಚರಿಯ ವಿಚಾರ ಕಂಡು ಬಂದಿದ್ದು, ಕೇರಳದಲ್ಲಿ ಪಿಎಫ್ಐ ಜೊತೆ ಕೆಲ ಪೊಲೀಸರು ಗುರುತಿಸಿಕೊಂಡಿರುವ ಸತ್ಯ ಬಯಲಾಗಿದೆ. ಈ ಹಿನ್ನೆಲೆ ಸದ್ಯ ಕೇರಳ ಪೊಲೀಸರನ್ನ ಎನ್ಐಎ ವಿಚಾರಣೆ ನಡೆಸುತ್ತಿದೆ. ಅಂತೆಯೇ ರಾಜ್ಯದಲ್ಲೂ ಬ್ಯಾನ್ ಆಗಿರುವ ಪಿಎಫ್ಐ ಜೊತೆ ಪೊಲೀಸರು ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕೇರಳ ಬಳಿಕ ಈಗ ರಾಜ್ಯ ಪೊಲೀಸರ ಮೇಲೂ ಎನ್ಐಎ ಕಣ್ಣಿಟ್ಟಿದ್ದು, ಕೇರಳದಂತೆ ಎಲ್ಲಾ ರಾಜ್ಯಗಳಲ್ಲೂ ಪಿಎಫ್ಐ ಜೊತೆ ಪೊಲೀಸರ ನಂಟು ಇದೀಯಾ ಎಂಬ ಬಗ್ಗೆ‌ ತನಿಖೆ ನಡೆಸಲಿದ್ದಾರೆ. 

ಇದನ್ನೂ ಓದಿ : Filmfare 2022 : ನಾಳೆ ಬೆಂಗಳೂರಿನಲ್ಲಿ ʻಫಿಲ್ಮ್​ ಫೇರ್​’ ಅವಾರ್ಡ್​ ಕಾರ್ಯಕ್ರಮ, ನೀವೂ ಹೋಗಬೇಕೇ?

ಕೇರಳದಲ್ಲಿ ಪಿಎಫ್ಐ ಬ್ಯಾನ್ ಬಗ್ಗೆ ಪಿಎಫ್ ಐ ಕಾರ್ಯಕರ್ತರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು. ಇದೇ ವಿಚಾರಕ್ಕೆ ಕೇರಳದಲ್ಲಿ ಈಗಾಗಲೇ ಇಬ್ಬರು ಪೊಲೀಸರನ್ನ ಸಸ್ಪೆಂಡ್ ಮಾಡಲಾಗಿದೆ. ಕರ್ನಾಟಕದಲ್ಲೂ ಪಿಎಫ್ಐ ಜೊತೆ ಪೊಲೀಸರ ನಂಟಿನ ಬಗ್ಗೆ  ಎನ್ ಐ ಎ ತನಿಖೆ‌ ನಡೆಸುತ್ತಿದ್ದು, ಬಂಧಿತರ ಕಾಲ್ ಲಿಸ್ಟ್ ನಲ್ಲಿ ಪೊಲೀಸರ ಸಂಪರ್ಕ ಇದೀಯಾ ಎಂಬ ಅಂಶ ಗೊತ್ತಾಗಬೇಕಿದೆ.

ತಲೆ ದಂಡ ಫಿಕ್ಸ್ : 

ಇನ್ನೂ ರಾಜ್ಯದ ಯಾವುದೇ ಒಬ್ಬ ಪೊಲೀಸ್ ನಿಷೇಧಿತ ಪಿಎಫ್ಐ ಜೊತೆ ಸಂಪರ್ಕ ಹೊಂದಿರುವುದು ಗೊತ್ತಾದ್ರೆ ಅವರ ತಲೆದಂಡವಾಗಲಿದೆ. ಯಾಕೆಂದರೆ ಪಿಎಫ್ಐ ಇದುವರೆಗೂ ಅನೇಕ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದೆ ಎಂಬ ಆಧಾರದಲ್ಲಿ ಅದನ್ನು ಬ್ಯಾನ್ ಮಾಡಲಾಗಿದೆ. 

ಇದನ್ನೂ ಓದಿ : ಟಿಪ್ಪು, ತಾಳಗುಪ್ಪ ರೈಲುಗಳಿಗೆ ಮರುನಾಮಕರಣ: ಸಿದ್ದರಾಮಯ್ಯ ಹೇಳಿದ್ದೇನು..?

ಅಕಸ್ಮಾತ್ ಪೊಲೀಸರು ಸಂಘಟನೆ ಜೊತೆ ಸಂಪರ್ಕದಲ್ಲಿದ್ದರೆ ಅವರು ಸಹ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರಾ ಎಂಬ ಅನುಮಾನದ ಮೇಲೆ ತನಿಖೆ ನಡೆಸಬೇಕಾಗುತ್ತದೆ. ಹೀಗಾಗಿ ತನಿಖಾ ಹಂತದಲ್ಲಿ ಯಾವೊಬ್ಬ ಅಧಿಕಾರಿ ಸಹ ತನ್ನ ಹುದ್ದೆಯಲ್ಲಿ ಇರುವಂತಿಲ್ಲ. ಹೀಗಾಗಿ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುತ್ತದೆ. ಹೀಗಾಗಿ ನಿಷೇಧಿತ ಪಿಎಫ್ಐ ಜೊತೆ ಗುರುತಿಸಿಕೊಂಡವರನ್ನು ಅಮಾನತು ಮಾಡುವುದಂತು ನಿಶ್ಚಿತ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News