ಕಲಘಟಗಿ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: 32 ಲಕ್ಷ‌ ರೂ. ಮೌಲ್ಯದ ಅಕ್ರಮ ಸಾರಾಯಿ ಜಪ್ತಿ, ನಾಲ್ವರ ಬಂಧನ

ಬಂಧಿತ ಆರೋಪಿಗಳು ಗೋವಾದಿಂದ ವಿಸ್ಕಿ, ಓಡ್ಕಾ ತಂದು ಬ್ರಾಂಡೆಡ್ ಕಂಪನಿ ಬಾಟಲ್‌ಗಳಿಗೆ ಹಾಕಿ ಮಾರುತ್ತಿದ್ದರು ಎನ್ನಲಾಗಿದೆ.

Written by - Yashaswini V | Last Updated : Jul 10, 2024, 03:33 PM IST
  • ಮಿಶ್ರಿಕೋಟಿ ಕ್ರಾಸ್ ಹತ್ತಿರದ ಗೋದಾಮಿನಲ್ಲಿ ಅಕ್ರಮವಾಗಿ ಸಾರಾಯಿ ಜಾಲ
  • ಸಾರಾಯಿ ಗೋದಾಮಿನ ಮೇಲೆ ಪೊಲೀಸರ ದಾಳಿ
  • ದಾಳಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಸಾರಾಯಿ ಜಪ್ತಿ
ಕಲಘಟಗಿ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: 32 ಲಕ್ಷ‌ ರೂ. ಮೌಲ್ಯದ ಅಕ್ರಮ ಸಾರಾಯಿ ಜಪ್ತಿ, ನಾಲ್ವರ ಬಂಧನ  title=

ಹುಬ್ಬಳ್ಳಿ:  ಧಾರವಾಡ ಜಿಲ್ಲೆಯ ಕಲಘಟಗಿ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 32 ಲಕ್ಷ‌ ರೂಪಾಯಿ ಮೌಲ್ಯದ ಅಕ್ರಮ ಸಾರಾಯಿ ಜಪ್ತಿ (Illegal liquor seized) ಮಾಡಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. 

ಈ ಕಾರ್ಯಾಚರಣೆಯಲ್ಲಿ ಬಂಧಿತರಾಗಿರುವವರನ್ನು ಹುಬ್ಬಳ್ಳಿಯ ವಿನಾಯಕ ಜಿತೂರಿ, ವಿನಾಯಕ ಸಿದ್ಲಿಂಗ್, ಈಶ್ವರ್ ಪವಾರ್, ರೋಹಿತ್ ಅರಸಿದ್ದಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಗೋವಾದಿಂದ ವಿಸ್ಕಿ, ಓಡ್ಕಾ ತಂದು ಬ್ರಾಂಡೆಡ್ ಕಂಪನಿ ಬಾಟಲ್‌ಗಳಿಗೆ ಹಾಕಿ ಮಾರುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ- ಸಾರ್ವಜನಿಕರಿಂದ ವಸೂಲಿ ಮಾಡಿ ಕಳ್ಳ ಎನಿಸಿಕೊಂಡಿದ್ದ ಇಬ್ಬರು ಪೊಲೀಸರು ಸಸ್ಪೆಂಡ್‌..!

ಹುಬ್ಬಳ್ಳಿ- ಕಾರವಾರ (Hubli Karwar) ರಸ್ತೆಯ ಮಿಶ್ರಿಕೋಟಿ ಕ್ರಾಸ್ ಹತ್ತಿರದ ಗೋದಾಮಿನಲ್ಲಿ ಅಕ್ರಮವಾಗಿ ಸಾರಾಯಿ ಸಿದ್ಧಪಡಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ  ಎಸ್‌ಪಿ ಗೋಪಾಲ ಬ್ಯಾಕೋಡ್, ಎಎಸ್‌ಪಿ ನಾರಾಯಣ ಬರಮನಿ, ಸಿಪಿಐ ಶ್ರೀಶೈಲ್ ಕೌಜಲಗಿ ನೇತ್ರತ್ವದ ತಂಡದ ಕಾರ್ಯಾಚರಣೆ ನಡೆಸಿತ್ತು. 

ಇದನ್ನೂ ಓದಿ- ಮಹಿಳೆಯೊಂದಿಗೆ ಪೊಲೀಸ್ ಪೇದೆ ನೇಣಿಗೆ ಶರಣು ಪ್ರಕರಣಕ್ಕೆ ಟ್ವಿಸ್ಟ್

ಲಭ್ಯವಿರುವ ಮಾಹಿತಿಯ ಪ್ರಕಾರ, ಗೋವಾ ಮದ್ಯವನ್ನು ಬಾಟ್ಲಿಂಗ್, ಕಲರಿಂಗ್ ಮಾಡಿ ಇಂಪೀರಿಯಲ್ ಬ್ಲೂ ಹೆಸರಿನ ಬ್ರಾಂಡ್ ತಯಾರಿಸುತಿದ್ದರು‌. ಸದ್ಯ ಪೊಲೀಸ್ ಕಾರ್ಯಾಚರಣೆಯಲ್ಲಿ 244 ಬಾಕ್ಸ್ ಸಾರಾಯಿ, ಬೈಕ್, ಮೊಬೈಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News