ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಸಿಗರೇಟ್‌ನಿಂದ ಸುಟ್ಟ ಕಾಮುಕ ಪತಿ ಬಂಧನ

ಕಾಮುಕ ಪತಿಯೊಬ್ಬ ಪತ್ನಿಗೆ ವಿಕೃತವಾಗಿ  ಅಶ್ಲೀಲ ವಿಡಿಯೋ ತೋರಿಸಿ ಹಿಂಸೆ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಪ್ರದೀಪ್ ಎಂಬಾತ ಪತ್ನಿಗೆ ಪೋರ್ನ್ ವಿಡಿಯೋ ತೋರಿಸಿ ಮದ್ಯ ಕುಡಿಸಿ ದೈಹಿಕ ಹಿಂಸೆ ಕೊಡುತ್ತಿದ್ದ. ಜೊತೆಗೆ ಸಿಗರೇಟ್​ನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದ. 

Written by - VISHWANATH HARIHARA | Edited by - Chetana Devarmani | Last Updated : Jul 19, 2022, 04:49 PM IST
  • ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಸಿಗರೇಟ್‌ನಿಂದ ಸುಟ್ಟ ಕಾಮುಕ ಪತಿ ಬಂಧನ
  • ಪೋರ್ನ್ ವಿಡಿಯೋ ತೋರಿಸಿ ಮದ್ಯ ಕುಡಿಸಿ ದೈಹಿಕ ಹಿಂಸೆ ಕೊಡುತ್ತಿದ್ದ ಪತಿ
  • ಪ್ರದೀಪ್ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ
ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಸಿಗರೇಟ್‌ನಿಂದ ಸುಟ್ಟ ಕಾಮುಕ ಪತಿ ಬಂಧನ title=
ಬಂಧನ

ಬೆಂಗಳೂರು : ಕಾಮುಕ ಪತಿಯೊಬ್ಬ ಪತ್ನಿಗೆ ವಿಕೃತವಾಗಿ  ಅಶ್ಲೀಲ ವಿಡಿಯೋ ತೋರಿಸಿ ಹಿಂಸೆ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಪ್ರದೀಪ್ ಎಂಬಾತ ಪತ್ನಿಗೆ ಪೋರ್ನ್ ವಿಡಿಯೋ ತೋರಿಸಿ ಮದ್ಯ ಕುಡಿಸಿ ದೈಹಿಕ ಹಿಂಸೆ ಕೊಡುತ್ತಿದ್ದ. ಜೊತೆಗೆ ಸಿಗರೇಟ್​ನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದ. 

ಇದನ್ನೂ ಓದಿ: ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌, ಅದೇ ಸ್ಕೂಲ್‌ನ ವಿದ್ಯಾರ್ಥಿಯಿಂದಲೇ ಕೃತ್ಯ

ಪ್ರದೀಪ್  ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಮದುವೆಯಾದ ಐದು ತಿಂಗಳಿಗೆ  ಹೆಂಡತಿಗೆ ಪತಿಯ ಅಸಲಿ ಮುಖದ ದರ್ಶನವಾಗಿದೆ‌. ಇಷ್ಟು ಹಿಂಸೆ ಕೊಟ್ಟಿದ್ದಲ್ಲದೇ ಐದು ಬಾರಿ ಗರ್ಭಪಾತ ಮಾಡಿಸಿದ್ದಾನೆ ಆರೋಪ ಕೇಳಿ ಬಂದಿದೆ.

ಆದರೆ ಪತ್ನಿ ಕಾಡಿ ಬೇಡಿ‌ ಎರಡು ಮಕ್ಕಳನ್ನು ಉಳಿಸಿಕೊಂಡಿದ್ದಳು. ಪ್ರದೀಪ್ ಮನೆಗೆ ಸ್ನೇಹಿತರನ್ನು ಕರೆಸಿ ಪಾರ್ಟಿ ಮಾಡಿ ಅವರ ಮುಂದೆ ಹೆಂಡತಿಗೆ ಹಿಂಸೆ ಕೊಡುತ್ತಿದ್ದ. ಪ್ರಶ್ನಿಸಿದರೆ ಹಲ್ಲೆ ಮಾಡಿ ವಿಚ್ಚೇದನ ನೀಡುವಂತೆ ಒತ್ತಾಯ ಮಾಡುತ್ತಿದ್ದ. 

ಇದನ್ನೂ ಓದಿ: ತ್ರಿಪುರ ಸುಂದರಿ ದೇಗುಲದಲ್ಲಿ ಕಳ್ಳತನ ಕೇಸ್: ಸಿನಿಮಾ ಶೈಲಿಯಲ್ಲಿ ಆಪರೇಷನ್ ನಡೆಸಿದ ಪೊಲೀಸರು

ಇದರಿಂದ ಬೇಸತ್ತಿದ್ದ ಪತ್ನಿ ತವರು ಸೇರಿಕೊಂಡಿದ್ದಳು. ಆದರೆ ಪತಿ ಈಗಲೂ ಕಾಟ ಕೊಡುತ್ತಿದ್ದಾನೆ ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಿದ್ದರು. ಸದ್ಯ ಕಾಮುಕ ಪ್ರದೀಪ್ ನನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News