ಬೆಂಗಳೂರು: ಅವರಿಬ್ಬರು ಸ್ನೇಹಿತರು. ಒಂದೇ ಏರಿಯಾದಲ್ಲಿದ್ದವರು. ಆದರೆ ಒಂದೇ ಹುಡುಗಿ ಹಿಂದೆ ಬಿದ್ದಿದ್ರು. ಅದೇ ವಿಚಾರವಾಗಿ ಆಗಾಗಾ ಗಲಾಟೆ ಕೂಡ ನಡೀತಿತ್ತು. ಸಹವಾಸ ಸಾಕು ಅಂತಾ ಪೋಷಕರು ಏರಿಯಾವನ್ನು ಬಿಟ್ಟು ಬಂದಿದ್ರು. ಅಷ್ಟಕ್ಕೇ ಈ ಗಲಾಟೆ ನಿಲ್ಲಲಿಲ್ಲ. ರಾತ್ರಿ ಕಿಡ್ನಾಪ್ ಆದವನು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ನಿನ್ನೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ಒಂದು ದಾಖಲಾಗಿತ್ತು. ತಾಹಿರ್ ಎಂಬಾತನನ್ನ ಆಟೋದಲ್ಲಿ ಬಂದವರು ಅಪಹರಿಸಿ ಹೋಗಿದ್ರು. ತಕ್ಷಣ ಪೊಲೀಸರಿಗೆ ಕರೆ ಬಂದಾಗ ಮಾಹಿತಿ ಆಧಾರದ ಮೇಲೆ ದೂರು ಕೂಡ ದಾಖಲಿಸಿಕೊಂಡಿದ್ರು. ಆದ್ರೆ ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಹಂತಕರು ತಾಹೀರ್ ನನ್ನ ಅದಾಗಲೆ ಕೊಂದು ಮುಗಿಸಿದ್ದರು.
ಇದನ್ನೂ ಓದಿ- ಯುವಕನನ್ನು ಅರೆಬೆತ್ತಲೇ ಮಾಡಿ ವಿಡಿಯೋ ಹರಿಬಿಟ್ಟ ಕಿರಾತಕರು
ತಾಹೀರ್ ಹಿಂದೂಸ್ಥಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಬದುಕು ನೆಟ್ಟಗೆ ನಡೀತಿತ್ತು. ಒಂದಷ್ಟು ಸ್ನೇಹಿತರ ಪಟಾಲಂ ಕೂಡ ಇತ್ತು. ಹೀಗೆ ಇದ್ದುಬಿಟ್ಟಿದ್ದರೆ ಬಹುಶಃ ಈ ರೀತಿ ಕೊಲೆಯಾಗುತ್ತಿರಲಿಲ್ಲ. ಆದರೆ 17-18 ವಯಸ್ಸಿನಲ್ಲಿಯೇ ಪ್ರೀತಿಗೆ ಬಿದ್ದಿದ್ದ. ಇತ್ತ ಆಪ್ತ ಸ್ನೇಹಿತನಾಗಿದ್ದ ನ್ಯಾಮತ್ ಕೂಡ ಅದೇ ಹುಡುಗೀನ ಪ್ರೀತಿಸುತ್ತಿದ್ದ. ಇದು ಇಬ್ಬರ ನಡುವಿನ ಬಿರುಕಿಗೆ ಕಾರಣವಾಗಿತ್ತು. ಇಬ್ಬರು ಬಡಿದಾಡಿಕೊಂಡ ಹಿನ್ನೆಲೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ವರ್ಷದ ಹಿಂದೆ ದೂರು ಕೂಡ ದಾಖಲಾಗಿತ್ತು.
ಈ ಹಿಂದೆ ಚಾಮರಾಜಪೇಟೆಗೆ ಹೊಂದಿಕೊಂಡಂತಿರುವ ಟಿಪ್ಪು ನಗರದಲ್ಲಿ ವಾಸ ಮಾಡ್ತಿದ್ದ ತಾಹೀರ್ ಕುಟುಂಬ ಕಿರಿಕ್ ನಡೆದ ಬಳಿಕ ಚಂದ್ರಲೇಔಟ್ ಗೆ ಶಿಫ್ಟ್ ಆಗಿದ್ದರು. ಇನ್ನು ಈ ಜಗಳ ಅಷ್ಟಕ್ಕೆ ನಿಲ್ಲಲಿಲ್ಲ. ಸ್ನೇಹಿತರ ಬಳಿ ನ್ಯಾಮತ್ ನ ಕೊಲ್ಲೋದಾಗಿ ತಾಹೀರ್ , ತಾಹಿರ್ ನ ಕೊಲ್ಲೋದಾಗಿ ನ್ಯಾಮತ್ ಹೇಳಿಕೊಂಡು ತಿರುಗಾಡುತ್ತಿದ್ದರು. ಈ ವಿಚಾರ ಕಿವಿಗೆ ಬಿದ್ದ ಹಿನ್ನೆಲೆ ನ್ಯಾಮತ್ ತನ್ನ ಸ್ನೇಹಿತರನ್ನ ಸೇರಿಸಿಕೊಂಡು ನಿನ್ನೆ ರಾತ್ರಿ 11 ಗಂಟೆಗೆ ಫೋನ್ ಮಾಡಿ ಮನೆಯಿಂದ ಹೊರಗೆ ಕರೆಸಿಕೊಂಡಿದ್ದ. ನಾಯಂಡಹಳ್ಳಿ ಮೆಟ್ರೊ ಸ್ಟೇಷನ್ ಬಳಿಯಿಂದ ತಾಹೀರ್ ನನ್ನ ಆಟೋದಲ್ಲಿ ಕಿಡ್ನ್ಯಾಪ್ ಮಾಡಿದ್ರು. ವಿಚಾರ ತಿಳಿದ ತಾಹೀರ್ ತಂದೆ ಸೈಯದ್ ಮಹಬೂಬ್ ಮಗನಿಗೆ ಕರೆ ಮಾಡಿದ್ದರು. ಆತ ರಿಸೀವ್ ಮಾಡಿರಲಿಲ್ಲ. ನಂತರ ನೇರವಾಗಿ ಹಂತಕ ನ್ಯಾಮತ್ ತಂದೆ ಬಳಿ ಬಂದು ಹೇಳಿಕೊಂಡಾಗ ನ್ಯಾಮತ್ ತಂದೆ ಕೂಡ ತಮ್ಮ ಮಗನಿಗೆ ಕರೆ ಮಾಡಿ ತಾಹೀರ್ ನನ್ನ ಕರೆತರಲು ಹೇಳಿದ್ದರು. ಆದ್ರೆ ಅದು ಕೂಡ ಸಫಲವಾಗಿರಲಿಲ್ಲ.
ಇದನ್ನೂ ಓದಿ- ಜೈನ್ ಮುನಿ ಕೊಲೆಗಾರರಿಗೆ ತಕ್ಕ ಶಿಕ್ಷೆ ಆಗಲಿ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹ
ಇನ್ನು ಚಂದ್ರಾಲೇಔಟ್ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಕೆಂಗೇರಿ ಬಳಿಯ ನಿರ್ಜನ ಪ್ರದೇಶದಲ್ಲಿ ತಾಹೀರ್ ನನ್ನ ಕೊಂದು ಹಾಕಿರುವ ವಿಚಾರ ತಿಳಿಸಿದ್ದರು. ಆಟೋದಲ್ಲಿ ಕರೆದೊಯ್ದ ಹಂತಕರು ಎದೆಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ನಂತರ ಮೃತದೇಹವನ್ನು ಪೊದೆಯೊಳಗೆ ಎಸೆದು ಎಸ್ಕೇಪ್ ಆಗಿದ್ರು. ಸ್ಥಳಕ್ಕೆ ಧಾವಿಸಿದ ಪೊಲೀಸರು ತಾಹಿರ್ ಶವವನ್ನ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.