Bengaluru: ಹಳೆ ನಾಣ್ಯ ನೀಡಿದ್ರೆ 31 ಲಕ್ಷ ನೀಡ್ತಿವಿ ಎಂದು ವ್ಯಕ್ತಿಗೆ 2.3 ಲಕ್ಷ ರೂ. ಪಂಗನಾಮ!

Cyber crime: ಹಳೆಯ ನಾಣ್ಯಗಳಿಗೆ ಲಕ್ಷ ಲಕ್ಷ ಹಣ ಸಿಗುತ್ತದೆ ಅಂತಾ ನಂಬಿ ನಾನು ಮೋಸ ಹೊಗಿರುವುದು ತಿಳಿಯಿತು. ನಾನು ಸೈಬರ್ ಅಪರಾಧಿಗಳ ಜಾಲಕ್ಕೆ ಬಲಿಯಾಗಿ ಹಣ ಕಳೆದುಕೊಂಡಿದ್ದೇನೆ. ಸೈಬರ್ ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿರುವುದಾಗಿ ರಾಹುಲ್ ಹೇಳಿದ್ದಾರೆ.

Written by - Puttaraj K Alur | Last Updated : Jan 17, 2024, 02:38 PM IST
  • ಹಳೆ ನಾಣ್ಯ ನೀಡಿದ್ರೆ 31 ಲಕ್ಷ ನೀಡ್ತಿವಿ ಎಂದು ವ್ಯಕ್ತಿಗೆ ಪಂಗನಾಮ!
  • ಬೆಂಗಳೂರಿನ ವ್ಯಕ್ತಿಗೆ 2.3 ಲಕ್ಷ ರೂ. ವಂಚಿಸಿದ ಸೈಬರ್ ವಂಚಕರು
  • ಸೈಬರ್ ವಂಚಕರಿಂದ ಎಚ್ಚರಿಕೆಯಿಂದ ಇರುವಂತೆ ಪೊಲೀಸರ ಸೂಚನೆ
Bengaluru: ಹಳೆ ನಾಣ್ಯ ನೀಡಿದ್ರೆ 31 ಲಕ್ಷ ನೀಡ್ತಿವಿ ಎಂದು ವ್ಯಕ್ತಿಗೆ 2.3 ಲಕ್ಷ ರೂ. ಪಂಗನಾಮ!  title=
ವ್ಯಕ್ತಿಗೆ ಪಂಗನಾಮ!

ಬೆಂಗಳೂರು: ಹಳೆಯ 2 ಮತ್ತು 5 ರೂ. ಮುಖಬೆಲೆಯ ನಾಣ್ಯಗಳಿಗೆ ಬದಲಾಗಿ ಲಕ್ಷ ಲಕ್ಷ ಹಣ ನೀಡುತ್ತೇವೆಂದು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಪಂಗನಾಮ ಹಾಕಿದ್ದಾರೆ. ಹಲಸೂರು ನಿವಾಸಿ ಮತ್ತು ತಂಬಾಕು ಉತ್ಪನ್ನಗಳ ವಿತರಕ 56 ವರ್ಷದ ರಾಹುಲ್ (ಹೆಸರು ಬದಲಾಯಿಸಲಾಗಿದೆ) ವಂಚನೆಗೊಳಗಾಗಿ 2.3 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.

ಸೈಬರ್ ವಂಚಕರಿಂದ ಹಣ ಕಳೆದುಕೊಂಡಿರುವ ಬಗ್ಗೆ ರಾಹುಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಇಂಟರ್‌ನೆಟ್‌ನಲ್ಲಿ 2 ರೂ. ಮತ್ತು 5 ರೂ. ಮುಖಬೆಲೆಯ ನಾಣ್ಯಗಳನ್ನು ನೀಡಿದರೆ ಲಕ್ಷ ಲಕ್ಷ ಹಣ ನೀಡುತ್ತೇವೆಂದು ಹೇಳಿರುವ ವಿಡಿಯೋ ಕ್ಲಿಪ್‍ಅನ್ನು ರಾಹುಲ್ ವೀಕ್ಷಿಸಿದ್ದಾರೆ. 1980 ಮತ್ತು 1990ರ ದಶಕದಲ್ಲಿ ಮುದ್ರಿಸಲಾದ ಇಂದಿರಾ ಗಾಂಧಿ ಭಾವಚಿತ್ರ ಮತ್ತು ಭಾರತೀಯ ನಕ್ಷೆಯನ್ನು ಹೊಂದಿರುವ ನಾಣ್ಯಗಳಿದ್ದರೆ ನಮಗೆ ನೀಡಿ ಲಕ್ಷಾಂತರ ಹಣ ನೀಡುತ್ತೇವೆಂದು ಆ ವಿಡಿಯೋದಲ್ಲಿ ತಿಳಿಸಲಾಗಿತ್ತು.

ರಾಹುಲ್ ಅವರ ಬಳಿ ಕೆಲವು ಹಳೆಯ ನಾಣ್ಯಗಳಿದ್ದು. ಹೀಗಾಗಿ ಅವರು ವಿಡಿಯೋದಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದ್ದರು. ನಿಮ್ಮಲ್ಲಿರುವ ನಾಣ್ಯಗಳ ಫೋಟೋಗಳನ್ನು ನಮಗೆ ಕಳುಹಿಸಿ ಅಂತಾ ರಾಹುಲ್ ಅವರಿಗೆ ಸೈಬರ್ ವಂಚಕರು ತಿಳಿಸಿದ್ದರು. ‘ನಾನು ಅವರು ಹೇಳಿದಂತೆ ಒಂದು 2 ರೂ. ಮತ್ತು 5 ರೂ.ನ 2 ನಾಣ್ಯಗಳ ಫೋಟೋಗಳನ್ನು ಕಳುಹಿಸಿದ್ದೆ. ನಂತರ ವಂಚಕರು 6 ನಾಣ್ಯಗಳಿಗೆ 31 ಲಕ್ಷ ರೂ. ನೀಡುವುದಾಗಿ ಹೇಳಿದ್ದರು.

ಇದನ್ನೂ ಓದಿ: ಪ್ರಮಾಣಪತ್ರ ಸಲ್ಲಿಸುವಾಗ ಕ್ರಿಮಿನಲ್‌ ಕೇಸ್‌ಗಳ ಮಾಹಿತಿ ನೀಡಬೇಕು: ಹೈಕೋರ್ಟ್

ರಾಹುಲ್ ವಂಚಕರಿಗೆ ತನ್ನ ಆಧಾರ್ ಕಾರ್ಡ್ ನಕಲು ಮತ್ತು ಸೆಲ್ಫಿ ಕಳುಹಿಸಿದ್ದಾನೆ. ದುಷ್ಕರ್ಮಿ ಹೇಳಿದಂತೆ ಸೇವೆ ಮತ್ತು ವಿತರಣಾ ಶುಲ್ಕ, ವಿಮಾ ಶುಲ್ಕ, ಟಿಡಿಎಸ್ ಮತ್ತು ಜಿಎಸ್‌ಟಿ ಸೇರಿದಂತೆ ವಿವಿಧ ಶುಲ್ಕವಾಗಿ 2.3 ಲಕ್ಷ ರೂ. ನೀಡಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ವಂಚಕರು ಮತ್ತಷ್ಟು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ರಾಹುಲ್ ಹೆಚ್ಚಿನ ಹಣ ನೀಡಲು ನಿರಾಕರಿಸಿದ್ದಾರೆ.

‘ಒಂದು ಬಾರಿ ಒಪ್ಪಂದಕ್ಕೆ ಬಂದರೆ, ಹಿಂದೆ ಸರಿಯಲು ಸಾಧ್ಯವಿಲ್ಲ. ಹೀಗಾಗಿ ನೀನು ಮತ್ತಷ್ಟು ಹಣ ಪಾವತಿಸಲೇಬೇಕು ಅಂತಾ ರಾಹುಲ್ ಅವರಿಗೆ ವಂಚಕ ಬೆದರಿಕೆ ಹಾಕಿದ್ದಾನೆ. ಕೇಂದ್ರ ಸರ್ಕಾರ ನನ್ನ ವಿರುದ್ಧ ದೆಹಲಿಯಲ್ಲಿ ಕೇಸು ದಾಖಲಿಸಲಿದೆ ಎಂದೂ ಸಹ ಹೇಳಿದ್ದ. ಸ್ವಲ್ಪ ಸಮಯದ ನಂತರ ದೆಹಲಿಯಿಂದ ಹಿರಿಯ ಪೊಲೀಸ್ ಅಧಿಕಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ ನನಗೆ ಕರೆ ಬಂದಿತ್ತು. ಅಕ್ರಮ ಹಣ ವರ್ಗಾವಣೆ ಸೇರಿದಂತೆ ನನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇವೆ. ಹಣ ಕೊಡಲು ತಪ್ಪಿದರೆ ನಿಮ್ಮ ಮನೆಯಿಂದಲೇ ನಿಮ್ಮನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದರು. ಇನ್ನೊಬ್ಬ ವ್ಯಕ್ತಿಯೂ ನನಗೆ ಕರೆ ಮಾಡಿ, ತಾನು ಮುಂಬೈ ಪೊಲೀಸ್ ಅಧಿಕಾರಿ, ನಿಮ್ಮ ವಿರುದ್ಧ ಇನ್ನೊಂದು ಪ್ರಕರಣವಿದ್ದು, ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ವಂಚಕರು ನನಗೆ ವಿಡಿಯೋ ಕರೆಗಳನ್ನು ಮಾಡಿ ಪೊಲೀಸ್ ಮತ್ತು ಸೇನಾ ಸಮವಸ್ತ್ರದಲ್ಲಿ ಪೋಸ್ ನೀಡಿದ್ದರು. ಅವರು ನಿಜವಾದ ಪೊಲೀಸರೇ ಅಂತಾ ನಾನು ಆರಂಭದಲ್ಲಿ ನಂಬಿದ್ದೆ. ಆದರೆ ನಾಣ್ಯಗಳನ್ನು ಬದಲಾಯಿಸುವ ಮೂಲಕ ಹಣ ಗಳಿಸುವ ದುರಾಸೆ ಹೊರತುಪಡಿಸಿ ನಾನು ಯಾವುದೇ ತಪ್ಪು ಮಾಡದ ಕಾರಣ ಅವರಿಗೆ ಹೆಚ್ಚಿನ ಹಣ ಪಾವತಿಸಲು ನಿರಾಕರಿಸಿದೆ ಅಂತಾ ರಾಹುಲ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹಳೆಯ ನಾಣ್ಯಗಳಿಗೆ ಲಕ್ಷ ಲಕ್ಷ ಹಣ ಸಿಗುತ್ತದೆ ಅಂತಾ ನಂಬಿ ನಾನು ಮೋಸ ಹೊಗಿರುವುದು ತಿಳಿಯಿತು. ನಾನು ಸೈಬರ್ ಅಪರಾಧಿಗಳ ಜಾಲಕ್ಕೆ ಬಲಿಯಾಗಿ ಹಣ ಕಳೆದುಕೊಂಡಿದ್ದೇನೆ. ಸೈಬರ್ ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿರುವುದಾಗಿ ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ: ನಕಲಿ ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಕರ ಜತೆ ಬಿಜೆಪಿ ನಂಟು: ಪ್ರಿಯಾಂಕ್ ಖರ್ಗೆ ಆರೋಪ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News