ನಿಧಿ ಹೆಸರಲ್ಲಿ 11 ಜನರ ಹತ್ಯೆ : ಹಂತಕನ ಬಂಧನ

Crime News: ನಿಧಿ ಆಸೆ ತೋರಿಸಿ 8 ಪ್ರಕರಣಗಳಲ್ಲಿ ಒಟ್ಟು 11 ಜನರನ್ನು ಕೊಲೆ ಮಾಡಿದ್ದ ಆರೋಪಿಯನ್ನು ನಾಗರಕರ್ನೂಲ್ ಪೊಲೀಸರು ಬಂಧಿಸಿದ್ದಾರೆ. 

Written by - Yashaswini V | Last Updated : Dec 14, 2023, 03:18 PM IST
  • ನಿಧಿ ಹೆಸರಿನಲ್ಲಿ ಹನ್ನೊಂದು ಜನರ ಬರ್ಬರ ಹತ್ಯೆ

    ನಿಧಿ ಆಸೆ ತೋರಿಸಿ 8 ಪ್ರಕರಣಗಳಲ್ಲಿ ಒಟ್ಟು 11 ಜನರನ್ನು ಕೊಲೆಗೈದ ಪಾಪಿ
  • ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿದ್ದವನಿಂದ ದುಷ್ಕೃತ್ಯ
ನಿಧಿ ಹೆಸರಲ್ಲಿ 11 ಜನರ ಹತ್ಯೆ : ಹಂತಕನ ಬಂಧನ  title=

Crime News: ತಂತ್ರಜ್ಞಾನ ಅದೆಷ್ಟೇ ಮುಂದುವರೆದಿದ್ದರು, ಈ ಮೂಢ ನಂಬಿಕೆ ಅನ್ನೋದು ಮಾತ್ರ ಇನ್ನು ಜನರನ್ನ ಬಿಟ್ಟಿಲ್ಲ. ಮೂಢ ಆಚರಣೆಗಳಿಗೆ ಕಟ್ಟುಬಿದ್ದು ಅದೆಷ್ಟೋ ಮುಗ್ದರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಕೆಲವರು ಪೂಜೆ, ಮಾಟಮಂತ್ರಗಳ ಹೆಸರಲ್ಲಿ ಜನರನ್ನು ನಂಬಿಸಿ ಮೋಸ ಮಾಡುತ್ತಾರೆ. 

ರಿಯಲ್‌ ಎಸ್ಟೇಟ್‌ ವ್ಯಾಪಾರಿಯೊಬ್ಬ ನಿಧಿ ಹೆಸರಲ್ಲಿ 11 ಜನರ ಬಲಿ ತೆಗೆದುಕೊಂಡಿದರುವ ವಿಕೃತ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ನಿಧಿ ಆಸೆ ತೋರಿಸಿ 8 ಪ್ರಕರಣಗಳಲ್ಲಿ ಒಟ್ಟು 11 ಜನರನ್ನು ಕೊಲೆ ಮಾಡಿದ್ದ ಆರೋಪಿಯನ್ನು ನಾಗರಕರ್ನೂಲ್ ಪೊಲೀಸರು ಬಂಧಿಸಿದ್ದಾರೆ. 

ತೆಲಂಗಾಣದ ನಾಗರಕರ್ನೂಲ್ ಪಟ್ಟಣದ ಇಂದಿರಾನಗರ ನಿವಾಸಿಯಾಗಿರುವ  ಸತ್ಯಂ ಯಾದವ್ ಎಂಬಾತ ರಮತಿ ಸತ್ಯನಾರಾಯಣ ಎಂಬ ನಕಲಿ ಹೆಸರಿನಿಂದ ಜನರಿಗೆ ಮೋಸ ಮಾಡುತ್ತಿದ್ದ. ನಿಧಿ ಹುಡುಕಿ ಕೊಡುವುದಾಗಿ ಅಮಾಯಕ ಜನರನ್ನು ನಂಬಿಸಿ ಅವರನ್ನು ಕೊಲೆ ಮಾಡಿ ಯಾರಿಗೂ ತಿಳಿಯದಂತೆ ಹೂತು ಹಾಕುತ್ತಿದ್ದ.

ಇದನ್ನೂ ಓದಿ- ಮದುವೆ ಹಿಂದಿನ ದಿನ ಕೈ ಕೊಟ್ಟ ವರ: ಹುಡುಗನ ಮನೆ ಮುಂದೆ ಯುವತಿ ಧರಣಿ

ರಿಯಲ್‌ ಎಸ್ಟೇಟ್‌  ವ್ಯವಹಾರ ಮಾಡುತ್ತಿದ್ದ ಸತ್ಯಂ ಯಾದವ್‌ ಜನರಿಗೆ ವಂಚಿಸಿ ಅವರಿಂದ ಹಣ ವಸೂಲಿ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ. ಈ ಹಿಂದೆ ಒಂದೇ ಜಾಗವನ್ನು ಇಬ್ಬರ ಹೆಸರಿಗೆ ಮಾರಿದ ಪ್ರಕರಣವು ಕೂಡ ಈತನ ವಿರುದ್ಧ ದಾಖಲಾಗಿತ್ತು. ಅಮಾಯಕ ಜನರಿಂದ ಹಣವನ್ನು, ಆಸ್ತಿಗಳನ್ನು ಕಬಳಿಸಿ ತನ್ನ ಹೆಸರಿಗೆ ಮಾಡಿಕೊಳ್ಳುತ್ತಿದ್ದ ಈತನ ವಿರುದ್ಧ ಸಂತ್ರಸ್ತರು ತಿರುಗಿ ಬಿದ್ದಾಗ ನಿಧಿ ಆಸೆ ತೋರಿಸಿ ಕೊಲ್ಲುತ್ತಿದ್ದ. 

ನಿಧಿ ಹುಡುಕಲು  ಕ್ಷುದ್ರ ಪೂಜೆ ಮಾಡುವುದಾಗಿ ಹೇಳಿ ಅಮಾಯಕರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದ ಈತ, ತೀರ್ಥದ ಹೆಸರಲ್ಲಿ ಮತ್ತು ಬರುವ ವಿಷವನ್ನು ಕುಡಿಸಿ ಪ್ರಜ್ಞೆ ತಪ್ಪಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲ್ಲುತ್ತಿದ್ದ.  ವಿದ್ಯುತ್ ಡಿಟೋನೇಟರ್​ಗಳನ್ನು ಮತ್ತು ರಾಸಾಯನಿಕಗಳನ್ನು ಬಳಸಿಕೊಂಡು ಕೊಲೆ ಮಾಡುತ್ತಿದ್ದ. 

ಇದೇ ಮಾದರಿಯಲ್ಲಿ ವೆಂಕಟೇಶ್‌ ಎಂಬ ವ್ಯಕ್ತಿಗೆ ನಿಧಿ ಆಸೆಯನ್ನು ತೋರಿಸಿ ಕೊಲೆ ಮಾಡಿದ್ಧಾನೆ. ಐದು ದಿನಗಳಾದರು ಗಂಡ ಮನೆಗೆ ಬರದ ಕಾರಣ ವೆಂಕಟೇಶ್‌  ಹೆಂಡತಿ ಗಾಬರಿಗೊಂಡು  ನಾಗರಕರ್ನೂಲ್ ಪೋಲಿಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.   ಆರೋಪಿಯಿಂದ ಪೋಲಿಸರು 8 ಮೊಬೈಲ್‌, 10 ಸಿಮ್‌ ಕಾರ್ಡ್, ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.     

ಇದನ್ನೂ ಓದಿ- ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ದುರ್ಮರಣ..!

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಈತ ಹೀಗೆ ನಿಧಿ ಹೆಸರಲ್ಲಿ ಎಂಟು ಪ್ರಕರಣಗಳಲ್ಲಿ 11 ಜನರ ಪ್ರಾಣ ತೆಗೆದಿದ್ದ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News