ಗಾಂಜಾ‌ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಲೆ ಬೀಸಿದ ಸಿಟಿ‌ ಮಾರ್ಕೆಟ್ ಪೊಲೀಸರು...

ಗಾಂಜಾ‌ ಮಾರಾಟ ಮಾಡುತ್ತಿದ್ದ ಭರತ್ ಕುಮಾರ್, ರಾಕೇಶ್ ಕುಮಾರ್, ಅನಿಲ್ ಸಿಂಗ್,ಮುಖೇಶ್ ರನ್ನು  ಬಂಧಿಸಿ  4 ಕೆಜಿ ಗಾಂಜಾ,ನಗದು,ಕೃತ್ಯಕ್ಕೆ ಬಳಸಿದ್ದ 2 ಬೈಕ್  ವಶಕ್ಕೆ ಪಡೆದುಕೊಳ್ಳಲಾಗಿದೆ. 

Written by - Zee Kannada News Desk | Last Updated : Jan 31, 2023, 12:51 PM IST
  • ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಡೀಲರ್‌ ಗಳ ಬಂಧನ
  • ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಸಿಟಿ‌ ಮಾರ್ಕೆಟ್ ಪೊಲೀಸರು
  • 4 ಕೆಜಿ ಗಾಂಜಾ,ನಗದು,ಕೃತ್ಯಕ್ಕೆ ಬಳಸಿದ್ದ 2 ಬೈಕ್ ವಶ
ಗಾಂಜಾ‌ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಲೆ ಬೀಸಿದ  ಸಿಟಿ‌ ಮಾರ್ಕೆಟ್   ಪೊಲೀಸರು...  title=

ಬೆಂಗಳೂರು: ನಗರದಲ್ಲಿ  ಕಳ್ಳತನ , ಗಾಂಜಾ‌ ಮಾರಾಟ , ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು  ಡ್ರಗ್ಸ್‌ ಡೀಲರ್‌ ಗಳನ್ನು  ಸಿಟಿ‌ ಮಾರ್ಕೆಟ್  ಪೊಲೀಸರು ಬಂಧಿಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ನಾಲ್ವರನ್ನು  ಬಂಧಿಸಲಾಗಿದೆ.
ಇತರರಿಗೆ ಮಾರಾಟ ಮಾಡಲು ಅವರು ಸಣ್ಣ ಪ್ರಮಾಣದ ಗಾಂಜಾವನ್ನು ನಗರಕ್ಕೆ ತರುತ್ತಿದ್ದರು, ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Election: ಮತದಾನ ಅಧಿಕಾರ ಮಾತ್ರವಲ್ಲ, ಕರ್ತವ್ಯವೂ ಹೌದು,  ರಾಜ್ಯಪಾಲರು....

ಗಾಂಜಾ‌ ಮಾರಾಟ ಮಾಡುತ್ತಿದ್ದ ಭರತ್ ಕುಮಾರ್, ರಾಕೇಶ್ ಕುಮಾರ್, ಅನಿಲ್ ಸಿಂಗ್,ಮುಖೇಶ್ ರನ್ನು  ಬಂಧಿಸಿ  4 ಕೆಜಿ ಗಾಂಜಾ,ನಗದು,ಕೃತ್ಯಕ್ಕೆ ಬಳಸಿದ್ದ 2 ಬೈಕ್  ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳು  ಬೆಂಗಳೂರು ಸೇರಿದಂತೆ  ಇಬ್ಬರು ರಾಜಸ್ತಾನ ಮೂಲದವರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸದ್ಯ  ಪೊಲೀಸರು  ಆರೋಪಿಗಳನ್ನು ಬಂಧಿಸಿ  ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ .

ಇದನ್ನೂ ಓದಿ: 59 ಯೋಜನೆಗಳ ರೂ. 3,455.39 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ಸಮಿತಿ ಅನುಮೋದನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News