ಮಹಿಳೆಯರ ಮೈ ಮುಟ್ಟಿ ಪರಾರಿ ಆಗುತ್ತಿದ್ದ ಕಾಮುಕ ಡೆಲವೆರಿ ಬಾಯ್ ಬಂಧನ

ಸಿಲಿಕಾನ್  ಸಿಟಿಯಲ್ಲಿ ವಿಕೃತ  ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹೆಣ್ಣುಮಕ್ಕಳ ಮೈಮುಟ್ಟಿ ವಿಕೃತಿ ಮೆರೆಯುತ್ತಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Written by - Zee Kannada News Desk | Last Updated : Jul 9, 2022, 08:49 PM IST
ಮಹಿಳೆಯರ ಮೈ ಮುಟ್ಟಿ ಪರಾರಿ ಆಗುತ್ತಿದ್ದ ಕಾಮುಕ ಡೆಲವೆರಿ ಬಾಯ್ ಬಂಧನ  title=

ಬೆಂಗಳೂರು: ಸಿಲಿಕಾನ್  ಸಿಟಿಯಲ್ಲಿ ವಿಕೃತ  ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹೆಣ್ಣುಮಕ್ಕಳ ಮೈಮುಟ್ಟಿ ವಿಕೃತಿ ಮೆರೆಯುತ್ತಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ರಾಯಚೂರು ಮೂಲದ ಗಂಗಾಧರ್ ಬಂಧಿತ ಆರೋಪಿ.ಎರಡು ಪೊಲೀಸ್​ ಠಾಣೆಯಲ್ಲಿ ಈ ಕಾಮುಕನ ಮೇಲೆ ಎಫ್​ಐಆರ್​​ ದಾಖಲಾಗಿತ್ತು.

ಸಿಸಿಟಿವಿಯಲ್ಲಿ ವಿಕೃತನ ಚಲನವಲನ ಪತ್ತೆಯಾಗಿತ್ತು. ಬೈಕಿನಲ್ಲಿ ಬರುತ್ತಿದ್ದ ಈತ ಹೆಣ್ಣುಮಕ್ಕಳ ಮೈ-ಕೈ ಮುಟ್ಟಿ ಎಸ್ಕೇಪ್ ಆಗುತ್ತಿದ್ದ.

ನಗರದ ವೈಯಾಲಿಕಾವಲ್ ಸುತ್ತಮುತ್ತ ಈತ ಓಡಾಡ್ತಿದ್ದ.ಜುಲೈ 3ರಂದು ಸೈಕಲಿಂಗ್ ಜಾಥ ಮಾಡ್ತಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಫುಡ್ ಡೆಲಿವರಿ ಮಾಡುವ ನೆಪದಲ್ಲಿ ಬೈಕ್​ ನಲ್ಲಿ ಬರುತ್ತಿದ್ದ ಕಾಮುಕ ಹೆಣ್ಣುಮಕ್ಕಳ ಜತೆ ಅನುಚಿತವಾಗಿ ನಡೆದುಕೊಂಡಿದ್ದ.

ಸದ್ಯ ಸದಾಶಿವನಗರ ಪೊಲೀಸರು ಈತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News