ವಿಧಾನಸೌಧದ ಆಡಳಿತ ಕೇಂದ್ರ ಎಂಎಸ್ ಬಿಲ್ಡಿಂಗ್‌ ಸಂಪ್‌ನಲ್ಲಿ ಶವಪತ್ತೆ

ವಿಧಾನಸೌಧದ ಆಡಳಿತ ಕೇಂದ್ರ ಎಂಎಸ್ ಬಿಲ್ಡಿಂಗನ ಸಂಪ್ ನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸಾವನ್ನಪ್ಪಿ ಎರಡು, ಮೂರು ದಿನಗಳಾಗಿರಬಹುದು ಎನ್ನಲಾಗಿದೆ. 

Written by - Prashobh Devanahalli | Edited by - Chetana Devarmani | Last Updated : Aug 18, 2022, 01:05 PM IST
  • ವಿಧಾನಸೌಧದ ಆಡಳಿತ ಕೇಂದ್ರ ಎಂಎಸ್ ಬಿಲ್ಡಿಂಗನ ಸಂಪ್ ನಲ್ಲಿ ಅಪರಿಚಿತ ಶವ ಪತ್ತೆ
  • ಸಾವನ್ನಪ್ಪಿ ಎರಡು, ಮೂರು ದಿನಗಳಾಗಿರಬಹುದು ಎನ್ನಲಾಗಿದೆ
  • ಕಟ್ಟಡದ ಸಂಪ್ ನಲ್ಲಿ ಶವ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ
ವಿಧಾನಸೌಧದ ಆಡಳಿತ ಕೇಂದ್ರ ಎಂಎಸ್ ಬಿಲ್ಡಿಂಗ್‌ ಸಂಪ್‌ನಲ್ಲಿ ಶವಪತ್ತೆ  title=
ವಿಧಾನಸೌಧ

ಬೆಂಗಳೂರು : ವಿಧಾನಸೌಧದ ಆಡಳಿತ ಕೇಂದ್ರ ಎಂಎಸ್ ಬಿಲ್ಡಿಂಗನ ಸಂಪ್ ನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸಾವನ್ನಪ್ಪಿ ಎರಡು, ಮೂರು ದಿನಗಳಾಗಿರಬಹುದು ಎನ್ನಲಾಗಿದೆ. ಕಟ್ಟಡದ ಸಂಪ್ ನಲ್ಲಿ ಶವ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: Surathkal Fazil murder case : ಫಾಝಿಲ್‌ ಕೊಲೆ ಪ್ರಕರಣ : ಮತ್ತೋರ್ವ ಆರೋಪಿಯ ಬಂಧನ

ಕಳೆದ ಎರಡು ದಿನಗಳಿಂದ‌ ಇದೇ ನೀರನ್ನು ಎಂಎಸ್ ಬಿಲ್ಡಿಂಗ್, ಲೋಕಾಯುಕ್ತ ಸೇರಿದಂತೆ ಮತ್ತೆ ಕೆಲವು ಕಟ್ಟಡದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಬಳಸಿದ್ದಾರೆ. ಬಹುಮಹಡಿ ಕಟ್ಟಡದಲ್ಲಿನ ವಾಟರ್‌ ಟ್ಯಾಂಕ್‌ನಲ್ಲಿ ಈ ಅಪರಿಚಿತ ಶವ ಪತ್ತೆಯಾಗಿದ್ದು, ಎರಡು ದಿನಗಳ ನಂತರ ವಿಷಯ ತಿಳಿದು ಬಂದಿದೆ. 

ಈ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಯಾರಾದರೂ ನೌಕರರಿರಬಹುದೇನೋ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ನೌಕರ ವರ್ಗದಲ್ಲಿ ಯಾರಾದರೂ ಎರಡು ದಿನಗಳಿಂದ ನಾಪತ್ತೆಯಾಗಿದ್ದಲ್ಲಿ, ದಯಮಾಡಿ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. 

ಇದನ್ನೂ ಓದಿ: ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಮತ್ತೆ 142 ಕೋಟಿ ವಿಶೇಷ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News