ಚೆನ್ನೈ: ಪ್ರಿಯಕರನನ್ನು ನೋಡಲು ಸೀರೆಯ ಸಹಾಯದಿಂದ ಬಾಲ್ಕನಿಗೆ ಹೋಗಲು ಯತ್ನಿಸಿದ ಯುವತಿಯೊಬ್ಬಳು 3ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ನಾಮಕ್ಕಲ್ ಜಿಲ್ಲೆಯ ಮಖಿಲಮತಿ (25) ಮೃತ ಯುವತಿ. ಈಕೆ ಚೆನ್ನೈನ ಖಾಸಗಿ ಸಿವಿಲ್ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಐಎಎಸ್ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಳು. ಜಾಂಬಜಾರ್ನಲ್ಲಿ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. ಇವರ ಪ್ರಿಯಕರ ರಾಜ್‍ಕುಮಾರ್ ಐಟಿ ಉದ್ಯೋಗಿಯಾಗಿದ್ದು, ಅದೇ ಅಪಾರ್ಟ್‍ಮೆಂಟ್‍ನಲ್ಲಿ ತಂಗಿದ್ದರು.
ಇದನ್ನೂ ಓದಿ: ಗಾಯಗೊಂಡಿದ್ದ ಪಕ್ಷಿ ಕಾಪಾಡಲು ಹೋದವರಿಗೆ ಕಾರು ಡಿಕ್ಕಿ: ಇಬ್ಬರ ಪ್ರಾಣಪಕ್ಷಿ ಹಾರೇಹೋಯ್ತು!
ಎಂಎಸ್ಸಿ ಭೌತಶಾಸ್ತ್ರ ಪದವೀಧರೆಯಾಗಿದ್ದ ಮಖಿಲಮತಿ ನುಂಗಂಬಾಕ್ಕಂನಲ್ಲಿರುವ ಖಾಸಗಿ ಕೇಂದ್ರದಲ್ಲಿ ತರಬೇತಿ ಪಡೆದು ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಗುರುವಾರ (ಜೂ.9) ರಾತ್ರಿ ತರಗತಿ ಮುಗಿಸಿಕೊಂಡು ಮನೆಗೆ ಬಂದು ಪ್ರಿಯಕರ ರಾಜ್‍ಕುಮಾರ್ ಅವರ ಮನೆ ಬಾಗಿಲು ತಟ್ಟಿದ್ದಾರೆ. ಈ ವೇಳೆ ರಾಜ್‌ಕುಮಾರ್ ಬಾಗಿಲು ತೆರೆದಿಲ್ಲ. ಬಳಿಕ ಅವರ ಮೊಬೈಲ್‌ಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಕ್ಕೊಳಗಾದ ಯುವತಿ ಸೀರೆ ಬಳಸಿಕೊಂಡು 3ನೇ ಮಹಡಿಯಿಂದ ಬಾಲ್ಕನಿಗೆ ಇಳಿದು ಹಿಂಬಾಗಿಲಿನ ಮೂಲಕ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ್ದಾಳೆ. ಸೀರೆಯನ್ನು ಹಗ್ಗದ ರೀತಿ ಮಾಡಿಕೊಂಡು ಕೆಳಗೆ ಇಳಿಯುತ್ತಿದ್ದಾಗ ಸೀರೆ ಹರಿದಿದ್ದು, ಮಖಿಲಮತಿ 3ನೇ ಮಹಡಿಯಿಂದ ಕಳಗೆಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸರಿಂದ ಯುವತಿ ಪ್ರಿಯಕರನ ವಿಚಾರಣೆ
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಾಂಬಜಾರ್ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ರಾಜ್‌ಕುಮಾರ್ ಖಾಸಗಿ ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಮನೆಗೆ ಬಂದು ಸುಸ್ತಾಗಿದ್ದ ನಾನು ಗಾಢನಿದ್ರೆಗೆ ಜಾರಿದ್ದೆ. ಮಖಿಲಮತಿ ಬಾಗಿಲು ಬಡಿದ ಸದ್ದು ನನಗೆ ಕೇಳಿಸಿಲ್ಲವೆಂದು ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಗ್ವಾಲಿಯರ್ ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ಲೈವ್ ಸ್ಟ್ರೀಮ್ ಮಾಡಿದ ಆರೋಪಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.