Bangalore Crime : ಬೆಂಗಳೂರಿನಲ್ಲಿ ಮಾಜಿ ಶಾಸಕ ಮನೆ ಹಿಂದೆಯೇ ಗಾಂಜಾ ಬೆಳೆದ ಕಿಡಿಗೇಡಿಗಳು!

ಮಾಜಿ ಶಾಸಕರ ಮನೆ ಸುತ್ತಮುತ್ತಾ ಪೊಲೀಸ್ರು ಬರಲ್ಲ, ಜೊತೆ ಖಾಲಿ ಜಾಗ ಬೇರೆ ಯಾರೂ ಕಣ್ಣು ಹಾಕೋಲ್ಲ ಅಂತ ಕಿಡಿಗೇಡಿಗಳು ಖಾಲಿ ನಿವೇಶನದಲ್ಲಿ ಗಾಂಜಾ ಕೃಷಿ ಮಾಡಿದ್ದಾರೆ. 

Written by - VISHWANATH HARIHARA | Last Updated : Jul 12, 2022, 09:06 PM IST
  • ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮನೆ ಹಿಂಭಾಗದಲ್ಲೇ ಗಾಂಜಾ ಬೆಳೆ
  • ಮಾಜಿ ಶಾಸಕರ ಮನೆ ಸುತ್ತಮುತ್ತಾ ಪೊಲೀಸ್ರು ಬರಲ್ಲ
  • ಕಿಡಿಗೇಡಿಗಳು ಖಾಲಿ ನಿವೇಶನದಲ್ಲಿ ಗಾಂಜಾ ಕೃಷಿ ಮಾಡಿದ್ದಾರೆ.
Bangalore Crime : ಬೆಂಗಳೂರಿನಲ್ಲಿ ಮಾಜಿ ಶಾಸಕ ಮನೆ ಹಿಂದೆಯೇ ಗಾಂಜಾ ಬೆಳೆದ ಕಿಡಿಗೇಡಿಗಳು! title=

ಬೆಂಗಳೂರು : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮನೆ ಹಿಂಭಾಗದಲ್ಲೇ ಕಿಡಿಗೇಡಿಗಳು ಗಾಂಜಾ ಬೆಳೆದಿದ್ದಾರೆ. ಮಾಜಿ ಶಾಸಕರ ಮನೆ ಸುತ್ತಮುತ್ತಾ ಪೊಲೀಸ್ರು ಬರಲ್ಲ, ಜೊತೆ ಖಾಲಿ ಜಾಗ ಬೇರೆ ಯಾರೂ ಕಣ್ಣು ಹಾಕೋಲ್ಲ ಅಂತ ಕಿಡಿಗೇಡಿಗಳು ಖಾಲಿ ನಿವೇಶನದಲ್ಲಿ ಗಾಂಜಾ ಕೃಷಿ ಮಾಡಿದ್ದಾರೆ. 

ಆರ್.ಟಿ.ನಗರದ ಮಂಜುನಾಥ್ ಲೇಔಟ್ ನ ಮುಖ್ಯ ರಸ್ತೆಯಲ್ಲಿರುವ ಬೇಳೂರು ಗೋಪಾಲಕೃಷ್ಣ ನಿವೇಶನದ ಹಿಂದೆ‌ ಗಾಂಜಾ ಗಿಡಗಳು ಫಲವತ್ತಾಗಿ ಬೆಳೆದಿದ್ವು. ಈ ಗಾಂಜಾ ಗಿಡಗಳ‌ನ್ನ ಕಂಡು ಗೋಪಾಲಕೃಷ್ಣ ಶಾಕ್ ಆಗಿದ್ದಾರೆ.  ಆರ್.ಟಿ.ನಗರ ಪೊಲೀಸರಿಗೆ ಮಾಹಿತಿ ನೀಡಿ ಗಾಂಜಾ ಗಿಡಗಳನ್ನ ಪೊಲೀಸರ ಸುಪರ್ಧಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ : Kota Srinivas Poojary : ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಸ್ಕಾರ್ಟ್‌ ವಾಹನ ಪಲ್ಟಿ!

ಮಾಹಿತಿ ಆಧರಿಸಿ ಆರ್.ಟಿ.ನಗರ ಪೊಲೀಸರು ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ನಿವೇಶನ ಮಾಲೀಕರ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಏರಿಯಾದಲ್ಲಿನ ಗಾಂಜಾ ಬೆಳೆದ ಕಿಡಿಗೇಡಿಗಳ ಮಾಹಿತಿಯನ್ನು ಕಲೆ ಹಾಕ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News