Bengaluru: ಲವರ್ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಪ್ರೇಮಿ ಕೊನೆಗೂ ಅಂದರ್!

Bengaluru Crime News: ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 5ರಂದು ಯುವತಿಯ ಶವ ಪತ್ತೆಯಾಗಿದೆ. ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

Written by - VISHWANATH HARIHARA | Edited by - Puttaraj K Alur | Last Updated : Jul 4, 2023, 10:10 PM IST
  • ಪ್ರೇಯಸಿಯನ್ನು ಹತ್ಯೆ ಮಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಪ್ರಿಯಕರ ಕೊನೆಗೂ ಅಂದರ್
  • ಜೂನ್ 5ರಂದು ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ
  • ಉಸಿರುಗಟ್ಟಿಸಿ ಪ್ರೇಯಸಿಯನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ತಿಂಗಳ ಬಳಿಕ ಲಾಕ್
Bengaluru: ಲವರ್ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಪ್ರೇಮಿ ಕೊನೆಗೂ ಅಂದರ್! title=
ಪ್ರೇಯಸಿ ಕೊಂದಿದ್ದ ಪ್ರಿಯಕರ ಅಂದರ್!

ಬೆಂಗಳೂರು: ಪ್ರೇಯಸಿಯನ್ನು ಹತ್ಯೆ ಮಾಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಪ್ರೀಯಕರ ಕೊನೆಗೂ ಲಾಕ್ ಅಗಿದ್ದಾನೆ. ಕಳೆದ ಜೂನ್ 5ರಂದು ಬೆಂಗಳೂರಿನ ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ಅಕಾಂಕ್ಷ ಎಂಬ ಯುವತಿಯ ಕೊಲೆಯಾಗಿತ್ತು. ಮೊದಲಿಗೆ ಇದೊಂದು ಅತ್ಮಹತ್ಯೆ ಅಂತಾನೇ ಭಾವಿಸಲಾಗಿತ್ತು. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಾಗ ಕೊಲೆ ಅನ್ನೋದು ಸಷ್ಟವಾಗಿ ಗೊತ್ತಾಗಿತ್ತು.

ಅಕಾಂಕ್ಷಳನ್ನು ಕೊಲೆ ಮಾಡಿದ್ದು ಅರ್ಪಿತ್ ಅನ್ನೋದು ಅಲ್ಲೇ ಬಿದ್ದಿದ್ದ ಐಡಿ ಕಾರ್ಡ್ ಮತ್ತು ಮೊಬೈಲ್‍ನಿಂದ ಪೊಲೀಸರಿಗೆ ಪಕ್ಕಾ ಆಗಿತ್ತು. ಆದರೆ ಆರೋಪಿಯನ್ನ ಬಂಧಿಸೋದು ಮಾತ್ರ ಪೊಲೀಸರಿಗೆ ಸವಾಲಾಗಿತ್ತು. ಆದರೆ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಬರೊಬ್ಬರಿ 1 ತಿಂಗಳ ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ. ಕೊನೆಗೂ ಆತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಕರೆಂಟ್ ಶಾಕ್‌ನಿಂದ ಮರಿ ಮಂಗ ಸಾವು; ಮುಗಿಲು ಮುಟ್ಟಿದ ತಾಯಿ ಮಂಗನ ರೋಧನೆ!

ಆರೋಪಿ ಅರ್ಪಿತ್ ಟೆಕ್ಕಿಯಾಗಿದ್ದರಿಂದ ಟೆಕ್ನಿಕಲಿ ಸಾಕಷ್ಟು ತಿಳಿದುಕೊಂಡಿದ್ದ. ಹೀಗಾಗಿ ಎಲ್ಲೂ ಕೂಡ ಮೊಬೈಲ್ ಬಳಕೆ  ಮಾಡಿರಲಿಲ್ಲ. ಕೈಯಲ್ಲಿದ್ದ 5 ಸಾವಿರ ರೂ.ನಿಂದ ತನ್ನ ಜರ್ನಿ ಪ್ರಾರಂಭಿಸಿದ್ದ. ಹತ್ಯೆ ಮಾಡಿದ ಮರುದಿನದಿಂದ ಅರ್ಪಿತ್ ಸಂಚಾರ ಪ್ರಾರಂಭವಾಗಿತ್ತು. ರಾಜ್ಯ ರಾಜಧಾನಿಯಿಂದ ಹೊರಟವನು ಉತ್ತರ ಭಾರತ ಸೇರಿದ್ದ. ಪೊಲೀಸರು ಕೂಡ ಮೊದಲಿಗೆ ಅರ್ಪಿತ್‍ಗಾಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ಹೈದರಾಬಾದ್‍ನಲ್ಲಿ ಹಾಗೂ ಅತನ ತಾಯಿ ಕೆಲಸ ಮಾಡುತ್ತಿದ್ದ ದೆಹಲಿಯಲ್ಲೂ ಕೂಡ ಶೋಧ ನಡೆಸಿದ್ದರು.

ಅರ್ಪಿತ್ ಹಿಂದೆ ಬಿದ್ದಿದ್ದ ಪೊಲೀಸರು 3 ರಾಜ್ಯಗಳನ್ನು ಸುತ್ತಿದ್ದರು. 5 ಸಾವಿರ ರೂ. ನಗದು ಮಾತ್ರ ತೆಗೆದುಕೊಂಡು ಅರ್ಪಿತ್ ರೈಲು ಹತ್ತಿದ್ದ. ಅತನ ಎಲ್ಲಾ ಅಕೌಂಟ್‍ಗಳನ್ನು ಜೀವನ್ ಭೀಮಾ ಪೊಲೀಸರು ಫ್ರೀಜ್ ಮಾಡಿದ್ದರು. ಅಕೌಂಟ್‍ನಲ್ಲಿ 20 ಲಕ್ಷ ರೂ. ದುಡ್ಡಿದ್ರೂ 1 ರೂಪಾಯಿಯನ್ನು ಕೂಡ ಅತ ತೆಗೆಯೋಕೆ ಆಗಿರಲಿಲ್ಲ. ಹೀಗಾಗಿ ದುಡ್ಡಿಗೆ ಸಮಸ್ಯೆಯಾಗಿ ತನ್ನ ಸ್ನೇಹಿತನನ್ನು ಸಂಪರ್ಕಿಸಿದ್ದ. ಆಗ ಸ್ನೇಹಿತರ ನಂಬರ್ ಕೂಡ ಸಿಡಿಆರ್ ಹಾಕಿದ್ದ ಪೊಲೀಸರು ತಕ್ಷಣವೇ ಆತನ ಸ್ನೇಹಿತನ ಬೆನ್ನು ಬಿದ್ದಿದ್ರೂ.

ಇದನ್ನೂ ಓದಿ: Karnataka Shakti Scheme: 300 ಕೋಟಿ ರೂ. ದಾಟಿದ ಮಹಿಳಾ ‘ಶಕ್ತಿ’ ಪ್ರದರ್ಶನ!

ಅರ್ಪಿತ್ ಸ್ನೇಹಿತನ ಮಾಹಿತಿ ಮೇರೆಗೆ ಈತ ದೆಹಲಿಗೆ ತೆರಳಿರುವ ಮಾಹಿತಿ ಪಡೆದಿದ್ದರು. ಆದರೆ ಅದ್ಯಾಕೋ ದೆಹಲಿ ತೆರಳುವ ಮಾರ್ಗ ಮಧ್ಯೆ ಭೋಪಾಲ್‍ನಲ್ಲಿ ಇಳಿದು ಅರ್ಪಿತ್ ಅಸ್ಸಾಂಗೆ ಹೋಗಿ ಅಸ್ಸಾಂನಲ್ಲಿ ಬೀದಿ ಬದಿ ವ್ಯಾಪಾರಿಗಳೊಂದಿಗೆ ಕೆಲಸ ಮಾಡಿಕೊಂಡಯ ಪ್ರತಿದಿನ 150 ರೂ. ಕೂಲಿ ಪಡೆಯುತ್ತಿದ್ದ‌. ಪೊಲೀಸರಿಗೆ ಮತ್ತೆ ಈತ ಅಸ್ಸಾಂನಲ್ಲಿರೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ ದುರಾದೃಷ್ಟಕ್ಕೆ ಪೊಲೀಸರು ಅಸ್ಸಾಂ ತಲುಪುವುದರೊಳಗೆ ಮತ್ತೆ ಆರೋಪಿ ವಿಜಯವಾಡಕ್ಕೆ ಬಂದಿದ್ದ. ಅಲ್ಲೂ ಜಾಸ್ತಿ ಸಮಯ ನಿಲ್ಲದೆ ಮತ್ತೆ ಬೆಂಗಳೂರಿಗೆ ವಾಪಸ್ಸು ಬಂದಿದ್ದ. ಸೋಮವಾರ ವೈಟ್‍ಫೀಲ್ಡ್‍ನಲ್ಲಿ ಅವನ ಸ್ನೇಹಿತನ ಮನೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

ತನಿಖೆ ವೇಳೆ ಕೊಲೆ ಮಾಡಿದ್ದು ಯಾಕೆ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ. ಅಕಾಂಕ್ಷ ಮತ್ತು ಅರ್ಪಿತ್ ಪ್ರೀತಿಸುತ್ತಿದ್ದರು. ಆದರೆ ಅಕಾಂಕ್ಷ ಇತ್ತೀಚೆಗೆ ಬೇರೆಯವನನ್ನು ಪ್ರೀತಿಸುದ್ದ ವಿಷಯವನ್ನು ಅರ್ಪಿತ್ ತಿಳಿದುಕೊಂಡಿದ್ದನಂತೆ. ಹೀಗಾಗಿ ನಾವಿಬ್ಬರೂ ಮದುವೆಯಾಗೋಣವೆಂದು ಆಕೆಗೆ ಒತ್ತಾಯ ಮಾಡಿದ್ದನಂತೆ. ಆದರೆ ಅಕಾಂಕ್ಷ ಇಲ್ಲಾ, ಬ್ರೇಕ್ ಆಪ್ ಮಾಡಿಕೊಳ್ಳೋಣ ಅಂತಾ ಹೇಳಿದ್ದಳಂತೆ. ಹೀಗಾಗಿ ಉಸಿರುಗಟ್ಟಿಸಿ ಅಕಾಂಕ್ಷಳನ್ನು ಹತ್ಯೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News