Belgavi News: ಹಿಂದೂ ಧರ್ಮದಲ್ಲಿ ಗಂಡನ ಆಯಸ್ಸು ವೃದ್ಧಿಗಾಗಿ ಭೀಮನ ಅಮಾವಾಸ್ಯೆಯ ದಿನ ಪತಿಗೆ ಪಾದ ಪೂಜೆ ಮಾಡಿ, ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ಆದರೆ, ಇಂತಹ ಶುಭ ದಿನದಂದೇ ದೇವಸ್ಥಾನದಲ್ಲಿ ಹೆಂಡತಿ ಎದುರೇ ಗಂಡನ ಬರ್ಬರ ಹತ್ಯೆ ಆಗಿತ್ತು. ಆದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಐನಾತಿ ಹೆಂಡತಿ ಪ್ರಿಯಾಂಕಾ ಜಗಮತ್ತಿಯನ್ನ ಮೂಡಲಗಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಹೌದು, ನಿನ್ನೆ (ಜುಲೈ 17, 2023 ಸೋಮವಾರ) ಭೀಮನ ಅಮವಾಸ್ಯೆಯಾಗಿದ್ದರಿಂದ ಶಂಕರ್ ಜಗಮತ್ತಿ ಮತ್ತು ಪ್ರಿಯಾಂಕಾ ಜಗಮತ್ತಿ ದಂಪತಿ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಇಲ್ಲೇ ಪತ್ನಿ ಪ್ರಿಯಾಂಕಾ ಎದುರಲ್ಲೇ ದುಷ್ಕರ್ಮಿಗಳು ಆಕೆಯ ಪತಿ ಶಂಕರ್ ಜಗಮತ್ತಿ ಹತ್ಯೆಗೈದಿದ್ದರು. ಆದರಿದು ಪಕ್ಕಾ ಪ್ಲಾನ್ ಮರ್ಡರ್ ಎಂದು ತಿಳಿದ ಪೊಲೀಸರು ಶಂಕರ್ ಜಗಮತ್ತಿ ಪತ್ನಿ ಪ್ರಿಯಾಂಕಾ ಜಗಮತ್ತಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ- ಪೋಷಕರೇ ಹುಷಾರ್! ರಾಜ್ಯದ ಈ ಭಾಗದಲ್ಲಿ ಸಕ್ರಿಯವಾಗಿದೆ ಮಕ್ಕಳ ಅಪಹರಣಕಾರರ ಗ್ಯಾಂಗ್!
ಏನಿದು ಪ್ರಕರಣ?
ಭೀಮನ ಅಮಾವಾಸ್ಯೆಯ ದಿನ ಗಂಡನ ಆಯಸ್ಸು ಹೆಚ್ಚಾಗಲಿ ಎಂದು ಪತ್ನಿ ಪತಿಗಾಗಿ ಪೂಜೆ ಮಾಡುತ್ತಾಳೆ. ಆದರೆ ಈ ಮಹಾತಾಯಿ ತನ್ನ ಪ್ರಿಯಕರನ ಜೊತೆಗೂಡಿ ಗಂಡನ ಜೀವಕ್ಕೇ ಸ್ಕೆಚ್ ಹಾಕಿದ್ದಾಳೆ. ಮೊದಲೇ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ಪ್ರಿಯಾಂಕಾ ದೇವಸ್ಥಾನಕ್ಕೆಂದು ಪತಿಯೊಂದಿಗೆ ಮನೆಯಿಂದ ಹೊರಡುವ ವೇಳೆ ಪ್ರಿಯಕರ ಶ್ರೀಧರ್‌ಗೆ ಕರೆ ಮಾಡಿದ್ದಳು. ದೇವರ ದರ್ಶನ ಪಡೆದು ಹಿಂದಿರುಗುತ್ತಿದ್ದಾಗ ಎದುರಿನಿಂದ ಬಂದ ಪ್ರಿಯಾಂಕಾಳ ಪ್ರಿಯಕರ ಶ್ರೀಧರ್ ತಳವಾರ ಆಕೆಯ ಪತಿ ಶಂಕರ್ ಜಗಮಟ್ಟಿಗೆ ಚಾಕುವಿನಿಂದ ಇರಿದು ಕೊಲೆಗೈದು ಅಲ್ಲಿಂದ ಎಸ್ಕೇಪ್ ಆಗಿದ್ದನು. ಈ ಸಂದರ್ಭದಲ್ಲಿ ತನಗೆ ಏನೂ ಗೊತ್ತೇ ಇಲ್ಲ ಎಂದು ನಟಿಸಿದ್ದ ಪ್ರಿಯಾಂಕಾ ಜಗಮತ್ತಿ ಪತಿ ಬೈಕ್ ತರುತ್ತಾನೆಂದು, ಆತನಿಗಾಗಿ ತಾನು ಕಾದು ನಿಂತಿರುವುದಾಗಿ ನಟಿಸಿದ್ದಳು.
ಇದನ್ನೂ ಓದಿ- Raichur News: ಅನೈತಿಕ ಸಂಬಂಧ ಶಂಕೆ ಪತಿಯಿಂದ ಪತ್ನಿ ಕೊಲೆ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಿಎಸ್ ಐ ಹಾಲಪ್ಪ ಬಾಲದಂಡಿ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ತನಿಖೆ ಆರಂಭಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಪ್ರಾಥಮಿಕ ತನಿಖೆಯಲ್ಲಿ ಶ್ರೀಧರ್ ತಳವಾರ ಮತ್ತು ಪ್ರಿಯಾಂಕಾ ಜಗಮತ್ತಿ ಇಬ್ಬರ ನಡುವೆ ಇದ್ದ ಅನೈತಿಕ ಸಂಬಂಧವೇ ಈ ಕೊಲೆಗ ಕಾರಣ ಎಂಬುದು ಪತ್ತೆಯಾಗಿದೆ. ಇನ್ನೂ ಕಾಲ್ ರೆಕಾರ್ಡ್, ಅವರಿಬ್ಬರ ಕಾಲ್ ಡೀಟೈಲ್ಸ್ ಪಡೆದ ನಂತರ ಇವರಿಬ್ಬರೇ ಪ್ಲಾನ್ ಮಾಡಿ ಶಂಕರ್ ನನ್ನು ಕೊಲೆ ಮಾಡಿರುವುದು ಪತ್ತೆಯಾಗಿದ್ದು, ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಪೊಲೀಸರು ಶಂಕರ್ ಪತ್ನಿ ಪ್ರಿಯಾಂಕ ಜಗಮತ್ತಿಯನ್ನು (21) ಮತ್ತು ಪ್ರಿಯಾಂಕಾಳ ಕಬ್ಬಿನ ಗದ್ದೆಯ ಪ್ರಿಯಕರ ಶ್ರೀಧರ್ ತಳವಾರ(21) ಇಬ್ಬರನ್ನೂ ಬಂಧಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.