Crime News: ಬಡ್ಡಿ ಹಣ ಕೊಡಲಿಲ್ಲವೆಂದು ರಸ್ತೆಯಲ್ಲಿಯೇ ವ್ಯಕ್ತಿಗೆ ಥಳಿತ!

Bengaluru Crime News: ಹಲ್ಲೆಗೊಳಗಾದ ಅಶೋಕ್ ಕೋವಿಡ್ ಸಂದರ್ಭದಲ್ಲಿ ಮಧು ಹಾಗೂ ಪ್ರಮೀಳಾ ದಂಪತಿಯಿಂದ 1.5 ಲಕ್ಷ ರೂ.ಸಾಲ ಪಡೆದಿದ್ದ. ಸಾಲದಲ್ಲಿ 1 ಲಕ್ಷ ರೂ. ಹಣವನ್ನು ಕೋವಿಡ್ ಸಂದರ್ಭದಲ್ಲೇ ಮರುಪಾವತಿ ಮಾಡಿದ್ದ.

Written by - VISHWANATH HARIHARA | Edited by - Puttaraj K Alur | Last Updated : Feb 22, 2023, 03:44 PM IST
  • ಸಾಲ ಪಡೆದು ಬಡ್ಡಿ ಹಣ ಕೊಡಲಿಲ್ಲವೆಂದು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ
  • ಬೆಂಗಳೂರಿನ ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿ ನಡೆದಿರುವ ಘಟನೆಯ ವಿಡಿಯೋ ವೈರಲ್
  • ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ಖಾಕಿಪಡೆಯಿಂದ ತನಿಖೆ
Crime News: ಬಡ್ಡಿ ಹಣ ಕೊಡಲಿಲ್ಲವೆಂದು ರಸ್ತೆಯಲ್ಲಿಯೇ ವ್ಯಕ್ತಿಗೆ ಥಳಿತ! title=
ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ!

ಬೆಂಗಳೂರು: ಸಾಲ ಪಡೆದು ಬಡ್ಡಿ ಹಣ ಕೊಡಲಿಲ್ಲ ಅಂತಾ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿ ನಡೆದಿದೆ. ಅಶೋಕ್ ಎಂಬಾತನನ್ನು ನಾಲ್ವರು ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯಗಳು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ʼಕೊನೆಯ ಅಧಿವೇಶನʼದಲ್ಲಿ ʼವಿದಾಯ ಭಾಷಣʼ ಮಾಡಿದ ʼಕೇಸರಿ ಕಲಿ ಬಿಎಸ್‌ವೈʼ..!

ಹಲ್ಲೆಗೊಳಗಾದ ಅಶೋಕ್ ಕೋವಿಡ್ ಸಂದರ್ಭದಲ್ಲಿ ಮಧು ಹಾಗೂ ಪ್ರಮೀಳಾ ದಂಪತಿಯಿಂದ 1.5 ಲಕ್ಷ ರೂ.ಸಾಲ ಪಡೆದಿದ್ದ. ಸಾಲದಲ್ಲಿ 1 ಲಕ್ಷ ರೂ. ಹಣವನ್ನು ಕೋವಿಡ್ ಸಂದರ್ಭದಲ್ಲೇ ಮರುಪಾವತಿ ಮಾಡಿದ್ದ. ಆದರೆ ಉಳಿದ 50 ಸಾವಿರ ರೂ.ಗೆ ಬಡ್ಡಿ ಪಾವತಿಸುವುದು ತಡವಾಗಿತ್ತು. ಆದರೆ ಬಡ್ಡಿ ಅಸಲು ಹಣ ಎಲ್ಲವೂ ಒಟ್ಟಿಗೆ ಬೇಕು ಎಂದು ಮಧು ಹಾಗೂ ಪ್ರಮೀಳಾ ದಂಪತಿ ಕೇಳಿದ್ದರು.

ಇದನ್ನೂ ಓದಿ: ಮತ್ತಷ್ಟು ಜನಸ್ನೇಹಿಯಾದ್ರು ಆಗ್ನೇಯ ಪೊಲೀಸ್ : ಕ್ಯೂಆರ್ ಕೋಡ್ ಮೂಲಕ ನೇರವಾಗಿ ಅಧಿಕಾರಿಗಳ ಸಂಪರ್ಕ

ಆದರೆ ಅಶೋಕ್ ಸದ್ಯಕ್ಕೆ ಪೂರ್ತಿ ಹಣ ಕೊಡಲು ಆಗಲ್ಲ ಎಂದಿದ್ದ. ಹೀಗಾಗಿ ಪ್ರಮೀಳಾ, ಮಧು, ಸಂತೋಷ್ ಹಾಗೂ ನಾಲ್ವರು ಸೇರಿ ಅಶೋಕ್ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಹಲ್ಲೆಗೊಳಗಾದ ಅಶೋಕ್ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News