ಬೆಂಗಳೂರು: ನಗರದ ಕೋರಮಂಗಲದಲ್ಲಿ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಗಗನಸಖಿ ಅರ್ಚನಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಗಗನಸಖಿ ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿಲ್ಲ ಅದು ಕೊಲೆ ಎಂಬ ಸತ್ಯ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಅರ್ಚನಾಳನ್ನ ಆಕೆಯ ಬಾಯ್ ಫ್ರೆಂಡ್ ಆದೇಶ್ ಬಿಲ್ಡಿಂಗ್ ಮೇಲಿಂದ ತಳ್ಳಿ ಕೊಲೆ ಮಾಡಿದ್ದು, ಈ ಹಿನ್ನೆಲೆ ಪೊಲೀಸರು ಆದೇಶ್ ವಿರುದ್ಧ ಐಪಿಸಿ 302 ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಹಿಮಾಚಲಪ್ರದೇಶ ಮೂಲದ ಅರ್ಚನಾ ಹಾಗೂ ಕೇರಳ ಮೂಲದ ಆದೇಶ್ ಗೆ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿ ಇಬ್ಬರು ಪ್ರೀತಿಸುತ್ತಿದ್ದರು. ಅರ್ಚನಾ ದುಬೈನ ಲೇರ್ಲೈನ್ಸ್ನಲ್ಲಿ ಗಗನಸಖಿಯಾಗಿದ್ದರೆ, ಆದೇಶ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಆದೇಶನನ್ನು ನೋಡಲು ಅರ್ಚನಾ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದಳು. ಆದರೆ ಮಾರ್ಚ್ 11ರಂದು ಅರ್ಚನಾ ಆದೇಶ್ ವಾಸವಿದ್ದ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಮೃತಪಟ್ಟಿದ್ದಳು.
ಇದನ್ನೂ ಓದಿ: ́Health Department Employees Protest: 30ನೇ ದಿನಕ್ಕೆ ಕಾಲಿಟ್ಟ ಒಳಗುತ್ತಿಗೆ ಆರೋಗ್ಯ ಸಿಬ್ಬಂದಿಗಳ ಮುಷ್ಕರʼ
ಬಳಿಕ ಆದೇಶ್, ನಶೆಯಲ್ಲಿ ಬಿಲ್ದಿಂಗ್ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಆಕೆಯ ತಂದೆಗೆ ಕರೆ ಮಾಡಿ ತಿಳಿಸಿ ಪೊಲೀಸರಿಗೂ ಇದೆ ಮಾಹಿತಿ ಕೊಟ್ಟಿದ್ದ. ಆದರೆ ಈ ಸಾವಿನ ಬಗ್ಗೆ ಕುಟುಂಬಸ್ಥರಿಗೆ ಅನುಮಾನ ಬಂದಿದ್ದು, ಇದು ಆಕಸ್ಮಿಕವಲ್ಲ.ಅರ್ಚನಾಳನ್ನ ಕೊಲೆ ಮಾಡುವ ಉದ್ದೇಶದಿಂದ ಬಿಲ್ಡಿಂಗ್ ಮೇಲಿಂದ ತಳ್ಳಿದ್ದಾರೆ ಎಂದು ಅರ್ಚನಾಳ ತಂದೆ ದೇವರಾಜ್ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆದ ಪೊಲೀಸರಿಗೆ ಮೇಲ್ನೋಟಕ್ಕೆ ಆದೇಶ್ ಆಕೆಯನ್ನು ತಳ್ಳಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿತ್ತು.
ಆದೇಶ್ನನ್ನು ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರ ನಡುವಿನ ಗಲಾಟೆ ಕಹಾನಿ ಬಯಲಾಗಿದೆ. ಐಲ್ ಎಂಬ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಮೂರು ತಿಂಗಳಿಂದ ಮದುವೆಯಾಗುವಂತೆ ಅರ್ಚನಾ ಪೀಡಿಸುತ್ತಿದ್ದಳು. ತನ್ನ ಮನೆಯಲ್ಲಿ ಮದುವೆ ತಯಾರಿ ನಡೆದಿದೆ.
ಇದನ್ನೂ ಓದಿ: Mandya: ನೆಚ್ಚಿನ ನಾಯಕನಿಗೆ ಹಾರ ಹಾಕುವ ಬರದಲ್ಲಿ ಅಭಿಮಾನಿಗಳಿಂದ ಎಡವಟ್ಟು!
ಈ ಹಿನ್ನೆಲೆ ಇಬ್ಬರ ಮದುವೆ ಬಗ್ಗೆ ಮಾತಾಡುವಂತೆ ಒತ್ತಾಯಿಸುತ್ತಿದ್ದಳು. ಆದರೆ ಆದೇಶ್ ಮೂರು ತಿಂಗಳಿಂದ ಕೆಲ ಕಾರಣ ಹೇಳಿ ಕಾಲಹರಣ ಮಾಡಿದ್ದ. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಗಗನಸಖಿ ಅರ್ಚನಾ, ಮದುವೆಯಾಗಲು ತೀವ್ರ ಒತ್ತಡ ಹೇರಿದ್ದಳು. ಈ ವಿಚಾರವಾಗಿ ಮಾರ್ಚ್ 11 ರ ರಾತ್ರಿ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ಅರ್ಚನಾ ಆದೇಶ್ ಗೆ ಮದುವೆಯಾಗದಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಳು. ಇದರಿಂದ ಕೋಪಗೊಂಡ ಆದೇಶ್, ಆಕೆಯನ್ನು ಬಿಲ್ಡಿಂಗ್ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.