ATM Hacking: ಎಟಿಎಂಗಳೇ ಈತನ ಟಾರ್ಗೆಟ್: ಗ್ಯಾಸ್ ಕಟ್ಟರ್ ಬಳಸಿ ಹಣ ದೋಚುತ್ತಿದ್ದ ಖತರ್ನಾಕ್ ಅಂದರ್

ಪಂಜಾಬ್ ಮೂಲದ  ಸಮರ್ಜೋತ್ ಸಿಂಗ್ ಬಂಧಿತ ಆರೋಪಿ. ಈತ ಕಳೆದ 4-5 ದಿನಗಳಿಂದ ಚಿಕ್ಕಸಂದ್ರದ ಕಾಲೇಜು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ದೋಚಲು ಪ್ಲಾನ್ ಮಾಡಿದ್ದ. ರಾತ್ರಿಯಾಗುತ್ತಿದ್ದಂತೆ ಎಟಿಎಂ ಸೆಂಟರ್ ಗೆ ನುಗ್ಗಿ ಶೆಟರ್ ಕ್ಲೋಸ್ ಮಾಡಿ ಗ್ಯಾಸ್ ಕಟ್ಟರ್ ನಿಂದ ಮೆಷನ್ ಕಟ್ ಮಾಡಲು ಯತ್ನಿಸಿದ್ದ. 

Written by - VISHWANATH HARIHARA | Edited by - Yashaswini V | Last Updated : Jun 17, 2022, 02:14 PM IST
  • ಪಂಜಾಬ್ ಮೂಲದ ಸಮರ್ಜೋತ್ ಸಿಂಗ್ ಬಂಧಿತ ಆರೋಪಿ
  • ಗ್ಯಾಸ್ ಕಟ್ಟರ್ ಬಳಿಸಿ ಎಟಿಎಂ ಮೆಷಿನ್ ನಲ್ಲಿ‌ಹಣ ಕದಿಯಲು ಮುಂದಾಗಿದ್ದಾ ಆರೋಪಿ
  • ಈತ ಕಳೆದ 4-5 ದಿನಗಳಿಂದ ಚಿಕ್ಕಸಂದ್ರದ ಕಾಲೇಜು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ದೋಚಲು ಪ್ಲಾನ್ ಮಾಡಿದ್ದ
ATM Hacking: ಎಟಿಎಂಗಳೇ ಈತನ ಟಾರ್ಗೆಟ್: ಗ್ಯಾಸ್ ಕಟ್ಟರ್ ಬಳಸಿ ಹಣ ದೋಚುತ್ತಿದ್ದ ಖತರ್ನಾಕ್ ಅಂದರ್ title=
ATM Hacker Arrest

ಬೆಂಗಳೂರು: ಎಂಟಿಎಂ ಮೆಷಿನ್ ಗಳನ್ನು ಗ್ಯಾಸ್ ಕಟ್ಟರ್ ನಿಂದ ಕಟ್ ಮಾಡಿ ಹಣ ದೋಚುತ್ತಿದ್ದ ಖತರ್ನಾಕ್ ಕಳ್ಳನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ‌. 

ಪಂಜಾಬ್ ಮೂಲದ  ಸಮರ್ಜೋತ್ ಸಿಂಗ್ ಬಂಧಿತ ಆರೋಪಿ. ಈತ ಕಳೆದ 4-5 ದಿನಗಳಿಂದ ಚಿಕ್ಕಸಂದ್ರದ ಕಾಲೇಜು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ದೋಚಲು ಪ್ಲಾನ್ ಮಾಡಿದ್ದ. ರಾತ್ರಿಯಾಗುತ್ತಿದ್ದಂತೆ ಎಟಿಎಂ ಸೆಂಟರ್ ಗೆ ನುಗ್ಗಿ ಶೆಟರ್ ಕ್ಲೋಸ್ ಮಾಡಿ ಗ್ಯಾಸ್ ಕಟ್ಟರ್ ನಿಂದ ಮೆಷನ್ ಕಟ್ ಮಾಡಲು ಯತ್ನಿಸಿದ್ದ. ಆದರೆ ಎಟಿಎಂ ಕಾರ್ಡ್ ರೀಡರ್ ಜಾಮ್ ಆಗುತ್ತಿತ್ತು. ಇದನ್ನು ಹಲವು ಬಾರಿ ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗುತ್ತಿದ್ದ. ಹೀಗಾಗಿ ಎಟಿಎಂ ನಿರ್ವಹಣೆ ಮಾಡುವ ಏಜೆನ್ಸಿಯವರು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು  ನೀಡಿದ್ದರು. 

ಇದನ್ನೂ ಓದಿ- RBI Mastercard Onboarding: ಮಾಸ್ಟರ್‌ಕಾರ್ಡ್ ಮೇಲಿನ ನಿಷೇಧವನ್ನು ತೆಗೆದುಹಾಕಿದ ಆರ್‌ಬಿಐ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮತ್ತೆ ಕಳ್ಳತನಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ. ಸದ್ಯ ಈತನಿಂದ ಕೃತ್ಯಕ್ಕೆ ಬಳಸಿದ್ದ 5 ಕೆಜಿ ತೂಕದ ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟರ್, ಏರ್ ಫಿಲ್ಟರ್ ಮಾಸ್ಕ್, ಕತ್ತಿ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಇದನ್ನೂ ಓದಿ- LPG Gas Connection: ಎಲ್‌ಪಿಜಿ ಗ್ಯಾಸ್‌ ಕನೆಕ್ಷನ್ ಇನ್ನು ಬಲು ದುಬಾರಿ

ಈ ಹಿಂದೆ ಆರೋಪಿ ಸುಬ್ರಹ್ಮಣ್ಯಪುರ, ಮೈಕೋಲೇಔಟ್ ಸೇರಿ ಹಲವು ಕಡೆ ಕಳ್ಳತನ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಕಳೆದ ವರ್ಷ ಡಿಸೆಂಬರ್ ನಲ್ಲಿ ಜಾಮೀನು ಪಡೆದು ಹೊರಬಂದು ಮತ್ತದೇ ಪ್ರವೃತ್ತಿಯನ್ನು ಮುಂದುವರೆಸಿದ್ದ. ಈಗ  ಪೊಲೀಸರು ಈತನನ್ನ ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News