ಚಿನ್ನದ ವ್ಯಾಪಾರಿ ಅಪಾರ್ಟ್ಮೆಂಟಿನಲ್ಲಿ ಅಂದರ್ ಬಾಹರ್: ಸಿಸಿಬಿ ದಾಳಿ, ಲಕ್ಷ- ಲಕ್ಷ ಜಪ್ತಿ

ಜನವರಿ 7ರಂದು ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸಿ ಸರ್ಕಲ್ ಬಳಿಯಿರುವ ಪಾರ್ಕ್ ವೆಸ್ಟ್ ಅಪಾರ್ಟ್‌ಮೆಂಟಿನಲ್ಲಿರುವ ರಾಜ್ ಜೈನ್ ಎಂಬಾತನ ಫ್ಲ್ಯಾಟಲ್ಲಿ ಆರೋಪಿಗಳು ಅಂದರ್ ಬಾಹರ್ ಆಡುತ್ತಿದ್ದರು. 

Written by - VISHWANATH HARIHARA | Last Updated : Jan 9, 2024, 02:18 PM IST
  • ಅಂದರ್ ಬಾಹರ್ ಜೂಜಾಟದ ಅಡ್ಡೆ ಮೇಲೆ ಸಿಸಿಬಿ ದಾಳಿ..!
  • ಜೂಜಾಟದ ಸ್ಥಳದಲ್ಲಿದ್ದ ದಾಖಲೆಯಿಲ್ಲದ ಎರಡು ಹಣದ ಬ್ಯಾಗ್ ಗಳು ಪತ್ತೆ
  • ದಾಖಲೆಯಿಲ್ಲದ 85 ಲಕ್ಷ ಹಣ ಸೀಜ್ ಮಾಡಿದ ಸಿಸಿಬಿ ಅಧಿಕಾರಿಗಳು
ಚಿನ್ನದ ವ್ಯಾಪಾರಿ ಅಪಾರ್ಟ್ಮೆಂಟಿನಲ್ಲಿ ಅಂದರ್ ಬಾಹರ್: ಸಿಸಿಬಿ ದಾಳಿ, ಲಕ್ಷ- ಲಕ್ಷ ಜಪ್ತಿ title=

ಬೆಂಗಳೂರು: ಚಿನ್ನದ ವ್ಯಾಪಾರಿಯ ಫ್ಲ್ಯಾಟ್'ನಲ್ಲಿ ಅಂದರ್ - ಬಾಹರ್ ಆಟದಲ್ಲಿ ತೊಡಗಿದ್ದ ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜಿನೇಂದ್ರ, ಮನೀಶ್, ಮುಕೇಶ್, ಲಲಿತ್, ರೋಹಿತ್ ಹಾಗೂ ಸಂಜಯ್ ಬಂಧಿತರು. 
ಜೂಜಾಟದ ಸ್ಥಳದಲ್ಲಿದ್ದ ದಾಖಲೆಯಿಲ್ಲದ ಎರಡು ಹಣದ ಬ್ಯಾಗ್ ಗಳು ಪತ್ತೆಯಾಗಿದ್ದು, ಒಟ್ಟು 85 ಲಕ್ಷ ರೂ ಹಣ ಸೀಜ್ ಮಾಡಲಾಗಿದೆ. 

ಜನವರಿ 7ರಂದು ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸಿ ಸರ್ಕಲ್ ಬಳಿಯಿರುವ ಪಾರ್ಕ್ ವೆಸ್ಟ್ ಅಪಾರ್ಟ್‌ಮೆಂಟಿನಲ್ಲಿರುವ ರಾಜ್ ಜೈನ್ ಎಂಬಾತನ ಫ್ಲ್ಯಾಟಲ್ಲಿ ಆರೋಪಿಗಳು ಅಂದರ್ ಬಾಹರ್ ಆಡುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಆಟದ ಟೇಬಲ್ ಮೇಲಿದ್ದ 1.48 ಲಕ್ಷ ಹಣ ಜಪ್ತಿ ಮಾಡಿದ್ದರು. ಅದೇ ಫ್ಲ್ಯಾಟ್ ಶೋಧ ನಡೆಸಿದಾಗ 85.39 ಲಕ್ಷ ರೂ ಪತ್ತೆಯಾಗಿದೆ. 

ಇದನ್ನೂ ಓದಿ- Udupi: ಬಾವಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ, ಹೃದಯಾಘಾತದಿಂದ ವಿದ್ಯಾರ್ಥಿ ಸಾವು!

ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನ ಬಂಧಿಸಲಾಗಿದ್ದು, ಒಟ್ಟು 86.87 ಲಕ್ಷ ರೂ ವಶಕ್ಕೆ ಪಡೆಯಲಾಗಿದೆ. ಹಣದ ಬ್ಯಾಗ್ ಗಳಿದ್ದ ಮನೆ ಮಾಲೀಕ ರಾಜ್ ಜೈನ್ ಪರಾರಿಯಾಗಿದ್ದು, ಆತನ ವಿರುದ್ಧವು ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ- ಗೋವಾದಲ್ಲಿ 4 ವರ್ಷದ ಮಗು ಕೊಂದು ಬ್ಯಾಗ್‌ನಲ್ಲಿ ಶವ ಸಾಗಿಸುತ್ತಿದ್ದ ಮಹಿಳೆ, ಮುಂದೆ..

ಚಿನ್ನದ ವ್ಯಾಪಾರಿಯಾಗಿರುವ ರಾಜ್ ಜೈನ್ ಈ ಹಿಂದೆ ಚಿನ್ನ ಕಳುವಾಗಿದೆ ಎಂದು ಸುಳ್ಳು ದೂರು ನೀಡಿದ್ದ ಪೊಲೀಸರನ್ನು ಯಾಮಾರಿಸಿದ್ದ. ಪೊಲೀಸರು ತನಿಖೆ ಕೈಗೊಂಡಾಗ ರಾಜ್ ಜೈನ್ ಕಳ್ಳಾಟ ಬಯಲಾಗಿತ್ತು. ಸದ್ಯ ಪೊಲೀಸರು ಈ ಸಂಬಂಧ ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News