ಪುರಾತನ ‘ಕಾಮಸೂತ್ರ’ದ ತೈಲಚಿತ್ರ ಮಾರಾಟಕ್ಕೆ ಯತ್ನ: ಇವುಗಳ ಬೆಲೆ ಕೇಳಿದ್ರೆ ಹೌಹಾರ್ತೀರಿ!

ಮೊಘಲರ ಕಾಲದ್ದು ಎಂದು ಹೇಳಲಾಗುವ ಪುರಾತನ ಕಾಲದ ಆನೆದಂತದಿಂದ ಮಾಡಿರುವ ವಿವಿಧ ಶೈಲಿಯ ಬೆಲೆಬಾಳುವ ವಸ್ತುಗಳನ್ನು ಮಾರಾಟಕ್ಕೆ ಯತ್ನಿಸಿದ್ದ ಆರೋಪಿಗಳನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ವಿಭಾಗದ ಅಧಿಕಾರಿಗಳು ಬಂಧಿಸಿದ್ದರಾರೆ.  ಅನ್ಯ ರಾಜ್ಯದ ಇಬ್ಬರು ಸೇರಿ ಒಟ್ಟು ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದರಾರೆ.

Written by - VISHWANATH HARIHARA | Edited by - Manjunath N | Last Updated : Nov 18, 2022, 04:14 PM IST
  • ಆರೋಪಿಗಳ ವಿರುದ್ಧ ಈ ಹಿಂದೆ ಕ್ರಿಮಿನಲ್‌ ಕೇಸ್ ದಾಖಲಾಗಿದೆಯಾ ಎಂಬುದನ್ನು ಹಚ್ಚಲಾಗುತ್ತಿದೆ.
  • ವಶಪಡಿಸಿಕೊಂಡಿರುವ ವಸ್ತುಗಳು ಮೇಲ್ನೊಟಕ್ಕೆ ಮೊಘಲರ ಕಾಲದ ವಸ್ತುಗಳು ಎಂದು ಅಂದಾಜಿಸಲಾಗಿದೆ.
  • ನಿಖರವಾಗಿ ಪತ್ತೆ ಹಚ್ಚಲು ಡೆಹ್ರಾಡೂನ್ ನಲ್ಲಿರುವ ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಹಾಗೂ ಹೈದರಾಬಾದ್‌ ಗೂ ಕಳುಹಿಸುವ ಸಾಧ್ಯತೆ ಇದೆ.
ಪುರಾತನ ‘ಕಾಮಸೂತ್ರ’ದ ತೈಲಚಿತ್ರ ಮಾರಾಟಕ್ಕೆ ಯತ್ನ: ಇವುಗಳ ಬೆಲೆ ಕೇಳಿದ್ರೆ ಹೌಹಾರ್ತೀರಿ! title=

ಬೆಂಗಳೂರು: ಮೊಘಲರ ಕಾಲದ್ದು ಎಂದು ಹೇಳಲಾಗುವ ಪುರಾತನ ಕಾಲದ ಆನೆದಂತದಿಂದ ಮಾಡಿರುವ ವಿವಿಧ ಶೈಲಿಯ ಬೆಲೆಬಾಳುವ ವಸ್ತುಗಳನ್ನು ಮಾರಾಟಕ್ಕೆ ಯತ್ನಿಸಿದ್ದ ಆರೋಪಿಗಳನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ವಿಭಾಗದ ಅಧಿಕಾರಿಗಳು ಬಂಧಿಸಿದ್ದರಾರೆ.  ಅನ್ಯ ರಾಜ್ಯದ ಇಬ್ಬರು ಸೇರಿ ಒಟ್ಟು ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದರಾರೆ.

ಹರಿಯಾಣ ಹಾಗೂ ಪಂಜಾಬ್ ಮೂಲದ ಹಿಮ್ಮತ್ ಸಿಂಗ್, ಪ್ರವೀಣ್ ಸಾಂಬಿಯಾಲ್ , ಸ್ಥಳೀಯ ಆರೋಪಿಗಳಾದ ಅಬ್ದುಲ್ ಕಯೂಮ್, ಮೊಹಮ್ಮದ್ ರಫೀಕ್,‌ ಮೊಹಮ್ಮದ್ ಇಸ್ರಾರ್ ಹಾಗೂ ಆಮ್ಜದ್ ಪಾಷಾ ಬಂಧಿತರು. ಇವರಿಂದ ಆನೆದಂತದಿಂದ ತಯಾರಿಸಲಾಗಿರುವ ಚೌಕಾಕಾರದ ಬಾಕ್ಸ್ 533 ಗ್ರಾಂ, ಬಾಗಿಲ ಹಿಡಿಕೆ, ಆನೆಯ ಮೂರ್ತಿ  ವಾಕಿಂಗ್ ಸ್ಟೀಕ್, ಜಿಂಕೆಯ ಕೊಂಬಿನ ಹಿಡಿಕೆಯ  ಎರಡು ಚಾಕು, 4 ಆನೆಯ ಮೂರ್ತಿಗಳು ಸೀಜ್ ಮಾಡಲಾಗಿದೆ. ಆನೆಯ ಮೂರ್ತಿಯ ಮೇಲೆ ಟಿಪ್ಪು ಹುಲಿಯೊಂದಿಗೆ ಹೋರಾಡುತ್ತಿರುವ ಚಿತ್ರ ಬಿಡಿಸಲಾಗಿದೆ. ಇನ್ನೂ ಮೊಟ್ಟೆ ಆಕಾರದ 20 ಏರಾಟಿಕ್ ವರ್ಕ್ಸ್ ಕಲೆಯ ವಾತ್ಸಾಯನ ಕಾಮಸೂತ್ರದ ಚಿತ್ರಗಳು ಸೇರಿದಂತೆ ಆನೆ ದಂತದಿಂದ ಮಾಡಿರುವ ಒಟ್ಟು ಏಳೂವರೆ ಕೆ.ಜಿ.ತೂಕದ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಅಪರಾಧ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಸಿಸಿಬಿ ಪೊಲೀಸರು ಹೆಚ್ಚಿನ ತ,ನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ಮತದಾರರ ಮಾಹಿತಿ ಕಳ್ಳತನ ಆರೋಪ: ಸಿಎಂ ಬೊಮ್ಮಾಯಿ ರಾಜೀನಾಮೆಗೆ ಸುರ್ಜೇವಾಲಾ ಆಗ್ರಹ

ಆರೋಪಿಗಳು ಪತ್ತೆ ಹೇಗೆ ?

ಹವಾಲಾ ದಂಧೆ ನಡೆಯುವ ಬಗ್ಗೆ ಬಂದ ಮಾಹಿತಿ ಮೇರೆಗೆ ಎಚ್ಚೆತ್ತ ಸಿಸಿಬಿ ಅಧಿಕಾರಿಗಳು ಹಲಸೂರು ಗೇಟ್ ಬಳಿಯ ಬನ್ನಪ್ಪ ಪಾರ್ಕ್ ಬಳಿ ಕಾರ್ಯಾಚರಣೆ ನಡೆಸಿದ್ದಾರೆ‌. ಪುರಾತನ ಕಾಲದ ವಸ್ತುಗಳ ಆನೆದಂತಗಳಿಂದ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಎಸಿಪಿ ರೀನಾ ಸುವರ್ಣ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ಬಂಧಿಸಿತ್ತು. ಇನ್ನೂ ಬೆಲೆಬಾಳುವ ವಸ್ತುಗಳನ್ನ ಎಲ್ಲಿಂದ ತಂದು ಯಾರಿಗೆ ಮಾರಾಟ ಮಾಡಲು ಮುಂದಾಗಿದ್ದರು ಎಂಬುದರ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.

ಆರೋಪಿಗಳ ವಿರುದ್ಧ ಈ ಹಿಂದೆ ಕ್ರಿಮಿನಲ್‌ ಕೇಸ್ ದಾಖಲಾಗಿದೆಯಾ ಎಂಬುದನ್ನು ಹಚ್ಚಲಾಗುತ್ತಿದೆ. ವಶಪಡಿಸಿಕೊಂಡಿರುವ ವಸ್ತುಗಳು ಮೇಲ್ನೊಟಕ್ಕೆ ಮೊಘಲರ ಕಾಲದ ವಸ್ತುಗಳು ಎಂದು ಅಂದಾಜಿಸಲಾಗಿದೆ. ನಿಖರವಾಗಿ ಪತ್ತೆ ಹಚ್ಚಲು ಡೆಹ್ರಾಡೂನ್ ನಲ್ಲಿರುವ ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್  ಹಾಗೂ ಹೈದರಾಬಾದ್‌ ಗೂ  ಕಳುಹಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಾಡಿರೋದು ಮೈತ್ರಿ ಸರ್ಕಾರ - ಆರೋಪ ಮಾತ್ರ ನಮ್ಮ ಮೇಲೆ : ಸಚಿವ ಸೋಮಣ್ಣ ಕಿಡಿ

ಪತ್ತೆಯಾಗಿರುವ ಆನೆ ದಂತದಿಂದ ಮಾಡಿರುವ ವಸ್ತುಗಳು ಎಷ್ಟು ವರ್ಷ ಹಳೆಯದು ಪತ್ತೆ ಹಚ್ಚಲು ಸ್ಯಾಂಪಲ್ ಗಳನ್ನು ಕಳುಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಮರದಲ್ಲಿ ನೈಸರ್ಗಿಕವಾಗಿ ಸಿಗುವ ಅಂಬರ್ ಅಂಟಿನ ತರಹದ ವಸ್ತುವಿನಲ್ಲಿ ಚೇಳೊಂದು ಜೀವಂತ ಸಮಾಧಿಯಾಗಿದೆ.‌ಇದು ಕೂಡ ಬಲು ಅಪರೂಪ ಹಾಗೂ ಬೆಲೆಬಾಳುವ ವಸ್ತುವಾಗಿದ್ದು ಇದನ್ನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News