ಯುವಕನ ಮರ್ಮಾಂಗ ಕತ್ತರಿಸಿ ಸೆ* ವರ್ಕ್ ಗೆ ಒತ್ತಾಯ: ಮಂಗಳಮುಖಿಯರ ವಿರುದ್ಧ ಎಫ್ಐಆರ್

Crime News: 18 ವರ್ಷದ ಯುವಕನ ಮಾರ್ಮಾಂಗ ಕತ್ತರಿಸಿ ಸೆಕ್ಸ್ ವರ್ಕ್ ಮಾಡುವಂತೆ ಹಿಂಸೆ ನೀಡಿದ್ದ ಮಂಗಳಮುಖಿಯರ ಮೇಲೆ ಎಫ್ಐಆರ್ ದಾಖಲಾಗಿದೆ.  

Written by - VISHWANATH HARIHARA | Edited by - Savita M B | Last Updated : Aug 20, 2024, 01:15 PM IST
  • 18 ವರ್ಷದ ಯುವಕ ಟೀ ಶಾಪ್ ನಲ್ಲಿ ಮೂರು ವರ್ಷದಿಂದ ಕೆಲಸ ಮಾಡಿಕೊಂಡಿದ್ದ.
  • ಲಿಂಗ ಪರಿವರ್ತನೆ ಮಾಡಿಕೋ ಎಂದು ಒತ್ತಾಯಿಸಿದ್ದಾರೆ.
ಯುವಕನ ಮರ್ಮಾಂಗ ಕತ್ತರಿಸಿ ಸೆ* ವರ್ಕ್ ಗೆ ಒತ್ತಾಯ: ಮಂಗಳಮುಖಿಯರ ವಿರುದ್ಧ ಎಫ್ಐಆರ್ title=

ಬೆಂಗಳೂರು: ಚಿತ್ರಾ, ಪ್ರೀತಿ, ಕಾಜಲ್, ಅಶ್ವಿನಿ,ಮುಗಿಲಿನ್ ಎಂಬುವವರ ವಿರುದ್ಧ ಐವರ ವಿರುದ್ಧ ದೂರು ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 ವರ್ಷದ ಯುವಕ ಟೀ ಶಾಪ್ ನಲ್ಲಿ ಮೂರು ವರ್ಷದಿಂದ ಕೆಲಸ ಮಾಡಿಕೊಂಡಿದ್ದ. ಅದೇ ಟೀ ಅಂಗಡಿಗೆ ಹೋಗುತ್ತಿದ್ದ ಮಂಗಳಮುಖಿಯರ ಕಣ್ಣು ಯುವಕನ ಮೇಲೆ ಬಿದ್ದಿತ್ತು. ನಿನಗೆ ಒಳ್ಳೆ ಮನೆಯಲ್ಲಿಟ್ಟು ಹಣ ಸಂಪಾದನೆ ಮಾಡುವ ದಾರಿ ತೋರಿಸುತ್ತೇವೆ ಎಂದು ಯುವಕನನ್ನು ಪುಸಲಾಯಿಸಿದ್ದಾರೆ. ಮಂಗಳಮುಖಿಯರನ್ನು ನಂಬಿದ ಯುವಕ ಅವರ ಜೊತೆ ಹೋದಾಗ ಕೊಲೆ ಮಾಡುವುದಾಗಿ ಬೆದರಿಸಿ ಭಿಕ್ಷಾಟನೆಗೆ‌ ತಳ್ಳಿದ್ದಾರೆ. 

ಇದನ್ನೂ ಓದಿ-ಬೇಕರಿ - ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮಾರಾಟ ಮಾಡಲು ಬಿಬಿಎಂಪಿ ಬ್ರೇಕ್

ಹೀಗೆಯೇ ಮೂರು ವರ್ಷಗಳ‌ ಕಾಲ ಭಿಕ್ಷಾಟನೆ ಮಾಡಿ ಮಂಗಳಮುಖಿಯರಿಗೆ ಯುವಕ ಹಣ ತಂದು ಕೊಟ್ಟಿದ್ದಾನೆ. ಇನ್ನೂ ಹೆಚ್ಚು ಸಂಪಾದಿಸಿಬೇಕು ಎಂಬ ದುರುದ್ದೇಶಕ್ಕೆ ಬಿದ್ದ ಮಂಗಳಮುಖಿಯರು ನೀನು ಗಂಡು ಆಗಿರುವಾಗಲೇ ದಿನಕ್ಕೆ 2 ಸಾವಿರ ದುಡಿಯುತ್ತಿದ್ದೀಯಾ. ಹೆಣ್ಣಾದರೆ ಹೆಚ್ಚು ಸಂಪಾದಿಸಬಹುದು ಲಿಂಗ ಪರಿವರ್ತನೆ ಮಾಡಿಕೋ ಎಂದು ಒತ್ತಾಯಿಸಿದ್ದಾರೆ. 

ಇದಕ್ಕೆ ಯುವಕ ಒಪ್ಪದಿದ್ದಾಗ ಆತನನ್ನು ಹಿಂಸಿಸಿ ಬೆನ್ನಿಗೆ ಮತ್ತು ಬರುವ ಇಂಜೆಕ್ಷನ್ ಕೊಟ್ಟು ಯುವಕನ ಮರ್ಮಾಂಗ ಕತ್ತರಿಸಿದ್ದಾರೆ. ನಂತರ ಯುವಕನನ್ನು ದೇವರ ಬಳಿ ಕರೆದೊಯ್ದು ಪೂಜೆ ಸಲ್ಲಿಸಿ ಲೈಂಗಿಕ ಕಾರ್ಯಕರ್ತಳಾಗಿ ಕೆಲಸ ಮಾಡು ಎಂದು ಪೀಡಿಸಿದ್ದಾರೆ. ಇಷ್ಟಕ್ಕೆ ಬಿಡದೇ ಒಂದು ಲಕ್ಷ ಹಣ ಕೊಡು ಎಂದು ಯುವಕನ್ನು ಹಿಂಸಿಸಿದ್ದಾರೆ. ಇದರಿಂದ ನೊಂದ ಯುವಕ ಮಂಗಳಮುಖಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ-ಕನಿಷ್ಠ ಮೂಲ ವೇತನ 26,000 ರೂ.ಗೆ ಏರಿಕೆ ! ಪಿಂಚಣಿಯಲ್ಲಿಯೂ ದೊಡ್ಡ ಮಟ್ಟದ ಬದಲಾವಣೆ !ಈ ದಿನ ಸರ್ಕಾರದ ಅಧಿಕೃತ ಆದೇಶ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News